ನ್ಯಾಚುರಲ್ ಹಾರರ್ ಥ್ರಿಲ್ಲರ್ 'ಅವನಿ'ಗಾಗಿ ಒಂದಾದ ನಿರ್ದೇಶಕ ಗಿರಿರಾಜ್, ನಿರ್ಮಾಪಕ ಉದಯ್

ನಿರ್ಮಾಪಕ ಉದಯ್ ಕೆ ಮೆಹ್ತಾ ಮತ್ತು ಮೂರು ಬಾರಿಯ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಬಿ ಎಂ ಗಿರಿರಾಜ್ ಇಬ್ಬರೂ ನ್ಯಾಚುರಲ್ ಹಾರರ್ ಥ್ರಿಲ್ಲರ್ ಚಿತ್ರದ ಮೂಲಕ ಒಟ್ತಾಗುತ್ತಿದ್ದಾರೆ. "ಅವನಿ" ಉದಯ್  ನಟ ನಿರ್ಮಾಪಕರೂ ಆಗಿರುವ  ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟರೆಲ್ಲ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಅವನಿ
ಅವನಿ
Updated on

ನಿರ್ಮಾಪಕ ಉದಯ್ ಕೆ ಮೆಹ್ತಾ ಮತ್ತು ಮೂರು ಬಾರಿಯ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಬಿ ಎಂ ಗಿರಿರಾಜ್ ಇಬ್ಬರೂ ನ್ಯಾಚುರಲ್ ಹಾರರ್ ಥ್ರಿಲ್ಲರ್ ಚಿತ್ರದ ಮೂಲಕ ಒಟ್ತಾಗುತ್ತಿದ್ದಾರೆ. "ಅವನಿ" ಉದಯ್  ನಟ ನಿರ್ಮಾಪಕರೂ ಆಗಿರುವ  ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟರೆಲ್ಲ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೆ "ಬ್ರಹ್ಮಚಾರಿ " ಮೂಲಕ ಕಥೆಗಾರರಾಗಿ ಬದಲಾದ ನಿರ್ಮಾಪಕ ಮತ್ತೊಂದು ಕಥಾನಕವನ್ನೂ ಹೊಂದಿದ್ದು ಅದು ಸಂಪೂರ್ಣವಾಗಿ ಹುಲಿಯ ಸುತ್ತ ಸುತ್ತುತ್ತದೆ. ಉದಯ್  ಈ ಚಿತ್ರದಲ್ಲಿ ನೈಜ ಜೀವನದ ಘಟನೆಯಿಂದ ಪ್ರೇರಣೆ ಪಡೆದಿದ್ದಾರೆ.ಅದೇ ಘಟನೆಗೆ ಅವರು ಕಾಲ್ಪನಿಕ ಫ್ಯಾಂಟಸಿ ಆಯಾಮವನ್ನು ಸೇರಿಸಿದ್ದಾರೆ. ಚಿತ್ರಕಥೆ ಮತ್ತು ನಿರ್ದೇಶನವನ್ನು ಗಿರಿರಾಜ್ ಮಾಡಲಿದ್ದಾರೆ.

ಈ ಚಿತ್ರ ಹುಲಿಯೊಂದರ ಸುತ್ತ ಸುತ್ತುತ್ತದೆ. “ನಾನು ನಿರ್ಮಿಸಿದ ಕೃಷ್ಣನ್ ಲವ್ ಸ್ಟೋರಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ದಿನಗಳಿಂದ ನಿರ್ದೇಶಕ ಗಿರಿರಾಜ್ ಅವರೊಂದಿಗೆ ಸ್ನೇಹವಿದೆ. ಅವರೊಂದಿಗೆ ಚಿತ್ರವೊಂದನ್ನು ಮಾಡಲು ಅಂದಿನಿಂದ ನಾನು ಬಯಸಿದ್ದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇದು ಹೊಸ ರೀತಿಯಪ್ರಯತ್ನವಾಗಿದೆ. ಈ ಯೋಜನೆಗಾಗಿ ಅವರೊಡನೆ ಕೈಜೋಡಿಸಲು ನನಗೆ ಸಂತೋಷವಾಗಿದೆ. ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಹುಲಿಯನ್ನು  ತೋರಿಸುವುದು ದುಬಾರಿಯಾಗಿದೆ.  ಸಾರ್ವತ್ರಿಕವಾದ ವಿಷಯಕ್ಕಾಗಿ, ನಿರ್ದೇಶಕರು ನನ್ನ ಕಥಾನಕಕ್ಕೆ ಸುಂದರವಾದ ಚಿತ್ರಕಥೆಯನ್ನು ಹೊರತಂದಿದ್ದಾರೆ. ಈ ಚಿತ್ರವು ದೊಡ್ಡ ಮಹತ್ವವನ್ನು ಹೊಂದಿದೆ.  ಯಾವುದೇ ಪ್ರದೇಶ ಅಥವಾ ಭಾಷೆಗೆ ಹೊಂದಿಕೊಳ್ಳುವಂತಹುದಾಗಿದೆ." ಉದಯ್ ಹೇಳಿದ್ದಾರೆ.

ಈ ಚಿತ್ರಕ್ಕೆ ಪ್ಯಾನ್-ಇಂಡಿಯಾ ರಿಕ್ವೆಸ್ಟ್ ಮಾಡಲು ಅವರು ಯೋಜಿಸುತ್ತಿದ್ದಾರೆ.2021ರಲ್ಲಿ ಸೆಟ್ಟೇರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಉದಯ್ ಸಧ್ಯಕ್ಕೆ ನಂದ ಕಿಶೋರ್ ನಿರ್ದೇಶನದ ಧ್ರುವ ಸರ್ಜಾ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.ಧ್ರುವ  ಅವರ "ಪೊಗರು" ಚಿತ್ರ ಪೂರ್ಣವಾದ ನಂತರ ಈ ಯೋಜನೆ ತೆಗೆದುಕೊಳ್ಳಲು ಅವರು ಚಿಂತನೆ ನಡೆಸಿದ್ದಾರೆ. ಏತನ್ಮಧ್ಯೆ, ಗಿರಿರಾಜ್ ಕೂಡ ರವಿಚಂದ್ರನ್ ಅಭಿನಯದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ."ಅವನಿ ಚಿತ್ರದ ಬಗೆಗಿನ ನನ್ನ ಕಲ್ಪನೆ ಜಾಸ್ ಮತ್ತು ಅನಕೊಂಡದಂತಹ ಚಿತ್ರದಂತಿರಲಿದೆ"ಉದಯ್ ಜತೆ ಸಮರ್ಥ ತಂಡಕ್ಕಾಗಿ ಎದುರು ನೋಡುತ್ತಿರುವ ಗಿರಿರಾಜ್ ಹೇಳಿದ್ದಾರೆ. ಅವರು ಹೇಳೀದಂತೆ ಉದಯ್, ನಿರ್ಮಾಪಕರಾಗಿ, ‘ಸಿನೆಮಾದಲ್ಲಿ ಉತ್ತಮ ಹಿಡಿತ’ ಹೊಂದಿದ್ದಾರೆ ಮತ್ತು ವಿಶಿಷ್ಟವಾದ ಕಥಾಹಂದರವನ್ನು ಹೊಂದಿದ್ದಾರೆ.“ನಾವು ಅಂತಿಮವಾಗಿ ಚಿತ್ರಕಥೆಯ ಮೂರನೇ ಆವೃತ್ತಿಗೆ ಒಕೆ ಹೇಳಿದ್ದೇನೆ. ನಾನು ಮೊದಲ ಬಾರಿಗೆ ಇಂತಹಾ ಚಿತ್ರವೊಂದಕ್ಕೆ ಕೈಹಾಕಿದ್ದೇನೆ. . ಇದು ‘ನ್ಯಾಚುರಲ್-ಹಾರರ್ ಥ್ರಿಲ್ಲರ್ ಆಗಿರಲಿದೆ. ಹಾಲಿವುಡ್ ಚಲನಚಿತ್ರಗಳಾದ ಜಾಸ್ ಮತ್ತು ಅನಕೊಂಡದ ಮಾದರಿಯಲ್ಲಿ ನಾನು ಈ ಚಿತ್ರವನ್ನು ತಯಾರಿಸಲಿದ್ದೇನೆ. ”ಎಂದು ನಿರ್ದೇಶಕರು ಹೇಳುತ್ತಾರೆ.

ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಲೈವ್ ಪ್ಲೇಸ್ ಗಳಲ್ಲಿ ಕೆಲಸ ಮಾಡುವುದು ಸವಾಲಿನ ವೃತ್ತಿಯಾಗಿದೆ. "ಅವನಿ"ಯಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತದೆ ಎನ್ನುವ ನಿರ್ದೇಶಕ ಚಿತ್ರಕ್ಕೆ ಈ ಹಿಂದೆ ಬೆಲ್ ಬಾಟಮ್‌ನಲ್ಲಿ ಕೆಲಸ ಮಾಡಿದ ರಘು ನಿಡುವಲ್ಲಿ ಸಂಭಾಷಣೆ ಬರೆಯಲಿದ್ದಾರೆ ಎಂದರು.ಈ ಹಿಂದೆ ಚಾರುಲತಕ್ಕಾಗಿ  ಕೆಲಸ ಮಾಡಿದ ಬೋರ್ಡ್ ಕ್ಯಾಮೆರಾಮನ್ ಪನ್ನೀರ್ ಸೆಲ್ವಂ ಅವರನ್ನು ಈ ಚಿತ್ರದ ಛಾಯಾಗ್ರಹಣಕ್ಕಾಗಿ ನೇಮಕ ಮಾಡಲು ಚಿಂತನೆ ನಡೆದಿದೆ. ಸಂಗೀತ ನಿರ್ದೇಶಕರನ್ನು ಇನ್ನೂ ಅಂತಿಮಗೊಳಿಸಿಲ್ಲವೆಂದು ಅವರು ಬಹಿರಂಗಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com