ಸಿಂಧೂರ ಲಕ್ಷ್ಮಣನಿಗಾಗಿ ಮತ್ತೆ ಒಂದಾಗಲಿದ್ದಾರೆ ದರ್ಶನ್, ತರುಣ್ ಮತ್ತು ಉಮಾಪತಿ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಹಾಗೂ ನಿರ್ಮಾಪಕ ಉಮಾಪತಿ  ಸಿಂಧೂರ ಲಕ್ಷ್ಮಣ ಸಿನಿಮಾಗಾಗಿ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಉಮಾಪತಿ
ಉಮಾಪತಿ
Updated on

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಹಾಗೂ ನಿರ್ಮಾಪಕ ಉಮಾಪತಿ  ಸಿಂಧೂರ ಲಕ್ಷ್ಮಣ ಸಿನಿಮಾಗಾಗಿ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಸಿಂಧೂರ ಲಕ್ಷ್ಮಣ ಐತಿಹಾಸಿಕ ಸಿನಿಮಾವಾಗಿದ್ದು, ನಿರ್ಮಾಪುಕರು ಈಗಾಗಲೇ ಟೈಟಲ್ ನೋಂದಣಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಂಧೂರ ಲಕ್ಷ್ಮಣ ಈ ಮೂವರ 2ನೇ ಪ್ರಾಜೆಕ್ಟ್ ಆಗಲಿದೆ,

ಜನಪ್ರಿಯ ಬಂಡಾಯ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮತ್ತು ಬ್ರಿಟಿಷರ ವಿರುದ್ಧದ ಹೋರಾಟದ ಬಗ್ಗೆ ಚಲನಚಿತ್ರವನ್ನು ನಿರ್ಮಿಸುವ ಬಗ್ಗೆ ನಿರ್ಮಾಪಕರು ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.

ತರುಣ್ ಅವರ ತಂದೆ ಖ್ಯಾತ ಖಳನಟ ಸುಧೀರ್ ಅವರು ‘ವೀರ ಸಿಂಧೂರ ಲಕ್ಷ್ಮಣ’ ನಾಟಕದಲ್ಲಿ ಲಕ್ಷ್ಮಣನ ಪಾತ್ರವಹಿಸಿ ಖ್ಯಾತಿ ಗಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದನ್ನು ಸಿನಿಮಾ ಮಾಡುವ ಹಕ್ಕು ನಿರ್ಮಾಪಕ ಉಮಾಪತಿ ಅವರ ಬಳಿಯಿದೆ. ‘ಸಿಂಧೂರ ಲಕ್ಷ್ಮಣನ ಕಥೆಯನ್ನು ಸಿನಿಮಾ ಮಾಡಬೇಕು ನೀವು, ಆ ರೈಟ್ಸ್ ತೆಗೆದಿಟ್ಟುಕೊಳ್ಳಿ ಎಂದು ದರ್ಶನ್ ಅವರೇ ನನಗೆ ಹೇಳಿದ್ದರು. ನಾನು ಸಹ ಕಥೆ ಕೇಳಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದೇನೆ. ಮುಂದಿನ ದಿನಗಳಲ್ಲಿ ನಾನೇ ನಿರ್ಮಾಣ ಮಾಡುತ್ತೇನೆ. ಅಂತಹ ಒಬ್ಬ ವೀರನ ಕಥೆಯನ್ನು ನನ್ನ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುವುದು ಹೆಮ್ಮೆಯ ವಿಚಾರ’ ಎನ್ನುತ್ತಾರೆ ಉಮಾಪತಿ ಶ್ರೀನಿವಾಸ ಗೌಡ.

ನಟ ದರ್ಶನ್ ಅವರು ಐತಿಹಾಸಿಕ ಚಿತ್ರ 'ರಾಜವೀರ ಮದಕರಿ ನಾಯಕ'ಕ್ಕಾಗಿ ತಯಾರಿಯಲ್ಲಿದ್ದಾರೆ. ಹೀಗಾಗಿ ಸಿಂಧೂರ ಲಕ್ಷ್ಮಣ ಮತ್ತು ರಾಜವೀರ..ಕ್ಕೆ ಗ್ಯಾಪ್ ಇರಬೇಕಾಗುತ್ತದೆ. ದರ್ಶನ್ ಮತ್ತು ನಿರ್ದೇಶಕ ಮಿಲನ ಪ್ರಕಾಶ್ ಸಾರಥ್ಯದಲ್ಲಿ ಇನ್ನೊಂದು ಸಿನಿಮಾ ಮಾಡುವುದುದಾಗಿ ಈಗಾಗಲೇ ಘೋಷಣೆಯಾಗಿದೆ. ಇದೊಂದು ಪಾಲಿಟಿಕಲ್ ಥ್ರಿಲ್ಲರ್ ಆಗಿರಲಿದೆಯಂತೆ.

ನಟ ದರ್ಶನ್ ಈಗಾಗಲೇ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರದಲ್ಲಿ ದುರ್ಯೋಧನ, ರಾಜವೀರ ಮದಕರಿ ನಾಯಕದಂತಹ ಪಾತ್ರಗಳಲ್ಲಿ ಮಿಂಚುತ್ತಿರುವ ದರ್ಶನ್ ‘ಸಿಂಧೂರ ಲಕ್ಷ್ಮಣ’ನಾಗಲು ತಾವೇ ಸ್ವತಃ ಇಷ್ಟಪಟ್ಟು ನಿರ್ದೇಶಕ ತರುಣ್ ಸುಧೀರ್ ಮತ್ತು ನಿರ್ಮಾಪಕ ಉಮಾಪತಿಯವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ರಾಬರ್ಟ್‌ನತ್ತ ಮಾತ್ರ ಗಮನ ಹರಿಸುತ್ತಿದ್ದೇವೆ. ” ರಾಬರ್ಟ್ ತಯಾರಕರು ಚಿತ್ರಕ್ಕಾಗಿ ಸರಿಯಾದ ಬಿಡುಗಡೆ ದಿನಾಂಕವನ್ನು ಹುಡುಕುತ್ತಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಶೂಟಿಂಗ್ ಯಾವಾಗ ಪುನರಾರಂಭಗೊಳ್ಳುತ್ತದೆ ಮತ್ತು ಹೊಸ ಯೋಜನೆಗಳು ಯಾವಾಗ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಸಿಂಧೂರಾ ಲಕ್ಷ್ಮಣಕ್ಕಾಗಿ  ಮೂವರು ಒಟ್ಟಿಗೆ ಸಿನಿಮಾ ಮಾಡುವ ಸಂಬಂಧ  ಅಧಿಕೃತ ಪ್ರಕಟಣೆ ಪ್ರೊಡಕ್ಷನ್ ಹೌಸ್ ನಿಂದ ಹೊರ ಬರಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com