ಒಂದೇ ಶೀರ್ಷಿಕೆಯ ಎರಡು ಸಿನೆಮಾಗಳ ಶೂಟಿಂಗ್ ಪ್ರಗತಿಯಲ್ಲಿ, ಅದು 'ಕಾಗೆ ಬಂಗಾರ'

ನಿರ್ದೇಶಕ ಸೂರಿಯವರ ಕಾಗೆ ಬಂಗಾರ ರೀತಿಯಲ್ಲಿಯೇ ಮತ್ತೊಂದು ಚಿತ್ರ ತಯಾರಿಸುತ್ತಿದ್ದಾರೆ. 2015ರಲ್ಲಿ ಕೆಂಡಸಂಪಿಗೆ ಬಿಡುಗಡೆ ಸಮಯದಲ್ಲಿ ಕಾಗೆ ಬಂಗಾರ ನಿರ್ಮಿಸುವ ಬಗ್ಗೆ ಸೂರಿಯವರು ಘೋಷಣೆ ಮಾಡಿದ್ದರು.
ಸೂರಿಯವರ ಕಾಗೆ ಬಂಗಾರದ ದೃಶ್ಯ
ಸೂರಿಯವರ ಕಾಗೆ ಬಂಗಾರದ ದೃಶ್ಯ

ನಿರ್ದೇಶಕ ಸೂರಿಯವರ ಕಾಗೆ ಬಂಗಾರ ರೀತಿಯಲ್ಲಿಯೇ ಮತ್ತೊಂದು ಚಿತ್ರ ತಯಾರಿಸುತ್ತಿದ್ದಾರೆ. 2015ರಲ್ಲಿ ಕೆಂಡಸಂಪಿಗೆ ಬಿಡುಗಡೆ ಸಮಯದಲ್ಲಿ ಕಾಗೆ ಬಂಗಾರ ನಿರ್ಮಿಸುವ ಬಗ್ಗೆ ಸೂರಿಯವರು ಘೋಷಣೆ ಮಾಡಿದ್ದರು.


ಇದೀಗ ಇದೇ ಹೆಸರಿನಲ್ಲಿ ಮತ್ತೊಬ್ಬರು ಚಿತ್ರ ತಯಾರಿಸುತ್ತಿದ್ದಾರೆ. ನಿರ್ದೇಶಕ ದಿನೇಶ್ ಗೌಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇದೇ ಹೆಸರಿನಲ್ಲಿ ಚಿತ್ರವನ್ನು ದಾಖಲು ಮಾಡಿಕೊಂಡಿದ್ದು ಇದರ ಮುಹೂರ್ತ ಕಳೆದ 13ರಂದು ನಡೆದಿದೆ.
ಇದಕ್ಕೆ ಮುನೆಗೌಡ್ರು ಮತ್ತು ಬಿವಿಕೆ ಕೃಷ್ಣಪ್ಪ ಬಂಡವಾಳ ಹೂಡುತ್ತಿದ್ದು ಕೊರೋನಾ ವೈರಸ್ ನಿಂದಾಗಿ ಶೂಟಿಂಗ್ ಮುಂದೂಡಲಾಗಿದೆ. ನಿರ್ದೇಶಕರು ಹೇಳುವ ಪ್ರಕಾರ ಇದೊಂದು ಮಕ್ಕಳ ಚಿತ್ರವಾಗಿದ್ದು ಚಿತ್ರದ ಕಥೆಗೆ ಸರಿಯಾಗಿ ಕಾಗೆ ಬಂಗಾರ ಎಂದು ಹೆಸರಿಡಲಾಗಿದೆ, ಬಾಲ ಕಲಾವಿದ ಮಧುಸೂದನ್, ಬಿರಾದಾರ್, ಗುರುರಾಜ್ ಹೊಸಕೋಟೆ ಮೊದಲಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ದಿನೇಶ್ ಗೌಡ ಹೇಳಿದರು.


ಈ ಬಗ್ಗೆ ನಿರ್ದೇಶಕ ಸೂರಿ ಏನು ಹೇಳುತ್ತಾರೆ?: ಈಗಿರುವ ಪರಿಸ್ಥತಿಯೊಳಗೆ ನನಗೆ ಚಿತ್ರದ ಶೀರ್ಷಿಕೆ ಬಗ್ಗೆ ವಿರೋಧ ಮಾಡಿ ಫಿಲ್ಮ್ ಚೇಂಬರ್ ಗೆ ಹೋಗಿ ಹೋರಾಡಲು ಸಮಯವಿಲ್ಲ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದಷ್ಟೇ ಹೇಳುತ್ತೇನೆ. ನನ್ನ ಚಿತ್ರದ ಶೀರ್ಷಿಕೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಸುವ ಕೆಲಸ ನನ್ನ ಕೈಯಲ್ಲಿದೆ. ಚಿತ್ರ ಪ್ರೇಮಿಗಳು ಸೂರಿಯವರ ಕಾಗೆ ಬಂಗಾರ ಎಂದು ಗುರುತಿಸಬೇಕು. ಪ್ರೇಕ್ಷಕರು ನನ್ನ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ.ಚಿತ್ರಕ್ಕೆ 100 ಶೀರ್ಷಿಕೆ ಕೊಡುವ ಸಾಮರ್ಥ್ಯ ನನಗಿದೆ. ಹಾಗೆಂದು ಅದರ ಮೇಲೆ ಚರ್ಚೆ ಮಾಡುವಷ್ಟು ಸಮಯ ಮತ್ತು ಶಕ್ತಿ ಈಗಿಲ್ಲ. ನಾನು ಚಿತ್ರದ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.


ಇನ್ನು ದಿನೇಶ್ ಗೌಡ ಸಿನಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಚಲನಚಿತ್ರದ ಎರಡನೇ ಮಂಡಳಿಯಲ್ಲಿ ನಾವು ಕಾಗೆ ಬಂಗಾರ ಎಂದು ಶೀರ್ಷಿಕೆ ದಾಖಲು ಮಾಡಿಕೊಂಡಿದ್ದೇವೆ. ಮುಹೂರ್ತ ಸಮಯದಲ್ಲಿ ಪ್ರೊಡಕ್ಷನ್ 1 ಎಂದು ಹೇಳಿಕೊಂಡು ಆರಂಭಿಸಿದೆವು. ಅದು ನಾವು ಹಿರಿಯ ನಿರ್ದೇಶಕರಿಗೆ ನೀಡುತ್ತಿರುವ ಗೌರವವಾಗಿದೆ. ಚಿತ್ರದ ಶೂಟಿಂಗ್ ಮುಗಿದ ಮೇಲೆ ಕಾಗೆ ಬಂಗಾರ ಎಂದು ಶೀರ್ಷಿಕೆ ಉಳಿಯುತ್ತದೋ, ಇಲ್ಲವೋ ಎಂದು ನಿರ್ಧಾರವಾಗುತ್ತದೆ. ಸೆನ್ಸಾರ್ ಪ್ರಮಾಣಪತ್ರಕ್ಕೆ ಅರ್ಜಿಯನ್ನು ಯಾರು ಮೊದಲು ಸಲ್ಲಿಸುತ್ತಾರೊ ಅವರಿಗೆ ಈ ಶೀರ್ಷಿಕೆ ಹೋಗುತ್ತದೆ ಎಂದು ನಮಗೆ ಹೇಳಿದ್ದಾರೆ. ನಾವು ಚಿತ್ರತಂಡದ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com