ರಾಜ ವೀರ ಮದಕರಿಯಲ್ಲಿ ದರ್ಶನ್ ಗೆ ನಯನತಾರಾ ಜೋಡಿ?

ರಾಕ್ ಲೈನ್ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಜ ವೀರ ಮದಕರಿ ನಾಯಕ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗಿ ಕಾಲಿವುಡ್ ಸೂಪರ್ ಲೇಡಿ ನಯನತಾರಾ ಜೋಡಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 
ನಯನತಾರಾ ಮತ್ತು ದರ್ಶನ್
ನಯನತಾರಾ ಮತ್ತು ದರ್ಶನ್
Updated on

ರಾಕ್ ಲೈನ್ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಜ ವೀರ ಮದಕರಿ ನಾಯಕ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗಿ ಕಾಲಿವುಡ್ ಸೂಪರ್ ಲೇಡಿ ನಯನತಾರಾ ಜೋಡಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಸದ್ಯ ಸಿನಿಮಾ ತಂಡ ಕೇರಳದಲ್ಲಿ ಮೊದಲ ಹಂತದ ಶೂಟಿಂಗ್  ಮುಗಿಸಿದೆ.  ಮಾರ್ಚ್ ತಿಂಗಳಲ್ಲಿ ಶೂಟಿಂಗ್ ಮುಂದುವರಿಸಲು ನಿರ್ಧರಿಸಿತ್ತು. ಆದರೆ ಕರೋನಾ ಸೋಂಕಿನಿಂದಾಗಿ ಚಿತ್ರತಂಡ ಬ್ರೇಕ್ ತೆಗೆದುಕೊಂಡಿದೆ. 

ಎಲ್ಲವೂ ಅಂದುಕೊಂಡಂತಾದರೆ ನಯನತಾರ ನಾಯಕಿ ಆಗಿ ಬರುವುದು ಖಚಿತ ಎನ್ನುತ್ತಿವೆ ಮೂಲಗಳು. ಮತ್ತೊಂದೆಡೆ ಈ ಚಿತ್ರದ ಹೈದರಾಲಿ ಪಾತ್ರಕ್ಕೆ ಕಾಲಿವುಡ್‌ ನಟ ಶರತ್‌ ಕುಮಾರ್‌ ಆಯ್ಕೆ ಆಗಿದ್ದು, ಇವರ ಪಾತ್ರದ ಭಾಗದ ಚಿತ್ರೀಕರಣ ರಾಜಸ್ಥಾನದ ಅರಮನೆಗಳಲ್ಲಿ ನಡೆಯಲಿದೆ.

ಈ ಕುರಿತು ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಯಾವುದೇ ಗುಟ್ಟು ಕೊಡುತ್ತಿಲ್ಲ. ರಾಜವೀರ ಮದಕರಿ ನಾಯಕ ಚಿತ್ರಕ್ಕೆ ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ. 

ಈಗಾಗಲೇ ಒಂದು ಹಂತದ ಚಿತ್ರೀಕರಣವೂ ಮುಗಿದಿದೆ. ಈ ಹಂತದಲ್ಲಿ ನಾಯಕಿ ಆಯ್ಕೆ ಫೈನಲ್ ಮಾಡುವ ಹಂತದಲ್ಲಿದೆ ಚಿತ್ರತಂಡ. ಕನ್ನಡದ ಮಟ್ಟಿಗೆ ಇದು ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ಆಗಿದ್ದಕ್ಕೂ ಹಲವು ಕಾರಣಗಳಿವೆ.

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಸಿನಿಮಾದಲ್ಲಿ ನಟಿಸಲು ನಯನತಾರಾ ಜೊತೆ ಚರ್ಚಿಸಲಾಗಿದೆಯಂತೆ. ಅದರ ಜೊತೆಗೆ ಹಲವು ಪ್ರಮುಖ ನಾಯಕಿಯರ ಜೊತೆಗೂ ಸಮಾಲೋಚನೆ ನಡೆಸಲಾಗಿದೆ ಎನ್ನಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com