ಶಿವಣ್ಣ ಮುಂದಿನ ಸಿನಿಮಾಗೆ ರಾಮ್ ಧುಳಿಪುಡಿ ನಿರ್ದೇಶಕ

ಸಂಭಾಷಣೆ ಮತ್ತು ಚಿತ್ರಕಥೆ  ಹಾಗೂ ಕಾರ್ಯಕಾರ್ ನಿರ್ಮಾಣದ ನಂತರ ರಾಮ್ ಧುಲಿಪುಡಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ.  ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾವನ್ನು ರಾಮ್ ಧುಲಿಪುಡಿ ನಿರ್ದೇಶಿಸಲಿದ್ದಾರೆ.
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Updated on

ಸಂಭಾಷಣೆ ಮತ್ತು ಚಿತ್ರಕಥೆ  ಹಾಗೂ ಕಾರ್ಯಕಾರ್ ನಿರ್ಮಾಣದ ನಂತರ ರಾಮ್ ಧುಲಿಪುಡಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ.  ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾವನ್ನು ರಾಮ್ ಧುಲಿಪುಡಿ ನಿರ್ದೇಶಿಸಲಿದ್ದಾರೆ.

ತಾವು ನಿರ್ದೇಶಿಸುತ್ತಿರುವ ಕನ್ನಡ ಸಿನಿಮಾ ಬಗ್ಗೆ ಶೀಘ್ರದಲ್ಲೇ ಪ್ರಕಟಿಸುವುದಾಗಿ  ರಾಮ್ ತಿಳಿಸಿದ್ದಾರೆ. ಶಿವರಾಜ್ ಕುಮಾರ್ ಈ ಸಿನಿಮಾದಲ್ಲಿ ಸಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಈ ಚಿತ್ರವು ಭಾವನಾತ್ಮಕ ಪ್ರೇಮಕಥೆಯಾಗಿದ್ದು, ಕಾಶ್ಮೀರ, ಚಿಕ್ಕ ಮಗಳೂರು ಮತ್ತು ಯುಎಸ್ಎಗಳ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಸೆಪ್ಟಂಬರ್ ನಿಂದ ಶೂಟಿಂಗ್ ಆರಂಭವಾಗಲಿದ್ದು, ನಾಯಕಿಯ ಹುಡುಕಾಟದಲ್ಲಿರುವುದಾಗಿ ತಿಳಿಸಿದ್ದಾರೆ.

"20 ನಿಮಿಷಗಳ ನಿರೂಪಣೆಯಾಗಿ ಪ್ರಾರಂಭವಾಗಿ 100 ನಿಮಿಷಗಳ ಕಾಲ ಮುಂದುವರಿಯಿತು. ಶಿವಣ್ಣ ಸ್ಕ್ರಿಪ್ಟ್ ಇಷ್ಟಪಟ್ಟಿದ್ದು.  ಕೇವಲ 10 ನಿಮಿಷಗಳಲ್ಲಿ ಒಪ್ಪಿಗೆ ನೀಡಿದ್ದಾರೆ.. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಶಿವರಾಜ್‌ಕುಮಾರ್ ಸರ್ ಅವರಿಗೆ ನಾನು ಆಭಾರಿಯಾಗಿದ್ದೇನೆ ”ಎಂದು ನಿರ್ದೇಶಕರು ಹೇಳಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕನ್ನಡ ಚಿತ್ರ ಪ್ರಕೃತಿಗಾಗಿ ಕೆಲಸ ಮಾಡಿದ ರವಿ ಕುಮಾರ್ ಸನಾ ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರ. ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಮತ್ತು ನರಲಾ ಶ್ರೀನಿವಾಸ್ ರೆಡ್ಡಿ ನಿರ್ಮಿಸಿರುವ ಈ ಚಿತ್ರ ಮುಂದಿನ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com