
ಇಡೀ ಚಿತ್ರವನ್ನು ಮೊಬೈಲ್ ಟಾರ್ಚ್ ಲೈಟ್ ನಲ್ಲಿ ಸೆರೆಹಿಡಿದು ವಿಶೇಷ ಸಾಧನೆ ಮಾಡಿದ್ದಾರೆ ಧೂಮ-ದ ಕಿಲ್ಲರ್ ನಿರ್ದೇಶಕ ವೆಸ್ಲಿ ಬ್ರೌನ್.
ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಇಂದು ಯುಗಾದಿ ದಿನ ಡಿ ಬೀಟ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಛಾಯಾಚಿತ್ರಗ್ರಾಹಕರಾಗಿ ನಂತರ ನಿರ್ದೇಶಕರಾದ ವೆಸ್ಲಿ ಬ್ರೌನ್ ಅವರ ಮೊದಲ ಪ್ರಯತ್ನವಿದು.
ಮೊದಲ ಮಿಂಚು ಎಂಬ ಚಿತ್ರ ನಿರ್ದೇಶಿಸಿದ್ದ ವೆಸ್ಲಿ ಅದನ್ನು 2011ರಲ್ಲಿ 5ಡಿ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಕಡಿಮೆ ಬಜೆಟ್ ನಲ್ಲಿ ಹೊರಾಂಗಣದಲ್ಲಿ ಚಿತ್ರೀಕರಣವಾಗುತ್ತಿರುವ ನಿರ್ದೇಶಕ ಬ್ರೌನ್ ಅವರ ಮೂರನೇ ಚಿತ್ರವಿದು.
ಧೂಮ ಮಹಿಳಾ ಪ್ರಧಾನ ಚಿತ್ರ. ಇಂದಿನ ಯುವತಿಯರ ಜೀವನಶೈಲಿಯ ಕಥೆಯನ್ನೊಳಗೊಂಡ ಗಟ್ಟಿ ಸಂದೇಶ ಸಾರುವ ಚಿತ್ರ. ಇದೀಗ ಡಬ್ಬಿಂಗ್ ಹಂತದಲ್ಲಿದೆ.
Advertisement