ಶಾರುಖ್ ಅವರನ್ನು ಸಿನಿ ಜಗತ್ತಿಗೆ ಪರಿಚಯಿಸಿದ 'ಸರ್ಕಸ್' ಡಿಡಿಯಲ್ಲಿ ಮರುಪ್ರಸಾರ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೀಗ ಮತ್ತೊಮ್ಮೆ ಟಿವಿ ಪರದೆ ಮೇಲೆ ಕಾಣಿಸಿಕೊಳ್ಲುತ್ತಿದ್ದಾರೆ! ವಿಷಯವೇನೆಂದರೆ ದೂರದರ್ಶ್ನ ವಾಹಿನಿಯು ಶಾರುಖ್ ನಟನೆಯ ಜೀಜ್ ಮಿರ್ಜಾ ಅವರ 1989ರ ಪ್ರಸಿದ್ದ ಟಿವಿ ಸರಣಿ  "ಸರ್ಕಸ್"  ಅನ್ನು ಇಂದಿನಿಂದ (ಮಾರ್ಚ್ 28) ಮರುಪ್ರಸಾರ ಮಾಡುತ್ತಿದೆ.
ಶಾರುಖ್ ಅವರನ್ನು ಸಿನಿ ಜಗತ್ತಿಗೆ ಪರಿಚಯಿಸಿದ 'ಸರ್ಕಸ್' ಡಿಡಿಯಲ್ಲಿ ಮರುಪ್ರಸಾರ
ಶಾರುಖ್ ಅವರನ್ನು ಸಿನಿ ಜಗತ್ತಿಗೆ ಪರಿಚಯಿಸಿದ 'ಸರ್ಕಸ್' ಡಿಡಿಯಲ್ಲಿ ಮರುಪ್ರಸಾರ
Updated on

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೀಗ ಮತ್ತೊಮ್ಮೆ ಟಿವಿ ಪರದೆ ಮೇಲೆ ಕಾಣಿಸಿಕೊಳ್ಲುತ್ತಿದ್ದಾರೆ! ವಿಷಯವೇನೆಂದರೆ ದೂರದರ್ಶ್ನ ವಾಹಿನಿಯು ಶಾರುಖ್ ನಟನೆಯ ಜೀಜ್ ಮಿರ್ಜಾ ಅವರ 1989ರ ಪ್ರಸಿದ್ದ ಟಿವಿ ಸರಣಿ  "ಸರ್ಕಸ್"  ಅನ್ನು ಇಂದಿನಿಂದ (ಮಾರ್ಚ್ 28) ಮರುಪ್ರಸಾರ ಮಾಡುತ್ತಿದೆ.

ಡಿಡಿ ನ್ಯಾಷನಲ್‌ನಲ್ಲಿ ಶನಿವಾರ ರಾತ್ರಿ  8 ರಿಂದ ಈ ಧಾರಾವಾಹಿ ಸರಣಿ ಪ್ರಾರಂಭವಾಗುತ್ತದೆ.  ಎಂದು ದೂರದರ್ಶನ ವಕ್ತಾರರು ಹೇಳಿದ್ದಾರೆ.

"Shekharan is BACK on @DDNational! ಸ್ನೇಹಿತರೇ ಮನೆಯಲ್ಲೇಇರಿ ಮತ್ತು ನಿಮ್ಮ ನೆಚ್ಚಿನ #ಸರ್ಕಸ್ - ಟಿವಿ ಸರಣಿ (1989) ಯನ್ನು ವೀಕ್ಷಿಸಿ - ಮಾರ್ಚ್ 28 ರಿಂದ ರಾತ್ರಿ 8 ಗಂಟೆಗೆ @DDNational" ಡಿಡಿ ನ್ಯಾಷನಲ್ ವಾಹಿನಿ ಟ್ವೀಟ್ ಮಾಡಿದೆ.

ಮಿರ್ಜಾ ಮತ್ತು ಕುಂದನ್ ಶಾ ನಿರ್ದೇಶನದ "ಸರ್ಕಸ್", ಮನರಂಜನಾ ಕ್ಷೇತ್ರಕ್ಕೆ ಕಿಂಗ್ ಖಾನ್ ಶಾರುಖ್ ಪ್ರವೇಶಿಸುವಂತೆ ಮಾಡಿತ್ತು. ಇನ್ನು ಈ ಸರಣಿಯಲ್ಲಿ ರೇಣುಕಾ ಶಹಾನೆ ಮತ್ತು ನಟ-ನಿರ್ದೇಶಕ ಅಶುತೋಷ್ ಗೋವಾರಿಕರ್ ಸಹ ಅಭಿನಯಿಸಿದ್ದಾರೆ.

ಕೊರೋನಾವೈರಸ್ ಹರಡುವಿಕೆ ತಡೆಯಲು ದೇಶವು 21 ದಿನಗಳ ಲಾಕ್‌ಡೌನ್‌ಗೆ ಸಾಕ್ಷಿಯಾಗುತ್ತಿರುವ ಸಮಯದಲ್ಲಿ ಟಿವಿಯಲ್ಲಿ ಹಳೆಯ ಧಾರಾವಾಹಿಗಳು ಮರುಪ್ರಸಾರವಾಗುತ್ತಿರುವುದು ಜನರಲ್ಲಿ ಸಂತಸ ತಂದಿದೆ. ಇದಾಗಲೇ ರಮಾನಂದ ಸಾಗರ್ ನಿರ್ದೇಶನದ ಪೌರಾಣಿಕ ಧಾರಾವಾಹಿ "ರಾಮಾಯಣ" ದೂರದರ್ಶನದಲ್ಲಿ ಇಂದಿನಿಂದ ಮರುಪ್ರಸಾರ ಕಾಣುತ್ತಿದೆ.

"ಸರ್ಕಸ್" ಜೊತೆಗೆ, ರಜಿತ್ ಕಪೂರ್ ಅಭಿನಯದ ಡಿಟೆಕ್ಟಿವ್ ಡ್ರಾಮಾ "ಬ್ಯೋಂಕೇಶ್ ಭಕ್ಷಿ"ಕೂಡ ದೂರದರ್ಶನದಲ್ಲಿ ಮರುಪ್ರಸಾರ ಕಾಣುತ್ತಲಿದೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com