'ರೌಡಿ ಬೇಬಿ' ಯೊಂದಿಗೆ ನಿರ್ದೇಶಕನ ಕ್ಯಾಪ್ ಧರಿಸಿದ ರೆಡ್ಡಿ ಕೃಷ್ಣ
ರೌಡಿ ಬೇಬಿ ರೆಡ್ಡಿ ಕೃಷ್ಣ ನಿರ್ದೇಶನದ ಚೊಚ್ಚಲ ವ್ಚಿತ್ರವಾಗಿದೆ. ಜಾಹೀರಾತು, ಕಿರುಚಿತ್ರಗಳ ನಿರ್ದೇಶಕರಾದ ಇಅವರ ಪಾಲಿಗೆ ರೌಡಿ ಬೇಬಿ ಮೊದಲ ಸಿನಿಮಾ ಆಗಲಿದೆ. ಭಾನುವಾರ ಚಿತ್ರದ ಟೀಸರ್ ಅನಾವರಣವಾಗಿದ್ದು ರೋಮ್ಯಾಂಟಿಕ್ ಎಂಟರ್‌ಟೈನರ್ ನ ಫಸ್ಟ್ ಸ್ಟಿಲ್ ಗಳನ್ನು ನಿರ್ದೇಶಕರು ಪತ್ರಿಕೆ ಜತೆಗೆ ಹಂಚಿಕೊಂಡಿದ್ದಾರೆ.
ರೆಡ್ಡಿ ಕೃಷ್ಣ ಚಿತ್ರದ ನಿರ್ದೇಶನದ ಜತೆಗೆ ಚಿತ್ರಕಥೆಯನ್ನೂ ಬರೆದಿದ್ದಾರೆ.ಸ್.ಎಸ್.ರವಿಗೌಡ ಜತೆಸೇರಿ ಇದಕ್ಕೆ ಬಂಡವಾಳವನ್ನೂ ಹಾಕಿದ್ದಾರೆ.ರವಿಗೌಡ ಚಿತ್ರದ ಪ್ರಮುಖ ತಾರಾ ಪಾತ್ರದಲ್ಲಿದ್ದಾರೆ.
ನಿರ್ದೇಶಕರು ಈ ಹಿಂದೆ ಮಿ. ಮೊಮ್ಮಗ, ದಮಯಂತಿ ತಂತಹಾ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಅನುಭವಿಯಾಗಿದ್ದಾರೆ. ರೌಡಿ ಬೇಬಿ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ದಿವ್ಯಾ ರಾವ್ ಮತ್ತು ಹೀರಾ ಕೌರ್ ಆ ಎರಡು ಪಾತ್ರಗಳನ್ನು ಮಾಡುತ್ತಿದ್ದಾರೆ. ಹೀರಾ ಪಾಲಿಗಿದು ಚೊಚ್ಚಲ ಚಿತ್ರವಾಗಿದೆ. ಇನ್ನು ಮಂಗಳೂರಿನವರಾದ ದಿವ್ಯಾ ಈಗಾಗಲೇ ತೆಲುಗಿನಲ್ಲಿ ಡಿಗ್ರಿ ಕಾಲೇಜ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರೌಡಿ ಬೇಬಿ ಚಿತ್ರದಲ್ಲಿ ರಾಜ್ ಕೆಂಪೇಗೌಡ, ಅರುಣಾ ಬಲರಾಜು ಮತ್ತು ಶ್ರೀನಾಥ್ ವಸಿಷ್ಟ ಪ್ರಮುಖ ಪಾತ್ರಗಳಲ್ಲಿದ್ದಾರೆ.ಈ ಚಿತ್ರವು ಕಾಲೇಜು ಹಿನ್ನೆಲೆಯ ಕಥಾನಕ ಹೊಂದಿರುವ ಚಿತ್ರದ ಶೀರ್ಷಿಕೆ ಹದಿಹರೆಯದ ಯುವಕ, ಯುವತಿಯರ ಪಾತ್ರಗಳ ಪ್ರತಿನಿಧಿಸುತ್ತದೆ. ಚಿತ್ರ ಈಗ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದು ನಿರ್ದೇಶಕ ಸುನಿ, ಕಿರ್ನಾಯ್ ರಾಜ್ ಮತ್ತು ವಿ ನಾಗೇಂದ್ರ ಪ್ರಸಾದ್ ಅವರು ಬರೆದಿರುವ ವಿವಿಧ ಹಾಡುಗಳನ್ನು ಚಂದನ್ ಶೆಟ್ಟಿ, ಅಪೂರ್ವಾ ಶ್ರೀಧರ್, ಮಾನಸ ಹೊಳ್ಳ ಮೊದಲಾದವೌ ಹಿನ್ನೆಲೆ ಗಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. . ಅರ್ಮಾನ್ ಮೆರುಗು ಸಂಗೀತ ಸಂಯೋಜಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ