ಯಶ್ ಜತೆಗಿನ ನನ್ನ ಚಿತ್ರವಿನ್ನೂ ಸ್ಕ್ರಿಪ್ಟ್ ಹಂತದಲ್ಲಿದೆ, ತಮನ್ನಾ ನಾಯಕಿ ಎನ್ನುವುದೆಲ್ಲಾ ನಿಜವಲ್ಲ: ನಿರ್ದೇಶಕ ನರ್ತನ್

ರಾಕಿಂಗ್ ಸ್ಟಾರ್ ಯಶ್ ಜತೆಗೆ  ನಾನು ಇನ್ನೂ ಸ್ಕ್ರಿಪ್ಟ್ ಬಗ್ಗೆ ಚರ್ಚಿಸುತ್ತಿದ್ದೇವೆ, ಮತ್ತು ನಮ್ಮ ಮುಂದಿನ ಚಿತ್ರಕ್ಕೆ ನಾಯಕಿಯ ಆಯ್ಕೆ ಅಂತಿಮವಾಗಿದೆ ಎಂದು ವರದಿ ನೋಡಿ ನನಗೆ ಅಚ್ಚರಿಯಾಗಿತ್ತು ಎಂದು ನಿರ್ದೇಶಕ ನರ್ತನ್ ಹೇಳಿದ್ದಾರೆ. 
ಯಶ್
ಯಶ್
Updated on

ರಾಕಿಂಗ್ ಸ್ಟಾರ್ ಯಶ್ ಜತೆಗೆ  ನಾನು ಇನ್ನೂ ಸ್ಕ್ರಿಪ್ಟ್ ಬಗ್ಗೆ ಚರ್ಚಿಸುತ್ತಿದ್ದೇವೆ, ಮತ್ತು ನಮ್ಮ ಮುಂದಿನ ಚಿತ್ರಕ್ಕೆ ನಾಯಕಿಯ ಆಯ್ಕೆ ಅಂತಿಮವಾಗಿದೆ ಎಂದು ವರದಿ ನೋಡಿ ನನಗೆ ಅಚ್ಚರಿಯಾಗಿತ್ತು ಎಂದು ನಿರ್ದೇಶಕ ನರ್ತನ್ ಹೇಳಿದ್ದಾರೆ.

ಮುಫ್ತಿ ಚಿತ್ರದ ನಿರ್ದೇಸಕ ನರ್ತನ್ ತಮ್ಮ ಮುಂದಿನ ಚಿತ್ರವನ್ನು ಯಶ್ ಜತೆ ಮಾಡುತ್ತಿದ್ದು ಈ ಚಿತ್ರದಲ್ಲಿ ಯಶ್ ಗೆ ಜೋಡಿಯಾಗಿ ತಮನ್ನಾ ಭಾಟಿಯಾ ನಟಿಸಲಿದ್ದಾರೆ ಎನ್ನುವ ವರದಿಗಳ ಕುರಿತು ಅವರು ಮಾತನಾಡಿದ್ದಾರೆ.

ಬಾಲಿವುಡ್‌ನಲ್ಲೂ ಸಹ ಛಾಪು ಮೂಡಿಸಿದ ನಾಯಕಿ ತಮನ್ನಾ ಡ ಚಿತ್ರಗಳಲ್ಲಿ ಎರಡು ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು.ನಿಖಿಲ್ ಕುಮಾರ್ ಅವರ ಚೊಚ್ಚಲ ಚಿತ್ರವಾದ ಜಾಗ್ವಾರ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್-1 ಚಿತ್ರದ ಹಾಡಿನಲ್ಲಿ ಅವರ ಅಭಿನಯವಿದೆ. ಆದರೆ, ಅವರು ಇನ್ನೂ ಸ್ಯಾಂಡಲ್‌ವುಡ್‌ ನಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಲ್ಲ. “ಲಾಕ್‌ಡೌನ್ ಸಮಯದಲ್ಲಿ ಈ ರೀತಿಯ ಸುದ್ದಿಗಳು ಹೇಗೆ ಪಾಪ್ ಅಪ್ ಆಗುತ್ತವೆ ಎಂದು ನನಗೆ  ಅರಿವಿಲ್ಲ. ನಾವು ನಮ್ಮ ಮನೆಯಲ್ಲೇ ಇದ್ದು ದೂರವಾಣಿ ಮೂಲಕ ಮಾತ್ರ ಒಬ್ಬರೊಡನೆ ಸಂವಹನವನ್ನು ನಡೆಸುತ್ತೇವೆ. ಥೆಯನ್ನು ವಿವರವಾಗಿ ಚರ್ಚಿಸಲು ಮತ್ತು ಚಿತ್ರದ ಮುಂದಿನ ಕೆಲಸದ ಕುರಿತು ನಿರ್ಧಾರ ತಳೆಯಲು ನಾನು ಇನ್ನೂ ಯಶ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ. ಅವರೊಡನೆ ಮಾಡಬೇಕೆಂದಿರುವ ಚಿತ್ರ ಇನ್ನೂ ಸ್ಕ್ರಿಪ್ಟ್ ಚರ್ಚಾ ಮಟ್ಟದಲ್ಲಿದೆ" ನರ್ತನ್ ಹೇಳಿದ್ದಾರೆ.

ಯಶ್ ಪ್ರಸ್ತುತ ಕೆಜಿಎಫ್ ಚಾಪ್ಟರ್  2 ಅನ್ನು ಪೂರ್ಣಗೊಳಿಸುವತ್ತ ಗಮನ ಹರಿಸಿದ್ದಾರೆ. ಈ ಚಿತ್ರವು ಪ್ರಶಾಂತ್ ನೀಲ್ ನಿರ್ದೇಶನದಲ್ಲಿದ್ದು  ಅಕ್ಟೋಬರ್ 23ಕ್ಕೆ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ತಯಾರಾಗುತ್ತಿದೆ. ಚಿತ್ರಕ್ಕೆ ಇನ್ನು 25 ದಿನಗಳ ಶೂಟಿಂಗ್‌ ಮಾತ್ರ ಬಾಕಿ ಇದೆ. ಇದರಲ್ಲಿ ಫೈಟ್ ಸೀಕ್ವೆನ್ಸ್ ಮತ್ತು ಕೆಲವು ಟಾಕಿ ಭಾಗಗಳು ಆಗಬೇಕಿದೆ.

ಪ್ಯಾನ್-ಇಂಡಿಯಾ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿನಾಯಕಿಯಾಗಿದ್ದು ಬಾಲಿವುಡ್ ನಟರಾದ ಸಂಜಯ್ ದತ್ ವಿಲನ್ ಆಗಿದ್ದಾರೆ.ವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇತ್ತ ನರ್ತನ್ ಶಿವರಾಜ್‌ಕುಮಾರ್  ಅವರಿಗಾಗಿ  ಭೈರತಿ ರಣಗಲ್  ಎಂಬ ಚಿತ್ರ ನಿರ್ದೇಶನಕ್ಕೆ ತೊಡಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com