ವಿನಯ್ ರಾಜ್‌ಕುಮಾರ್
ವಿನಯ್ ರಾಜ್‌ಕುಮಾರ್

ಕಲಾವಿದರಿಗೆ 'ವರ್ಕ್ ಫ್ರಂ ಹೋಂ' ಸೌಲಭ್ಯದ ಅವಕಾಶವಿಲ್ಲ: ವಿನಯ್ ರಾಜ್‌ಕುಮಾರ್

ವರನಟ ಡಾ. ರಾಜ್ ಕುಮಾರ ಅವರ ವಂಶದ ಕುಡಿ, ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ಅವರ ಮುಂದಿನ ಚಿತ್ರ "ಗ್ರಾಮಾಯಣ" ಟೀಸರ್ ಹಾಗೂ ಪೋಸ್ಟರ್ ಇಂದು ಅನಾವರಣವಾಗಲಿದೆ. ಅಲ್ಲಫ಼್ದೆ 10 ಎಂಬ ಇನ್ನೊಂದು ಚಿತ್ರವೂ ಸಹ ಇಂದೇ ಪೋಸ್ಟರ್ ರಿವೀಲ್ ಮಾಡುತ್ತಿದೆ.
Published on

ವರನಟ ಡಾ. ರಾಜ್ ಕುಮಾರ ಅವರ ವಂಶದ ಕುಡಿ, ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ಅವರ ಮುಂದಿನ ಚಿತ್ರ "ಗ್ರಾಮಾಯಣ" ಟೀಸರ್ ಹಾಗೂ ಪೋಸ್ಟರ್ ಇಂದು ಅನಾವರಣವಾಗಲಿದೆ. ಅಲ್ಲಫ಼್ದೆ 10 ಎಂಬ ಇನ್ನೊಂದು ಚಿತ್ರವೂ ಸಹ ಇಂದೇ ಪೋಸ್ಟರ್ ರಿವೀಲ್ ಮಾಡುತ್ತಿದೆ. ದೇವನೂರು ಚಂದ್ರು ಅವರೊಡನೆ ಕೆಲಸ ಮಾಡಿದ್ದ ಛಾಯಾಗ್ರಾಹಕ ಕರ್ಮ್ ಚಾವ್ಲಾ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ.

ಎಂದಿಗೂ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಲಲು ಬಯಸುವ ನಟ ವಿನಯ್ ಲಾಕ್‌ಡೌನ್ ತನಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡಿ;ಲ್ಲ ಎಂದಿದ್ದಾರೆ.ಈ ಬಿಕ್ಕಟ್ಟು ನಟನಿಗೆ ಸಾಕಷ್ಟು ಜೀವನ ಕೌಶಲ್ಯಗಳನ್ನು ಕಲಿಯಲು ಅವಕಾಶಕೊಟ್ಟಿದೆಯಂತೆ. 

ಕಲಾವಿದರಿಗೆ ವರ್ಕ್ ಫ್ರಂ ಹೋಂ ಸೌಲಭ್ಯಬಿರಲ್ಲ ಎನ್ನುವ ವಿನಯ್ “ನಟರಾಗಿ, ನಮ್ಮ  ಕೆಲಸದ ಜಾಗದಲ್ಲಿ  ಮಾತ್ರ ಇರಬೇಕು. ಚಲನಚಿತ್ರದ ಚಿತ್ರೀಕರಣದ ನಂತರ ಬಹಳಷ್ಟು  ಇಂಡೋರ್ ಥಿಂಗ್ಸ್ ಗಳು ಸಂಭವಿಸಬಹುದು ಆದರೆ ಹೊರಾಂಗಣ ಚಿತ್ರೀಕರಣವೇ ಮುಖ್ಯ”ಎಂದು ವಿನಯ್ ಹೇಳುತ್ತಾರೆ, ಒಬ್ಬ ನಟನಿಗೆ, ತನ್ನ ಲುಕ್ ಅನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಹಾಗೆಯೇ ಚಿತ್ರಕ್ಕೆ ತಕ್ಕಂತೆ ಫಿಟ್ ನೆಸ್ ಕಾಪಾಡಿಕೊಳ್ಳುವುದು ಸಹ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

"ನಾವು ಚಿತ್ರಕ್ಕಾಗಿ ಒಂದು ನಿರ್ದಿಷ್ಟ ಗೆಟಪ್ ನಲ್ಲಿರಬೇಕಾದರೆ ಅದು ಅರ್ಧದಷ್ಟು ಕೆಲಸವಾಗಿರುತ್ತದೆ. ನಾವು ಶೂಟಿಂಗ್ ಅನ್ನು ಪುನರಾರಂಭಿಸುವವರೆಗೆ ನಾವು ಆ  ಲುಕ್ ಅನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಅದು ಈಗ 3-4 ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಹಾಗಾಗಿ ಗ್ರಾಮಾಯಣದ ಲುಕ್ ಅನ್ನು ನಾನು ಹಾಗೆಯೇ ಕಾಪಾಡಿಕೊಳ್ಲಬೇಕು.ಲಾಕ್‌ಡೌನ್ ಮುಗಿದ ನಂತರ  ಶೂಟಿಂಗ್‌ಗೆ ಅನುಮತಿ ನೀಡಲಾಗುತ್ತದೆ, ” ಗ್ರಾಮಾಯಣವನ್ನು ಗ್ರಾಮದ ಹಿನ್ನೆಲೆಯಲ್ಲಿ ತೋರಿಸಲಾಗಿದೆ. ತಂಡವು 50 ಪ್ರತಿಶತದಷ್ಟು ಶೂಟಿಂಗ್ ಪೂರ್ಣಗೊಳಿಸಿದೆ, ಇದು ದೇವನೂರು ಸುತ್ತಮುತ್ತಲಿನ ಸ್ಥಳಗಳಲ್ಲಿ ಶೂಟಿಂಗ್ ನಡೆಸಿತ್ತು.ಪೂರ್ಣಚಂದ್ರ ತೇಜಸ್ವಿ ಸಂಗೀತ ಮತ್ತು ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣ  ಹೊಂದಿರುವ ಈ ಚಿತ್ರದಲ್ಲಿ ವಿನಯ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಏತನ್ಮಧ್ಯೆ, ನಟ 10 ಚಿತ್ರದ  ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಪುಷ್ಕರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಾಡಿದ ಸ್ಪೋರ್ಟ್ಸ್ ಡ್ರಾಮಾ ಇದಾಗಿದ್ದು ಇದೆರಡೂ ಚಿತ್ರವಲ್ಲದೆ ನಟ ನಿರ್ದೇಶಕ ರಘು ವರ್ಧನ್ ಅವರ ಯುವಕೇಸರಿ ಎಂಬ ಚಿತ್ರದಲ್ಲಿ ನಟಿಸಲು ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.ಕಮರ್ಷಿಯಲ್ ಎಂಟರ್ಟೈನರ್ ಎಂದು ಹೇಳಲಾಗುವ ಈ ಚಿತ್ರ ಪ್ರಸ್ತುತ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ, ಮತ್ತು ವಿನಯ್ ಗ್ರಾಮಾಯಣವನ್ನು ಪೂರ್ಣಗೊಳಿಸಿದ ನಂತರ ಪ್ಲೋರ್ ಗೆ ಬರಲಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com