ಕನ್ನಡದಲ್ಲಿಯೂ ಉತ್ತಮ ಅವಕಾಶ ದೊರಕುವ ಖಾತ್ರಿ ನನಗಿದೆ: ನಭಾ ನಟೇಶ್

ಸ್ಯಾಂಡಲ್‌ವುಡ್‌ನ ಪಟಾಕ ಗರ್ಲ್ ನಭಾ ನಟೇಶ್ ಪಾಲಿಗೆ ತೆಲುಗಿನ ಐಸ್ಮಾರ್ಟ್ ಶಂಕರ್ ಚಿತ್ರ ವೃತ್ತಿಬದುಕಿನಲ್ಲಿ ಮಹತ್ವದ ತಿರುವು ದೊರಕಿಸಿದೆ. ಈಗ, ಎರಡು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ವಜ್ರಕಾಯದ ಬೆಡಗಿ ತನ್ನ ಯಶಸ್ಸಿನ ಬಗ್ಗೆ ಖುಷಿಯಾಗಿದ್ದಾರೆ.
ನಭಾ ನಟೇಶ್
ನಭಾ ನಟೇಶ್

ಸ್ಯಾಂಡಲ್‌ವುಡ್‌ನ ಪಟಾಕ ಗರ್ಲ್ ನಭಾ ನಟೇಶ್ ಪಾಲಿಗೆ ತೆಲುಗಿನ ಐಸ್ಮಾರ್ಟ್ ಶಂಕರ್ ಚಿತ್ರ ವೃತ್ತಿಬದುಕಿನಲ್ಲಿ ಮಹತ್ವದ ತಿರುವು ದೊರಕಿಸಿದೆ. ಈಗ, ಎರಡು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ವಜ್ರಕಾಯದ ಬೆಡಗಿ ತನ್ನ ಯಶಸ್ಸಿನ ಬಗ್ಗೆ ಖುಷಿಯಾಗಿದ್ದಾರೆ.

ನಿರ್ದೇಶಕ ಸುಬ್ಬು ಅವರ ಸೊಲೊ ಬ್ರಾತುಕೆ ಸೋ ಬೆಟರ್ ಚಿತ್ರದಲ್ಲಿ ಸಾಯಿ ಧರಮ್ ತೇಜ್ ಜತೆಯಾಗಿ ನಟಿಸಿರುವ ನಭಾ ಜೊತೆಗೆ, ಸಂತೋಷ್ ಶ್ರೀನಿವಾಸ್ ನಿರ್ದೇಶನದ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್’ ಅವರ ಅಲ್ಲುಡು ಅರಸ್ ಚಿತ್ರದಲ್ಲಿ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಎರಡೂ ಚಿತ್ರಗಳು ಈ ಮೇ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಾಗಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಯೋಜನೆಯನ್ನು ಮುಂದೂಡುವಂತೆ ಮಾಡಿದೆ.

ಪ್ರಸ್ತುತ ಬೆಂಗಳೂರಿನಲ್ಲಿರುವ ನಭಾ, ತಾನು ಕೆಲಸಕ್ಕೆ ಮರಳಲು ಕಾಯುತ್ತಿದ್ದೇನೆ ಆದರೆ ಅದೇ ಸಮಯದಲ್ಲಿ ಕೆಲಸಕ್ಕಿಂತ ದೊಡ್ಡ ಸಮಸ್ಯೆಗಳಿವೆ ಎನ್ನುವುದೂ ಸಹ ಗೊತ್ತಿದೆ ಎನ್ನುತ್ತಿದ್ದಾರೆ. "ಮೊದಲ ಎರಡು ವಾರ ನಾನು ಸಂತೋಷವಾಗಿದ್ದೆ. ಏಕೆಂದರೆ ನಾನು ಒಂದು ದಿನ ರಜೆ ಪಡೆದಿರಲಿಲ್ಲ. ಕಳೆದ ನಾಲ್ಕು ತಿಂಗಳಿನಿಂದಲೂ ಸತತ ಕೆಲಸದಲ್ಲಿ ನಿರತಳಾಗಿದ್ದೆ. ಆರಂಭದಲ್ಲಿ ನನಗೆ ಒಂದು ರೀತಿಯ ರಜಾದಿನದ ಫೀಲಿಂಗ್ ಇತ್ತು. ಈಗ ಕ್ರಮೇಣ ನನ್ನ ಮನಸಿಗೆ ಬೇಸರ ಆವರಿಸುತ್ತಿದೆ. ಆದರೆ ಕೊರೋನಾವೈರಸ್ ಇಡೀ ಜಗತ್ತನ್ನು ಆವರಿಸಿದೆ. ಮುಂದೆ ಏನಾಗಲಿದೆ ಎಂದು ಜಗತ್ತಿನಾದ್ಯಂತ ಎಲ್ಲರೂ ಕಾಯುತ್ತಿದ್ದಾರೆ. ಚಲನಚಿತ್ರಗಳ ವಿಷಯಕ್ಕೆ ಬಂದರೆ, ಎಲ್ಲವೂ ಚೆನ್ನಾಗಿರುತ್ತದೆ ಎಂದು ನನಗೆ ವಿಶ್ವಾಸವಿದೆ. ಜನರು ಮನೆ ಬಿಟ್ಟು ಹೊರಬರಲು ಕಾಯುತ್ತಿದ್ದಾರೆ. ಚಿತ್ರಮಂದಿರಗಳಿಗೆ ಧಾವಿಸಲು ಬಯಸುತ್ತಾರೆ" ನಟಿ ಹೇಳಿದ್ದಾರೆ.

ಏತನ್ಮಧ್ಯೆ ನಭಾ ಯಾವುದೇ ಸ್ಕ್ರಿಪ್ಟ್ ಗಳನ್ನು ಓದಿಲ್ಲ, ಮತ್ತು ಆಕೆಯನ್ನು  ಸಂಪರ್ಕಿಸುವ ಚಲನಚಿತ್ರ ನಿರ್ಮಾಪಕರು ತಮ್ಮ ಯೋಜನೆಗಳನ್ನು ಹೇಳಲು ಬಯಸಿದ್ದರೂ ನಾನು ಸಾರಾಂಶವನ್ನು ಕೇಳುತ್ತೇನೆ. ಆದರೆ ಹಾಗೆ ನಾನು ಕೇಳುವ ಮುನ್ನ ಸಾಮಾನ್ಯ ಸ್ಥಿತಿ ಮರಳುವುದು ಮುಖ್ಯವಾಗಿದೆ ಎನ್ನುತ್ತಾರೆ. ಈಗ ತೆಲುಗಿನಲ್ಲಿ ಛಾಪು ಮೂಡಿಸಿರುವ ಕಬ್ಬಡದ ಕುವರಿ ಶೀಘ್ರವೇ ತಮಿಳಿಗೆ ಪಾದಾರ್ಪಣೆ ಮಾಡುವ ಸುಳಿವು ನೀಡಿದ್ದಾರೆ. “ನನಗೆ ಸಾಕಷ್ಟು ತಮಿಳು ಚಿತ್ರಗಳ  ಆಫರ್ ಸಿಗುತ್ತಿದೆ. ಆದರೆ ನಾನು ಸರಿಯಾದ ಪಾತ್ರ ಹಾಗೂ ಕಥೆಗಾಗಿ ಕಾಯುತ್ತಿದ್ದೇನೆ. ಯಾವುದನ್ನು ಆರಿಸಬೇಕೆಂಬುದನ್ನು ಕಂಡುಕೊಳ್ಳುತ್ತೇನೆ. ಇಂದು, ಚಲನಚಿತ್ರೋದ್ಯಮಗಳು ಪರಸ್ಪರ ಸಂಬಂಧ ಹೊಂದಿವೆ, ಮತ್ತು ದಕ್ಷಿಣದ ಚಿತ್ರೋದ್ಯಮ ಒಂದೇ ಆಗಿದೆ. ನೀವು ಒಂದು ಭಾಷೆಯಲ್ಲಿ ಏನು ಮಾಡುತ್ತೀರಿ ಎಂಬುದು ಇನ್ನೊಂದು ಭಾಷೆಯಲ್ಲಿ ಸಹ ಪ್ರತಿಫಲಿಸಲಿದೆ. ಅದಕ್ಕಾಗಿಯೇ ತಮಿಳು ಚಿತ್ರರಂಗದಲ್ಲಿ ನನ್ನನ್ನು ಸರಿಯಾದ ಜಾಗದಲ್ಲಿರಿಸಿಕೊಳ್ಳಲು ಸರಿಯಾದ ಸ್ಕ್ರಿಪ್ಟ್ ಆಯ್ಕೆ ಮಾಡಲು ನಾನು ಸಮಯ ತೆಗೆದುಕೊಳ್ಳುತ್ತಿದ್ದೇನೆ” ಎಂದು ಅವರು ಹೇಳುತ್ತಾರೆ.

ಮನೋರಂಜನ್ ಅಭಿನಯದ ಸಾಹೇಬ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಭಾ ಸುಮಾರು ನಾಲ್ಕು ವರ್ಷಗಳಿಂದ ಕನ್ನಡ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿಲ್ಲ."ನಾನು ಕನ್ನಡದಲ್ಲಿ ಹೆಚ್ಚು ಚಿತ್ರ ಮಾಡಿಲ್ಲ, ಎನ್ನಲು ನನಗೆ ಬೇಸರವಾಗಿದೆ. ಇಲ್ಲಿನ ಚಲನಚಿತ್ರ ನಿರ್ಮಾಪಕರು ನನ್ನನ್ನು ತೆರೆಯಮೇಲೆ ತರುವ ಬಗ್ಗೆ ಏಕೆ ಯೋಚಿಸುತ್ತಿಲ್ಲ ಎಂದು ನನಗೆ ತಿಳಿದಿಲ್ಲ, ”

“ನಾನು ಪ್ರಾಜೆಕ್ಟ್ ಬಗ್ಗೆ ಆಸಕ್ತಿ ತಾಳುವವರೆಗೆ ಹಣಕಾಸಿನ ಚರ್ಚೆ ನಡೆಸುವುದಿಲ್ಲ. ಯಾವುದೇ ಭಾಷೆಯ ವಿಷಯದಲ್ಲೂ ನನ್ನ ನಿಯಮ ಇದೇ ಆಗಿದೆ. ನನ್ನ ಬೆಲೆ ಕೇಳುವ ಮೂಲಕ ಯಾವುದೇ ನಿರ್ಮಾಪಕರು ಸಹ ಮಾತಿಗೆ ಆರಂಭಿಸುವುದಿಲ್ಲ.  ನಾನು ಹಾಗೆ ವ್ಯವಹರಿಸುವುದಿಲ್ಲ. ನಾನು ಮೊದಲು ಕಥೆಯ ವಿವರಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತೇನೆ, ಮತ್ತು ಎಲ್ಲವೂ ಕಾರ್ಯರೂಪಕ್ಕೆ ಬಂದರೆ, ಹಣದ ಮಾತುಕತೆ ಪ್ರಾರಂಭವಾಗುತ್ತದೆ. ನನ್ನ ಜ್ಞಾನದಲ್ಲಿ, ಇತ್ತೀಚಿನ ದಿನಗಳಲ್ಲಿ ನಾನು ಹೆಚ್ಚಿನ ಹಣ ಕೇಳಿಲ್ಲ. ತೆಲುಗಿನಲ್ಲಿ ನಾನು ವಿಧಿಸುವ ಮೊತ್ತವು ಆ ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ ಮತ್ತು ಅಲ್ಲಿನ ನನ್ನ ಯಶಸ್ಸಿಗೆ. ನನ್ನ ಚಿತ್ರ ನಿರ್ಮಾಪಕರು ಯಾರು ಸಮೀಪಿಸುತ್ತಿದ್ದಾರೆ ಮತ್ತು ನನ್ನ ಪರವಾಗಿ ಸಂಭಾವನೆ ಪಡೆಯುವ ಬಗ್ಗೆ ಯಾರು ಮಾತುಕತೆ ನಡೆಸುತ್ತಿದ್ದಾರೆ ಎಂಬುದು ನನಗೆ ಸಂಪೂರ್ಣವಾಗಿ ತಿಳಿದಿಲ್ಲ. ನಾನು ಪ್ರಾಜೆಕ್ಟ್ ಬಗ್ಗೆ ಉತ್ಸುಕನಾಗಿದ್ದರೆ ನಾನು ಆ ಮೊದಲ ಹೆಜ್ಜೆ ಇಡುತ್ತೇನೆ. ಎಲ್ಲವನ್ನೂ ಕಮರ್ಷಿಯಲ್ ಆಗಿ ನೋಡುವುದು ಸರಿಯಲ್ಲ" ಸಂಭಾವನೆ ವಿಚಾರವಾಗಿ ನಭಾ ಅವರ ಮಾತುಗಳಿದು.

“ನಾನು ಕನ್ನಡ ಉದ್ಯಮದ ಬಹಳಷ್ಟು ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ನಾನು ಕನ್ನಡ ಸಿನೆಮಾದಲ್ಲಿ ಜನರ ಬಗ್ಗೆ ಕೇಳಿದ್ದೇನೆ, ನಾನು ಕನ್ನಡ ಚಲನಚಿತ್ರಗಳನ್ನು ಮಾಡಲು ಆಸಕ್ತಿ ಹೊಂದಿ ಎನ್ನುವುದೆಲ್ಲಾ ಕೇವಲ ಊಹೆಗಳು ಮಾತ್ರ. 

“ರಂಗಭೂಮಿ ಹಿನ್ನೆಲೆಯಿಂದ ಬಂದ ನಾನು ಯಾವಾಗಲೂ ಉತ್ತಮ ಪಾತ್ರಕ್ಕಾಗಿ ಎದುರು ನೋಡುತ್ತೇನೆ.  ನಾನು ಪಡೆಯುತ್ತಿರುವ ಟಾಪಿಕ್ ನನಗೆ ಕೆಲಸ ನೀಡುತ್ತಿದೆ. ನನಗೆ ಇದುವರೆಗೆ ಯಾರ ಬಗ್ಗೆ ದೂರುಗಳನ್ನು ಹೇಳಬೇಕಾಗಿ ಬಂದಿಲ್ಲ. ಕನ್ನಡದಲ್ಲೂ ನನಗೆ ಉತ್ತಮ ಟಾಪಿಕ್ ಸಿಕ್ಕಲಿದೆ ಎಂದು ಖಾತ್ರಿಯಿದೆ, ”ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com