7.2 ಮಿಲಿಯನ್ ಫಾಲೋವರ್ಸ್ ಗಳ ಹೃದಯಕ್ಕೆ ಕೊಳ್ಳಿ ಇಟ್ಟ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್!

ಮಲಯಾಳಂ ನಟಿ ಹಾಗೂ  ಇಂಟರ್‌ನೆಟ್‌ನ ಸೆನ್ಶೇಷನಲ್ ವಿಂಕ್ ಗರ್ಲ್ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ 7.2 ಮಿಲಿಯನ್ ಫಾಲೋವರ್ಸ್ ಗಳ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ! ನಟಿ ಪ್ರಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನ ಡಿಸೆಬಲ್ ಮಾಡಿದ್ದಾರೆ. 
ವಿಂಕ್ ಕ್ವೀನ್ ಪ್ರಿಯಾ ಪ್ರಕಾಶ್ ವಾರಿಯರ್
ವಿಂಕ್ ಕ್ವೀನ್ ಪ್ರಿಯಾ ಪ್ರಕಾಶ್ ವಾರಿಯರ್
Updated on

ಮಲಯಾಳಂ ನಟಿ ಹಾಗೂ  ಇಂಟರ್‌ನೆಟ್‌ನ ಸೆನ್ಶೇಷನಲ್ ವಿಂಕ್ ಗರ್ಲ್ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ 7.2 ಮಿಲಿಯನ್ ಫಾಲೋವರ್ಸ್ ಗಳ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ! ನಟಿ ಪ್ರಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನ ಡಿಸೆಬಲ್ ಮಾಡಿದ್ದಾರೆ.

ಹೆಚ್ಚುತ್ತಿರುವ ಆನ್‌ಲೈನ್ ನಿಂದನೆ ಮತ್ತು ಟ್ರೋಲ್‌ಗಳಿಂದಾಗಿ ಬೇಸರಗೊಂಡ ಪ್ರಿಯಾ ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಲಾಗುತ್ತಿದೆ. ಆದರೆ ನಟಿ ಪ್ರಿಯಾ ಮಾತ್ರ ಇದ್ಯುವರೆಗೆ ತಾವು ಇನ್‌ಸ್ಟಾಗ್ರಾಮ್ ನಿಂದ ದೂರವಾಗಲು ಯಾವುದೇ ನಿರ್ದಿಷ್ಟ ಕಾರಣ ನೀಡಿ;ಲ್ಲ. ಷ್ಟವಾಗಿ, ಅವರು ಸೋಶಿಯಲ್ ಮೀಡಿಯಾದಿಂದ ಸ್ವಲ ವಿರಾಮ ತೆಗೆದುಕೊಂಡಿದ್ದಾರೆಮತ್ತು ಅವರಾಗಿ ಬಯಸಿದಾಗ ಮತ್ತೆ ಸಕ್ರಿಯವಾಗುತ್ತಾರೆ ಎಂದು ಅವರ ಸಮೀಪವರ್ತಿಗಳು ಹೇಳಿದ್ದಾರೆ.

ಇನ್ಸ್ಟಾಗ್ರಾಮ್ ತೊರೆಯುವ ಅವರ ಹಠಾತ್ ನಿರ್ಧಾರವು ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆ ತಂದಿದೆ. ಸಧ್ಯ ಅವರ ಸಕ್ರಿಯ ಫೇಸ್ಬುಕ್ ಮತ್ತು ಟಿಕ್ ಟಾಕ್ ಕಾತೆಗಳು ಅಪ್ ಡೇಟ್ ಆಗುತ್ತಿದೆ. ಇನ್ಸ್ಟಾಗ್ರಾಂ ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಅನ್ನು ತಲುಪಿದ ಭಾರತೀಯ ಸೆಲೆಬ್ರಿಟಿಗಳಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಸಹ ಒಬ್ಬರು. ಮತ್ತು ಅವರು ರಾತ್ರೋರಾತ್ರಿ ತಮ್ಮ ಕಣ್ಸನ್ನೆಯಿಂದಾಗಿ ಖ್ಯಾತರಾದವರು. ತನ್ನ ಚೊಚ್ಚಲ ಮೊಲಿವುಡ್ ಚಿತ್ರ ಒರು ಅಡಾರ್ ಲವ್  ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ’ ವಿಡಿಯೋ ವೈರಲ್ ಆದ ನಂತರ ಪ್ರಿಯಾ ಜನಪ್ರಿಯರಾದರು. ಹಾಡಿನಲ್ಲಿ, ಪ್ರಿಯಾ ತನ್ನ ತೆರೆಯ ಮೇಲಿನ ಪ್ರೇಮಿಯತ್ತ ಕಣ್ಣು ಹೊಡೆಯುತ್ತಾ ಈ ಕಣ್ಸನ್ನೆಯ ಅರ್ಥವನ್ನು ಮರು ವ್ಯಾಖ್ಯಾನಿಸಲು ಕಾರಣವಾಗಿದ್ದರು.ಈ ದೃಶ್ಯ ಹಾಗೂ ಅವರ ವಿಂಕ್ ಗಳು ಅವರನ್ನು ರಾತ್ರೋರಾತ್ರಿ ಪ್ರಖ್ಯಾತರಾಗುವಂತೆ ಮಾಡಿದೆ.

ಏತನ್ಮಧ್ಯೆ, ಪ್ರಿಯಾ ತಾವು ಬಾಲಿವುಡ್ ನಲ್ಲಿ ಎರಡು ಚಿತ್ರಗಳ ಆಫರ್ ಹೊಂದಿದ್ದಾರೆ.ಶ್ರೀದೇವಿ ಬಂಗಲೋ ಹಾಗೂ ಲವ್ ಹ್ಯಾಕರ್ಸ್ನಲ್ಲಿ ಅವರು ಕಾಣಿಸಿಕೊಳ್ಲುತ್ತಿದ್ದಾರೆ. ಇದಲ್ಲದೆ ವಿಷ್ಣುಪ್ರಿಯ ಚಿತ್ರದೊಡನೆ ಅವರು ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ.ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಮಂಜು ನಾಯಕನಾಗಿರುವ ಈ ಚಿತ್ರದಲ್ಲಿ ಅವರು ಪ್ರಧಾನ ನಾಯಕಿಯಾಗಿ ತೆರೆಗೆ ಬರುತ್ತಿದ್ದಾರೆ.ತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಮಲಯಾಳಂ ನಿರ್ದೇಶಕ ವಿ.ಕೆ.ಪ್ರಕಾಶ್ ಅವರ ನೇತೃತ್ವದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ತಂಡದೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. "ಅಂತಹ ಅದ್ಭುತ ತಂಡದ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ" ಎಂದು ನಟಿ ತನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com