ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕ ಶಶಿಧರ್ ಸಿದ್ಧತೆ!
ದಿಶಾ ಎಂಟರ್ ಪ್ರೈಸಸ್ ಅಡಿಯಲ್ಲಿ D/o ಪಾರ್ವತಮ್ಮ ಸಿನಿಮಾ ನಿರ್ಮಿಸಿದ್ದ ನಿರ್ಮಾಪಕ ಕೆಎಂ ಶಶಿಧರ್ ತಮ್ಮ 2ನೇ ಸಿನಿಮಾ ಶೂಟಿಂಗ್ ಗಾಗಿ ಕಾಯುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ನಟನೆಯ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ.
ಲಾಕ್ ಡೌನ್ ವೇಳೆಯಲ್ಲಿ ಅಡಗಿದ್ದ ಪ್ರತಿಭೆಗಳನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ತಾವೇ ಕಥೆ ಬರೆದಿರುವ ಸಿನಿಮಾಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಯುವಕರಲ್ಲಿ ಮಧುಮೇಹಿ ಸಂಬಂಧಿತ ಕಥೆ ಇದಾಗಿದೆ.
ಇದೊಂದು ಗಂಭೀರ ಕಥೆಯಾಗಿದ್ದು, ಹಾಸ್ಯಮಯವಾಗಿ ವರ್ಣಿಸಲಾಗಿದೆ ಎಂದು ಶಶಿಧರ್ ತಿಳಿಸಿದ್ದಾರೆ. 15 ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಇವರಿಗೆ ಮೊದಲ ನಿರ್ದೇಶನ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ.
ಪುಷ್ಪಕ ವಿಮಾನ ಸಿನಿಮಾಗೆ ಸಂಭಾಷಣೆ ಬರೆದಿರುವ ಗುರುಪ್ರಸಾದ್ ಈ ಸಿನಿಮಾಗೆ ಸಂಭಾಷಣೆ ಬರೆಯಲಿದ್ದಾರೆ. ರಾಮಾ ರಾಮಾ ರೇ ಸಿನಿಮಾಗೆ ಲವಿತ್ ಈ ಸಿನಿಮಾಗೆ ಛಾಯಾಗ್ರಾಹಣ ಮಾಡಿದ್ದಾರೆ. ಸಿನಿಮಾದ ಪ್ರಧಾನ ಪಾತ್ರಗಳಿಗೆ ಕಲಾವಿದರ ಆಯ್ಕೆ ಮಾಡಬೇಕಿದೆ ಎಂದು ಶಶಿಧರ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ