ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಎರಡನೇ ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್?

ನಿರ್ದೇಶಕ ಸೂರಿ ಚಿತ್ರವೊಂದರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಗಾಂಧೀನಗರದಲ್ಲಿ ಸುತ್ತುತ್ತಿದೆ. ಮೇ 2019 ರಲ್ಲಿ ಅಮರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಅಂಬರೀಶ್  ತನ್ನ ಮುಂದಿನ ಯೋಜನೆಗೆ ಸೈನ್ ಅಪ್ ಮಾಡಲು ಕಾಯುತ್ತಿದ್ದಾರೆ.
ಅಭಿಷೇಕ್
ಅಭಿಷೇಕ್
Updated on

ನಿರ್ದೇಶಕ ಸೂರಿ ಚಿತ್ರವೊಂದರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಗಾಂಧೀನಗರದಲ್ಲಿ ಸುತ್ತುತ್ತಿದೆ. ಮೇ 2019 ರಲ್ಲಿ ಅಮರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಅಂಬರೀಶ್  ತನ್ನ ಮುಂದಿನ ಯೋಜನೆಗೆ ಸೈನ್ ಅಪ್ ಮಾಡಲು ಕಾಯುತ್ತಿದ್ದಾರೆ.  ಒಂದೆರಡು ನಿರ್ದೇಶಕರೊಂದಿಗೆ ಅಭಿಷೇಕ್  ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳು ಬಂದಿದ್ದರೂ ನಟನ ಕಡೆಯಿಂದ ಯಾವ ಸ್ಪಷ್ಟೀಕರಣ ಬಂದಿಲ್ಲ. ಈ ಲಾಕ್‌ಡೌನ್  ಅವಧಿಯಲ್ಲಿ ಅವರು ತನಗೆ ಬೇಕಾದ ಕಥೆಯ ಆಯ್ಕೆಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ದುನಿಯಾ ಖ್ಯಾತಿಯ ನಿರ್ದೇಶಕ ಸೂರಿಯೊಡನೆ ತಮ್ಮ ಮುಂದಿನ ಚಿತ್ರ ಮಾಡುವುದು ಹಾಗೂ ಈ ಬಗ್ಗೆ ನಿರ್ದೇಶಕ ಮತ್ತು ನಟ ಚಿತ್ರಕಥೆಯ ಬಗೆಗೆ ಪರಸ್ಪರ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಲಾಕ್‌ಡೌನ್ ತೆಗೆದು ಹಾಕಿದ ನಂತರ  ಅಬಿಶೇಕ್ ಅವರ ನಿವಾಸದಲ್ಲಿ ಇಬ್ಬರೂ ಇತ್ತೀಚೆಗೆ ಭೇಟಿಯಾದರು. ಆ ದೊಡ್ಡ ವಿರಾಮವನ್ನು ಎದುರು ನೋಡುತ್ತಿರುವ ಅಬಿಶೇಕ್‌ಗೆ ಸೂರಿಯೊಂದಿಗಿನ ಯೋಜನೆಯು ಒಂದು ದೊಡ್ಡ ಉತ್ತೇಜನ ನೀಡಲಿದೆ ಎನ್ನಲಾಗಿದೆ. 

ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಪ್ರಸಿದ್ಧ ನಟರಾದ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಈಗ ಅವರ ನಟನಾ ವೃತ್ತಿಯನ್ನು ಗಟ್ಟಿಗೊಳಿಸಲು ತನ್ನ ಪೋಷಕರು ನಡೆದ ಹಾದಿಯಲ್ಲಿ ನಡೆಯುತ್ತಿದ್ದಾರೆ.ಮತ್ತೊಂದೆಡೆ, ದುನಿಯಾ ಸೂರಿ ಎಂದೇ ಜನಪ್ರಿಯವಾಗಿರುವ ಸೂರಿ, ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಬೇಡಿಕೆಯಿರುವ ನಿರ್ದೇಶಕರಲ್ಲಿ ಒಬ್ಬರು. . ವಿಜಯ್ ಅಭಿನಯದ ತಮ್ಮ ಮೊದಲ ಚಿತ್ರ ದುನಿಯಾ ಅವರೊಂದಿಗೆ ಬ್ಲಾಕ್ಬಸ್ಟರ್ ನೀಡಿದ ನಿರ್ದೇಶಕ ಪುನೀತ್ ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಅವರಂತಹ ಸ್ಟಾರ್ ಜತೆಗೆ  ಕೆಲಸ ಮಾಡಿದ್ದಾರೆ, ಜಾಕಿ, ಅಣ್ಣಾ ಬಾಂಡ್,  ಕಡ್ಡಿಪುಡಿ,ದೊಡ್ಮನೆ ಹುಡ್ಗ ಮತ್ತು ಟಗರು ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಅನೇಕ ಹೊಸ ಪ್ರತಿಭೆಗಳಿಗೆ ಬ್ರೇಕ್ ನೀಡಿದ್ದಾರೆ.

ಕೆಂಡಸಂಪಿಗೆ ನಿರ್ದೇಶಕರ ಕಡೆಯ ಚಿತ್ರ ಪಾಪ್‌ಕಾರ್ನ್ ಮಂಕಿ ಟೈಗರ್. ಇದರಲ್ಲಿ ಧನಂಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ, ಶಿವರಾಜ್‌ಕುಮಾರ್ ಅಭಿನಯದ ಟಗರು ಚಿತ್ರದಲ್ಲಿ ಡಾಲಿ ಪಾತ್ರಧಾರಿಯಾಗಿದ್ದ ಧನಂಜಯ್ ಇದರಲ್ಲಿ ನಾಯಕ ನಟನಾಗಿದ್ದಾರೆ. ಸೂರಿ ತಮ್ಮ ಇನ್ನೊಂದು ಮಹತ್ವದ ಯೋಜನೆ ಕಾಗೆ ಬಂಗಾರ ಕೆಲಸದಲ್ಲಿ ಸಹ ತೊಡಗಿದ್ದಾರೆ. ಹೆಚ್ಚು ವಾಸ್ತವಕ್ಕೆ ಹತ್ತಿರವಾದ ಚಿತ್ರಗಳನ್ನು ನಿರ್ಮಿಸುವ ಸೂರಿ  ಅಭಿಷೇಕ್‌ಗಾಗಿ ಯಾವ ರೀತಿಯ ಕಥೆ ಬರೆಯಲಿದ್ದಾರೆ ಎನ್ನುವುದು ಪ್ರೇಕ್ಷಕರ ಆಸಕ್ತಿ ಕೆರಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com