ಏಕ್ ಲವ್ ಯಾ' ಹಾಡಿನ ಶೂಟಿಂಗ್ ಗೆ ವಿದೇಶಕ್ಕೆ ಹೋಗಲ್ಲ: ನಿರ್ದೇಶಕ ಪ್ರೇಮ್

"ಏಕ್ ಲವ್ ಯಾ" ಚಿತ್ರದ ರೀ ರೆಕಾರ್ಡಿಂಗ್ ಭರದಿಂದ ಸಾಗಿದ್ದು  ಆಡಿಯೋ ಶೀಘ್ರದಲ್ಲೇ ರಿಲೀಸ್ ಆಗಲಿದೆ" ಎಂದು ನಿರ್ದೇಶಕ ಪ್ರೇಮ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ, ಅವರ ಮುಂಬರುವ ಚಿತ್ರದ ಬಗ್ಗೆ  ಹೊಸ ವಿಚಾರವನ್ನು ಬಹಿರಂಗಪಡಿಸಿರುವ ನಿರ್ದೇಶಕ ಸಧ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದಿದ್ದಾರೆ.
ರಾಣಾ ರಚಿತಾ ರಾಮ್ ಹಾಗೂ ನಿರ್ದೇಶಕ ಪ್ರೇಮ್
ರಾಣಾ ರಚಿತಾ ರಾಮ್ ಹಾಗೂ ನಿರ್ದೇಶಕ ಪ್ರೇಮ್
Updated on

"ಏಕ್ ಲವ್ ಯಾ" ಚಿತ್ರದ ರೀ ರೆಕಾರ್ಡಿಂಗ್ ಭರದಿಂದ ಸಾಗಿದ್ದು  ಆಡಿಯೋ ಶೀಘ್ರದಲ್ಲೇ ರಿಲೀಸ್ ಆಗಲಿದೆ" ಎಂದು ನಿರ್ದೇಶಕ ಪ್ರೇಮ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ, ಅವರ ಮುಂಬರುವ ಚಿತ್ರದ ಬಗ್ಗೆ  ಹೊಸ ವಿಚಾರವನ್ನು ಬಹಿರಂಗಪಡಿಸಿರುವ ನಿರ್ದೇಶಕ ಸಧ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದಿದ್ದಾರೆ. ರಕ್ಷಿತಾ ಫಿಲ್ಮ್ ಫ್ಯಾಕ್ಟರಿಯ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರವು ರಾಣಾ ಪಾಲಿಗೆ ಚೊಚ್ಚಲ ಸ್ಯಾಂಡಲ್ ವುಡ್ ಪ್ರವೇಶವನ್ನು ನೀಡುತ್ತಿದೆ. ಚಿತ್ರದಲ್ಲಿ ನಟಿಯರಾದ ರಚಿತಾ ರಾಮ್ ಹಾಗೂ ರೀಷ್ಮಾ ನಾಣಯ್ಯ ಅಭಿನಯಿಸಿದ್ದರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಜತೆ ರೆಕಾರ್ಡಿಂಗ್‌ನಲ್ಲಿ ನಿರತರಾಗಿರುವ ನಿರ್ದೇಶಕ ಪ್ರೇಮ್, ಏಳು ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಲಿರುವ ಗಾಯಕರನ್ನು ಸಹ ಅಂತಿಮಗೊಳಿಸುತ್ತಿದ್ದಾರೆ. “ಮೊದಲಿಗೆ, ನಾವು ನಮ್ಮ ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಅವರೊಂದಿಗೆ ಪ್ರಾರಂಭಿಸುತ್ತೇವೆ, ಅವರು ಗುರುವಾರ ಹಾಡನ್ನು ಧ್ವನಿಮುದ್ರಣ ಮಾಡಲಿದ್ದಾರೆ. ಅದು ನಂತರ ಅರ್ಮಾನ್ ಮಲಿಕ್, ಅರಿಜಿತ್ ಸಿಂಗ್, ಕೈಲಾಶ್ ಖೇರ್, ಶ್ರೇಯಾ ಘೋಶಾಲ್ ಮತ್ತು ನನ್ನ ಸರದಿ ಬರಲಿದೆ" ಜೂನ್‌ನಲ್ಲಿ ಆಡಿಯೋ ಬಿಡುಗಡೆ ಮಾಡಲು ಯೋಜಿಸುತ್ತಿರುವುದಾಗಿ  ಪ್ರೇಮ್ ಹೇಳುತ್ತಾರೆ.

ನಿರ್ದೇಶಕರಿಗೆ ಡಬ್ಬಿಂಗ್ ಮಾಡಲು ಒಂದು ವಾರ ಉಳಿದಿದೆ, ಅದನ್ನು ಅವರು ಮುಂದಿನ ವಾರದಲ್ಲಿ ಪೂರ್ಣಗೊಳಿಸಲು ಯೋಜಿಸಿದ್ದಾರೆ. ಅವರು ಬಹುತೇಕ ಚಿತ್ರದ ಶೂಟಿಂಗ್ ಮಾಡಿದ್ದಾರೆ, ಆದರೆ ಎರಡು ಹಾಡುಗಳಿಗೆ. "ಈಜಿಪ್ಟ್ ಮತ್ತು ಫ್ರಾನ್ಸ್ ನಲ್ಲಿ ಶೂಟಿಂಗ್ ಮಾಡಬೇಕೆಂದು ಈ ಹಿಂದೆ ನಿರ್ಧರಿಸಿದ್ದೆವು. , ಈಗ ಅದನ್ನು ಭಾರತದಲ್ಲಿಯೇ ಚಿತ್ರೀಕರಿಸಲಾಗುತ್ತದೆ.  ಜೂನ್‌ನಿಂದ ಶೂಟಿಂಗ್ ಪುನರಾರಂಭಿಸಲು ನಾನು ಆಶಿಸುತ್ತಿದ್ದೇನೆ ”ಎಂದು ಅವರು ಹೇಳುತ್ತಾರೆ. ವಿದೇಶದಲ್ಲಿ ಚಿತ್ರೀಕರಣ ಈಗ ಅಸಾಧ್ಯ ಎನ್ನುವ ನಿರ್ದೇಶಕ ನಮಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿದರೂ ಸಹ, ನಾವು ಯಾವುದೇ ವಿದೇಶದ ಶೂಟಿಂಗ್ ಮಾಡದಿರಲು  ನಿರ್ಧರಿಸಿದ್ದೇವೆ ”ಎಂದರು. ,“ ಈಗ ದೇಶೀಯ ವಿಮಾನಗಳು ಪುನರಾರಂಭಗೊಂಡಿವೆ, ನಾನು ಸ್ಥಳಗಳ ಅಂತಿಮ ಆಯ್ಕೆಗಾಗಿ ಯೋಜನೆ ಮಾಡುತ್ತಿದ್ದೇನೆ". 

ರೊಮ್ಯಾಂಟಿಕ್ ಥ್ರಿಲ್ಲರ್ ಆಗಿರುವ ಏಕ್ ಲವ್ ಯಾ ಚಿತ್ರ ನೈಜ ಘಟನೆಯಿಂದ ಪ್ರೇರಿತವಾಗಿದೆಮಹೇಂದ್ರ ಸಿಂಹ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಅಂಕಿತಾ ನಾಯಕ್ ಸಹ ಕಲಾವಿದೆಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com