ಲಾಕ್ ಡೌನ್ ಬಳಿಕ ಸ್ಯಾಂಡಲ್ ವುಡ್ ಗೆ ಮತ್ತೆ 'ಪವರ್': 'ಯುವರತ್ನ' ಡಬ್ಬಿಂಗ್ ಶುರು
ಪವರ್ ಸ್ಟಾರ್ ಪುನೀತ್ ಅಭಿನಯದ "ಯುವರತ್ನ" ಚಿತ್ರದ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದ್ದು ಚಿತ್ರದ ಡಬ್ಬಿಂಗ್ ಕಾರ್ಯ ಭರದಿಂದ ಸಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಇತ್ತೀಚಿನ ಟ್ವೀಟ್ ಪವರ್ ಸ್ಟಾರ್ ಅವರ ಚಿತ್ರದ ಕುರಿತು ಹೊಸವಿಚಾರವನ್ನು ಬಹಿರಂಗಪಡಿಸಿದೆ.
ಆಕ್ಷನ್ ಕಮರ್ಷಿಯಲ್ ಎಂಟರ್ಟೈನರ್ ರಾಜಕುಮಾರ ನಂತರ ಎರಡನೇ ಬಾರಿಗೆ ನಿರ್ದೇಶಕ-ನಟ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಒಂದಾಗಿದ್ದಾರೆ.
ಇದು ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು ಚಿತ್ರದ ಪೋಸ್ಟರ್‌ಗಳು ಮತ್ತು ಇತ್ತೀಚಿನ ಡೈಲಾಗ್ ಟೀಸರ್ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಕೇವಲ 20 ದಿನಗಳ ಶೂಟಿಂಗ್ ಬಾಕಿ ಉಳಿದಿರುವ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಏತನ್ಮಧ್ಯೆ, ನಿರ್ದೇಶಕರು ಹಾಡಿನ ದೃಶ್ಯ ಚಿತ್ರೀಕರಣಕ್ಕೆ ಇನ್ನೂ ಸ್ಥಳವನ್ನು ಅಂತಿಮ ಮಾಡಿಲ್ಲ. ಶೂಟಿಂಗ್ ಪುನರಾರಂಭಿಸಲು ಸರ್ಕಾರ ಅನುಮತಿ ನೀಡುವವರೆಗೆ ಅವರು ಕಾಯಲು ಸಿದ್ದವಾಗಿದ್ದಾರೆ.
ಇನ್ನು ಯುವರತ್ನದಲ್ಲಿ ದಕ್ಷಿಣ ಭಾರತೀಯ ನಟಿ ಸಯ್ಯೇಶಾ ಮೊದಲ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ರಾಧಿಕಾ ಶರತ್‌ಕುಮಾರ್, ಪ್ರಕಾಶ್ ರಾಜ್, ಧನಂಜಯ್ ಅ ಸಹ ಅಭಿನಯಿಸಿರುವ ಈ ಚಿತ್ರಕ್ಕೆ ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಎಸ್ ತಮನ್ ಸಂಗೀತ ಸಂಯೋಜನೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ