ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ವಿಷಯದಲ್ಲಿ ಮಿಲಿಂದ್ ಸೋಮನ್ ಪ್ರತಿ ವರ್ಷವೂ ವಿನೂತನವಾಗಿ ಯೋಜಿಸುತ್ತಾರೆ. 55 ನೇ ಹುಟ್ಟುಹಬ್ಬದಂದು ಮಿಲಿಂದ್ ಸೋಮನ್ ಗೋವಾದ ಕಡಲ ತೀರದಲ್ಲಿ ನಗ್ನರಾಗಿ ಓಡಿದ್ದಾರೆ.
ಹ್ಯಾಪಿ ಬರ್ತ್ ಡೇ ಟು ಮಿ! #55 ಎಂದು ಬರೆದು ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಫೋಟೋ ಕ್ರೆಡಿಟ್ ನ್ನು ಪತ್ನಿ ಅಂಕಿತ ಕೋನ್ವಾರ್ ಗೆ ನೀಡಿದ್ದಾರೆ.
ಅಂಕಿತಾ ತನ್ನ ಪತಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ನನ್ನ ಅಸ್ತಿತ್ವದ ಪ್ರತಿ ಕಣದಲ್ಲೂ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಅಂಕಿತಾ ಮಿಲಿಂದ್ ಸೋಮನ್ ಜನ್ಮದಿನದ ಶುಭಾಶಯ ಸಂದೇಶ ಕಳಿಸಿದ್ದಾರೆ. ಮಿಲಿಂದ್ ಸೋಮನ್ ಕ್ಯಾಮರಾ ಮುಂದೆ ನಗ್ನರಾಗಿರುವುದು ಇದೇ ಮೊದಲೇನು ಅಲ್ಲ. 1990 ರಲ್ಲಿ ಮಿಲಿಂದ್ ಸೋಮನ್ ಜಾಹಿರಾತಿಗೋಸ್ಕರ ಮಾಜಿ ಮಿಸ್ ಇಂಡಿಯಾ ಮಧು ಸಾಪ್ರೆ ಜೊತೆ ನಗ್ನರಾಗಿ ಪೋಸ್ ಕೊಟ್ಟಿದ್ದರು.
ಫೋರ್ ಮೋರ್ ಶಾಟ್ಸ್ ಪ್ಲೀಸ್ ಎಂಬ ವೆಬ್ ಸೀರೀಸ್ ನಲ್ಲಿ ಮಿಲಿಂದ್ ಸೋಮನ್ ನಟಿಸಿದ್ದರು.
Advertisement