ಖ್ಯಾತ ಮಲಯಾಳಂ ನಿರ್ದೇಶಕ ಹರಿಹರನ್ ಗೆ ಜೆಸಿ ಡೇನಿಯಲ್ ಪ್ರಶಸ್ತಿ

ಖ್ಯಾತ ಚಲನಚಿತ್ರ ನಿರ್ದೇಶಕ ಹರಿಹರನ್ ಅವರು ಮಲಯಾಳಂ ಚಿತ್ರರಂಗಕ್ಕೆ ನೀಡಿದ ಮಹತ್ವಪೂರ್ಣ ಕೊಡುಗೆಯನ್ನು ಗುರುತಿಸಿ ಕೇರಳದ ಅತ್ಯುನ್ನತ ಪ್ರಶಸ್ತಿಜೆಸಿ ಡೇನಿಯಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹರಿಹರನ್
ಹರಿಹರನ್
Updated on

ಖ್ಯಾತ ಚಲನಚಿತ್ರ ನಿರ್ದೇಶಕ ಹರಿಹರನ್ ಅವರು ಮಲಯಾಳಂ ಚಿತ್ರರಂಗಕ್ಕೆ ನೀಡಿದ ಮಹತ್ವಪೂರ್ಣ ಕೊಡುಗೆಯನ್ನು ಗುರುತಿಸಿ ಕೇರಳದ ಅತ್ಯುನ್ನತ ಪ್ರಶಸ್ತಿ ಜೆಸಿ ಡೇನಿಯಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕೇರಳ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ವ್ಯಾಪ್ತಿಗೆ ಬರುವ ಕೇರಳ ರಾಜ್ಯ ಚಲಚಿತ್ರ ಅಕಾಡೆಮಿಯು ವಾರ್ಷಿಕವಾಗಿ ನೀಡುತ್ತಿರುವ ಈ ಪ್ರಶಸ್ತಿಐದು ಲಕ್ಷ ರೂ.ಗಳ ನಗದು ಬಹುಮಾನ, ಸ್ಮರಣಿಕೆ ಮತ್ತು ಫಲಕವನ್ನು ಒಳಗೊಂಡಿದೆ.

ಚಿತ್ರರಂಗಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ಹರಿಹರನ್ ಅವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ತೀರ್ಪುಗಾರರ ಆಯ್ಕೆ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಟಿ.ವಾಸುದೇವನ್ ನಾಯರ್ ಹೇಳಿದ್ದಾರೆ.

ಕಳೆದ ಐದು ದಶಕಗಳಿಂದ ಸಿನೆಮಾ ಜಗತ್ತಿನಲ್ಲಿ ಸಕ್ರಿಯವಾಗಿರುವ ಹರಿಹರನ್ ಮಲಯಾಳಂ ಚಿತ್ರರಂಗಕ್ಕೆ ಐತಿಹಾಸಿಕ ಕೊಡುಗೆಗಳನ್ನು ನೀಡಿದ್ದಾರೆ. ಹರಿಹರನ್ ಐವತ್ತಕ್ಕೆ ಹೆಚ್ಚು ಚಿತ್ರಗಳ ನಿರ್ದೇಶಕರಾಗಿದ್ದಾರೆ. 'ಪಂಚಾಗ್ನಿ', 'ಒರು ವಡಕ್ಕನ್ ವೀರಗಧಾ’, 'ನಾಗಾಕ್ಷತಂಗಳ್’,'ಸರ್ಗಂ’ ಅವುಗಳಲ್ಲಿ ಕೆಲವು ವಿಮರ್ಶಾತ್ಮಕ ಮೆಚ್ಚುಗೆಗೆ ಪಾತ್ರವಾದವುಗಳಾಗಿದೆ. ಇವರ ಹೆಚ್ಚಿನ ಚಿತ್ರಗಳಿಗೆ ಎಂಟಿ ವಾಸುದೇವನ್ ಕಥೆ ಬರೆದಿದ್ದಾರೆ. ಮಲಯಾಳಂ ಚಿತ್ರೋದ್ಯಮದಲ್ಲಿ ವಾಸುದೇವನ್-ಹರಿಹರನ್ ಮಹತ್ವದ ಜೋಡಿಯಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com