ಗುರು ದೇಶಪಾಂಡೆ ನಿರ್ಮಾಣದ 'ಪೆಂಟಗಾನ್' ಸಿನಿಮಾಗೆ ಐವರು ನಿರ್ದೇಶಕರು
ಜಂಟಲ್ ಮ್ಯಾನ್ ನಿರ್ಮಾಪಕ ಗುರು ದೇಶಪಾಂಡೆ ನಿರ್ಮಾಣದ ಮುಂದಿನ ಸಿನಿಮಾ ಪೆಂಟಗಾನ್ ನಲ್ಲಿ ಐವರು ನಿರ್ದೇಶಕರು ಒಟ್ಟಿಗೆ ಕೆಲಸ ಮಾಡಲಿದ್ದಾರೆ.
ಐವರು ನಿರ್ದೇಶಕರು ವಿಭಿನ್ನ ಕಥಾಹಂದರದೊಂದಿಗೆ ಬರಲಿದ್ದಾರೆ ಎಂದು ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದ್ದಾರೆ. ಈ ಸಿನಿಮಾ ಐದು ಪದರಗಳ ಕೇಕ್ ನಂತೆ, ಅದು ಅದರದ್ದೇ ಆದ ಸ್ವಾದದ ಮೂಲಕ ಹೊರಬರಲಿದೆ.
ಶೀರ್ಷಿಕೆ ವಿನ್ಯಾಸದ ಸರಳತೆ ಮತ್ತು ಐದು ಮುಖದ ವಸ್ತುವಿನ ಆಧಾರವಾಗಿರುವ ಕಥೆ ಸಂಕೀರ್ಣತೆಯನ್ನು ಪ್ರತಿಬಿಂಬಿಸುತ್ತದೆ.
ಈಗಾಗಲೇ ಐದು ಕಥೆಯಲ್ಲಿ ಎರಡರದ್ದು ಶೂಟಿಂಗ್ ಮುಗಿದಿದೆ, ಈ ಪ್ರಾಜೆಕ್ಟ್ ಗಾಗಿ ಹಲವು ತಿಂಗಳುಗಳ ಹಿಂದೆಯೇ ಸಿದ್ಧತೆ ಆರಂಭವಾಗಿದ್ದು, ಪ್ರತಿ ಕಥೆಯೂ ವಿಭಿನ್ನ ಹಂತದಲ್ಲಿ ಸಿದ್ಧವಾಗುತ್ತಿದೆ, ಕೊರೋನಾ ಸಾಂಕ್ರಾಮಿಕ ಮುಗಿದ ನಂತರ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಪೆಂಟಗನ್ ಕೇವಲ ಐದು ನಿರ್ದೇಶಕರನ್ನು ಮಾತ್ರವಲ್ಲದೆ ಪ್ರಸಿದ್ಧ ಕಲಾವಿದರು ಮತ್ತು ತಂತ್ರಜ್ಞರ ಸಮೂಹವನ್ನು ಸಹ ತರುತ್ತದೆ. ನಿಧಾನವಾಗಿ ನಿರ್ದೇಶಕರ ಹೆಸರನ್ನು ಪ್ರಕಟಿಸುವುದಾಗಿ ಗುರುದೇಶಪಾಂಡೆ ತಿಳಿಸಿದ್ದಾರೆ.
ನಾವು ಅವರ ಕೊಡುಗೆಗೆ ತಕ್ಕಂತೆ ಪ್ರತಿಯೊಂದನ್ನು ಪ್ರಸ್ತುತಪಡಿಸುತ್ತೇವೆ, ನಿರ್ದೇಶಕರ ಹೆಸರನ್ನು ಶೀಘ್ರವೇ ಬಹಿರಂಗ ಪಡಿಸುವುದಾಗಿ ತಿಳಿಸಿದ್ದಾರೆ. ಪ್ರತಿಯೊಬ್ಬ ನಿರ್ದೇಶಕನಿಗೆ ತನ್ನ ಕಥೆಯ ವಿಷಯ ಬಂದಾಗ ಪೂರ್ಣ ಸ್ವಾತಂತ್ರ್ಯವಿದೆ. ಈ ಕಥೆಗಳಲ್ಲಿ ಬಂಧಿಸುವ ಅಂಶವೆಂದರೆ ಕೇಕ್ ಮೇಲಿನ ಐಸಿಂಗ್. ಒಂದೇ ನಿರೂಪಣೆಯನ್ನು ನಿರ್ಮಿಸಲು ಐದು ಸೃಜನಶೀಲ ಮನಸ್ಸುಗಳನ್ನು ತರುವುದು ಸುಲಭದ ಕೆಲಸವಲ್ಲ, ಇದು ತಂಡಕ್ಕೆ ಸವಾಲಿನ ಕೆಲಸವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ