'ಖೈಮರಾ' ಸೈಕಲಾಜಿಕಲ್ ಹಾರರ್ ಸಿನಿಮಾಗೆ ಒಂದಾದ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್!

'ಖೈಮರಾ' ಎಂಬ ಹಾರರ್ ಸೈಕಲಾಜಿಕಲ್ ಸಿನಿಮಾಗಾಗಿ ನಟಿಯರಾದ ಪ್ರಿಯಾಮಣಿ, ಪ್ರಿಯಾಂಕಾ ಉಪೇಂದ್ರ ಮತ್ತು ಛಾಯಾ ಸಿಂಗ್ ಜೊತೆಯಾಗಿದ್ದಾರೆ.
ಖೈಮರಾ ಸಿನಿಮಾ ಸ್ಟಿಲ್
ಖೈಮರಾ ಸಿನಿಮಾ ಸ್ಟಿಲ್

'ಖೈಮರಾ' ಎಂಬ ಹಾರರ್ ಸೈಕಲಾಜಿಕಲ್ ಸಿನಿಮಾಗಾಗಿ ನಟಿಯರಾದ ಪ್ರಿಯಾಮಣಿ, ಪ್ರಿಯಾಂಕಾ ಉಪೇಂದ್ರ ಮತ್ತು ಛಾಯಾ ಸಿಂಗ್ ಜೊತೆಯಾಗಿದ್ದಾರೆ.

ಈ ಚಿತ್ರದ ಮೂಲಕ ತಮಿಳು ನಿರ್ದೇಶಕ ಗೌತಮ್ ವಿ.ಪಿ ಅವರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರ ಜೊತೆಗೆ ತಮಿಳು ನಟ-ಚಲನಚಿತ್ರ ನಿರ್ಮಾಪಕ ವಿ ಮಥಿಯಾಲಗನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಇದು ಭಯಾನಕ ಅಂಶಗಳನ್ನು ಹೊಂದಿರುವ ಮಹಿಳಾ ಕೇಂದ್ರಿತ ಮಾನಸಿಕ ಥ್ರಿಲ್ಲರ್ ಆಗಿದೆ.ನಮ್ಮಲ್ಲಿ ಪ್ರಿಯಾ ಮಣಿ, ಪ್ರಿಯಾಂಕಾ ಉಪೇಂದ್ರ ಮತ್ತು ಛಾಯಾ ಸಿಂಗ್ ಇದ್ದಾರೆ. ಮೂವರೂ ವಿಭಿನ್ನ ಅವತಾರಗಳಲ್ಲಿ ಪ್ರದರ್ಶಿಸುವ ಪಾತ್ರಗಳನ್ನು ಹೊಂದಿದ್ದಾರೆ.ನಿರೂಪಣೆಯ ಶೈಲಿಯು ಸ್ಯಾಂಡಲ್‌ವುಡ್‌ಗೆ ಹೊಸದಾಗಿದೆ ಮತ್ತು ಖಂಡಿತವಾಗಿಯೂ ಪ್ರೇಕ್ಷಕರನ್ನು
ರೋಮಾಂಚನಗೊಳಿಸುತ್ತದೆ. ಚಿತ್ರವನ್ನು ಬೆಂಗಳೂರು ಮತ್ತು ಕೂರ್ಗ್‌ನಲ್ಲಿ ವ್ಯಾಪಕವಾಗಿ ಚಿತ್ರೀಕರಿಸಲು ಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಿರ್ದಶಕ ಪಿ ವಾಸು ಅವರ ಸಹೋದರ  ಗೌತಮ್ ಅವರ ತಂದೆ ಪಿ ವಿಮಲ್ ಕಥೆ ಬರೆದಿದ್ದಾರೆ. ಗುರು ಕಿರಣ್ ಮತ್ತು ವಿಷ್ಣು ರಾಮಕೃಷ್ಣ ಸಂಗೀತ ನೀಡಿದ್ದಾರೆ, ಡಿಸೆಂಬರ್ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿದೆ. ಚಿತ್ರದಲ್ಲಿ ಈ ಮೂವರು ನಟಿಯರು ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಚಿತ್ರೀಕರಣ ಬೆಂಗಳೂರು ಮತ್ತು ಕೊಡಗಿನಲ್ಲಿ ನಡೆಸಲು ಸಿನಿಮಾತಂಡ ಪ್ಲಾನ್ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com