ಆ್ಯಕ್ಟ್ 1978 ಚಿತ್ರಕ್ಕೆ ಸಂಭಾಷಣೆ ಬರೆಯುವುದು ಸವಾಲಿನ ಕೆಲಸವಾಗಿತ್ತು: ಟಿಕೆ ದಯಾನಂದ್

ಮನ್ಸೋರೆ ನಿರ್ದೇಶನದ ಆ್ಯಕ್ಟ್ 1978 ಚಿತ್ರದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ಪ್ರಮುಖ ಸಾಧನವಾಗಿದೆ ಎಂದು ಟಿ,ಕೆ ದಯಾನಂದ್ ಹೇಳಿದ್ದಾರೆ. 
ಆ್ಯಕ್ಟ್ 1978 ಸಿನಿಮಾ ಸ್ಟಿಲ್
ಆ್ಯಕ್ಟ್ 1978 ಸಿನಿಮಾ ಸ್ಟಿಲ್

ಮನ್ಸೋರೆ ನಿರ್ದೇಶನದ ಆ್ಯಕ್ಟ್ 1978 ಚಿತ್ರದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ಪ್ರಮುಖ ಸಾಧನವಾಗಿದೆ ಎಂದು ಟಿ,ಕೆ ದಯಾನಂದ್ ಹೇಳಿದ್ದಾರೆ.

ಸಿನಿಮಾಗೆ ದಯಾನಂದ್ ಸಂಭಾಷಣೆ ಬರೆದಿದ್ದು, ವೀರು ಚಿತ್ರಕಥೆ ಬರೆದಿದ್ದಾರೆ. ಬರಹಗಾರನಾಗಿ ಇದು ನನ್ನ ಮೂರನೇ ಸಿನಿಮಾವಾಗಿದೆ. 

ಬೆಂಕಿಪಟ್ಣ, ಬೆಲ್ ಬಾಟಮ್ ಗಿಂತ ಇದು ಹೆಚ್ಚಿನ ಸವಾಲಿಂದ ಕೂಡಿತ್ತು, ಹಿಂದಿನ ಸಿನಿಮಾಗಳಿಗಿಂತ ಇದು ದೊಡ್ಡದಾಗಿದೆ, ಇದು ಒತ್ತೆಯಾಳುಗಳ ಥ್ರಿಲ್ಲರ್ ಸಿನಿಮಾವಾಗಿದೆ.

ಕಥೆಯ ಬಾಟಮ್ ಲೈನ್ ಪ್ರಸ್ತುತ ಅಧಿಕಾರಶಾಹಿ ಸೆಟ್‌ಅಪ್‌ ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಅವರ ನಿರ್ಲಕ್ಷ್ಯ ತೋರುತ್ತದೆ ಹಾಗೂ ಇದು ಸರ್ಕಾರಿ ನೌಕರರ ಜವಾಬ್ದಾರಿಗಳನ್ನು ಪ್ರತಿಬಿಂಬಿಸುತ್ತದೆ.

ಅಂತಹ ಕಥೆಗಳಿಗೆ ಸಾಲುಗಳನ್ನು ಬರೆಯುವುದು ಪ್ರಯೋಗಾತ್ಮಕವಾಗಿರುತ್ತದೆ ಏಕೆಂದರೆ ನಮ್ಮ ಸೃಜನಶೀಲತೆಯನ್ನು ಉಪದೇಶ ಮಾಡದೆ ಸಿನಿಮಾ ತರಬೇಕಾಗುತ್ತದೆ.

ಆ್ಯಕ್ಟ್ ಸಿನಿಮಾ ವಾಸ್ತವಕ್ಕೆ ಹತ್ತಿರವಾಗಿದ್ದು, ಕಥೆಯನ್ನು ಸಿನಿಮಾವಾಗಿ ಕರೆತರಲು ಸಾಕಷ್ಟು ಹೋಮ್ ವರ್ಕ್ ಮಾಡಿದ್ದೇವೆ, ಹಳೇಯ ವೃತ್ತ ಪತ್ರಿಕೆಗಳನ್ನು ರೆಫರೆನ್ಸ್ ಮಾಡಿದ್ದು, ಲವು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಕೇಸ್ ಬಗ್ಗೆ ಅಧ್ಯಯನ ನಡೆಸಿರುವುದಾಗಿ ತಿಳಿಸಿದ್ದಾರೆ.

ಇದೊಂದು ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದು, ಇದು ಘಟನೆಗಳ ಮೇಲೆ ನಡೆಯುವ ಕಥೆಯಾಗಿದ್ದು, ನಿರೂಪಣೆ ಮತ್ತು ಸಂಭಾಷಣೆಗಳಿಗೆ ಗರಿಷ್ಠ ಪ್ರಾಮುಖ್ಯತೆ ನೀಡಲಾಗಿದೆ ”ಎಂದು ದಯಾನಂದ್ ಹೇಳಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ತಿಳಿದಿರಬೇಕಾದ ಸಾಮಾನ್ಯ ಮೂಲಭೂತ ಕಾನೂನುಗಳೊಂದಿಗೆ ಸಾರ್ವಜನಿಕರಿಗೆ ಶಿಕ್ಷಣ ನೀಡಲು ಈ ಚಿತ್ರವು ಸಹಾಯ ಮಾಡುತ್ತದೆ.

ಸತ್ಯ ಹೆಗಡೆ ಛಾಯಾಗ್ರಹಣವಿದ್ದು, ರಾಹುಲ್ ಶಿವಶಂಕರ್ ಸಂಗೀತ ನೀಡಿದ್ದು, ಯಜ್ಞಾಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಬಿ ಸುರೇಶ್, ಶೃತಿ ಸಂಚಾರಿ ವಿಜಯ್, ಅವಿನಾಶ್, ಶೋಭರಾಜ್, ಪಿಡಿ ಸತೀಶ್, ಕೃಷ್ಣ  ಮುಂತಾದವರು ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com