
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ "ಜೇಮ್ಸ್" ಚಿತ್ರದ ಪಾತ್ರವರ್ಗ ದಿನದಿನಕ್ಕೂ ಹಿಗ್ಗುತ್ತಿದೆ. ಇದೀಗ ನಟ ಮುಖೇಶ್ ರಿಷಿ ಪುನೀತ್ ಅವರ ಈ ಚಿತ್ರಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ,
"ಜೇಮ್ಸ್" ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರವಾಗಿದ್ದು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ.ಕಿಶೋರ್ ಪಾತಿಕೊಂಡ ನಿರ್ಮಾಣದ ಈ ಚಿತ್ರದಲ್ಲಿ ಬಾಲಿವುಡ್ ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಚಿರಪರಿಚಿತವಾಗಿರುವ ಬಹುಭಾಷಾ ಕಲಾವಿದರಾದ ಮುಖೇಶ್ ಕೂಡ ತೆರೆ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಪವರ್ ಸ್ಟಾರ್ ಅವರೊಂದಿಗೆ ಅನು ಪ್ರಭಾಕರ್, ಶ್ರೀಕಾಂತ್ ಮತ್ತು ಆದಿತ್ಯ ಮೆನನ್ ಸಹ ಇದ್ದಾರೆ. ನವೆಂಬರ್ 25 ರಂದು ಬೆಂಗಳೂರಿನಲ್ಲಿ"ಜೇಮ್ಸ್" ಚಿತ್ರದ ಮೂರನೇ ಶೆಡ್ಯೂಲ್ ಪ್ರಾರಂಬವಾಗಲಿದೆ. ಈ ವೇಳೆ ಮುಖೇಶ್ ಸಹ ಶೂಟಿಂಗ್ ಸೆಟ್ ಗೆ ಸೇರಿಕೊಳ್ಳಲಿದ್ದಾರೆ.
"ಜೇಮ್ಸ್" ನಿರ್ದೇಶಕ ಚೇತನ್ ಅವರ ನಾಲ್ಕನೇ ಚಿತ್ರವಾಗಿದ್ದು ಈ ಚಿತ್ರದಲ್ಲಿ "ರಾಜಕುಮಾರ" ಜೋಡಿಯಾದ ಪುನೀತ್ ಹಾಗೂ ಪ್ರಿಯಾ ಆನಂದ್ ಮತ್ತೊಮ್ಮೆ ತೆರೆ ಮೇಲೆ ಒಂದಾಗಿದ್ದಾರೆ. ಪ್ರಿಯಾ ಈ ಚಿತ್ರದಲ್ಲಿ ಕೆಲ ಸನ್ನಿವೇಶ್ಗಳಲ್ಲಿ ತಮ್ಮ ಸಾಕು ನಾಯಿಯನ್ನೂ ಸಹ ನಟನೆಗಿಳಿಸಿದ್ದಾರೆ. ಚರಣ್ ರಾಜ್ ಸಂಗೀತ ಈ ಚಿತ್ರಕ್ಕಿದೆ.
Advertisement