ಬೆಲ್  ಬಾಟಮ್ ಸ್ಟಿಲ್
ಬೆಲ್ ಬಾಟಮ್ ಸ್ಟಿಲ್

ಸೇಮ್ ಟೈಮ್, ಸೇಮ್ ಡೇಟ್: ಜನವರಿ 29 ರಂದು ಬೆಲ್ ಬಾಟಮ್ 2 ಮುಹೂರ್ತ

ಕಾಮಿಡಿ, ಕ್ರೈಮ್ ಕಥೆಯ ಬೆಲ್ ಬಾಟಮ್ ಸಿನಿಮಾ ಯಶಸ್ಸಿನ ನಂತರ ಚಿತ್ರ ತಂಡ 2ನೇ ಭಾಗ ತಯಾರಿಸಲು ಮುಂದಾಗಿದೆ.  ಮೊದಲ ಭಾಗಕ್ಕಿಂತ ಬೆಲ್ ಬಾಟಮ್-2 ದೊಡ್ಡ ಕ್ಯಾನ್ವಾಸ್ ಆಗಿರುತ್ತದೆ ಎಂದು ಟಿ.ಕೆ ದಯಾನಂದ್ ತಿಳಿಸಿದ್ದಾರೆ.
Published on

ಕಾಮಿಡಿ, ಕ್ರೈಮ್ ಕಥೆಯ ಬೆಲ್ ಬಾಟಮ್ ಸಿನಿಮಾ ಯಶಸ್ಸಿನ ನಂತರ ಚಿತ್ರ ತಂಡ 2ನೇ ಭಾಗ ತಯಾರಿಸಲು ಮುಂದಾಗಿದೆ. ಮೊದಲ ಭಾಗಕ್ಕಿಂತ ಬೆಲ್ ಬಾಟಮ್-2 ದೊಡ್ಡ ಕ್ಯಾನ್ವಾಸ್ ಆಗಿರುತ್ತದೆ ಎಂದು ಟಿ.ಕೆ ದಯಾನಂದ್ ತಿಳಿಸಿದ್ದಾರೆ.

ಬೆಲ್ ಬಾಟಮ್ 2 ಸಿನಿಮಾ ಕಥೆ ಇಂಗ್ಲೀಷ್ ನ ಬಾಂಡ್ ಸರಣಿಯಂತಿರುತ್ತದೆ, ಸೀನ್ ಕಾನರಿ ಸಿನಿಮಾ ರೀತಿಯಲ್ಲಿದ್ದು ಪ್ರೇಕ್ಷಕರಿಗೆ ಇಷ್ಟಪಡುವಂತದ್ದಾಗಿದೆ.

ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಡಿಟೆಕ್ಟಿವ್ ದಿವಾಕರ್ ಪಾತ್ರದಲ್ಲಿ ನಟಿಸಲಿದ್ದು, 1980ರ ಕಾಲಘಟ್ಟದ ಕತೆಯಾಗಿರುತ್ತದೆ ಎಂದು ಟಿಕೆ ದಯಾನಂದ್ ತಿಳಿಸಿದ್ದಾರೆ.

ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್ ಅಡಿ ಸಂತೋಷ್ ಕುಮಾರ್ ನಿರ್ಮಿಸುತ್ತಿರುವ ಸಿನಿಮಾವನ್ನು ಜಯತೀರ್ಥ ನಿರ್ದೇಶಿಸುತ್ತಿದ್ದಾರೆ. 

ಅಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದು, ಡಿಒಪಿ ಅರವಿಂದ್ ಕಶ್ಯಪ್ ಮತ್ತು ನಟರಾದ ರಿಷಬ್, ಹರಿಪ್ರಿಯಾ, ಅಚ್ಯುತ್ ಕುಮಾರ್, ಯೋಗರಾಜ್ ಭಟ್ ಮತ್ತು ಪ್ರಮೋದ್ ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ.

ಹೊಸಬರು ಚಿತ್ರದಲ್ಲಿ ನಟಿಸುತ್ತಿದ್ದು, ಇನ್ನು ಕೆಲ ಕಲಾವಿದರ ಆಯ್ಕೆ ಫೈನಲ್ ಆಗಬೇಕಾಗಿದೆ. 2021 ಜನವರಿ 29 ರಂದು ಚಿತ್ರ ತಂಡ ಮೂಹೂರ್ತ ಏರ್ಪಡಿಸಲು ನಿರ್ಧರಿಸಿದೆ. ಬೆಲ್ ಬಾಟಮ್ ಮೊದಲ ಭಾಗಕ್ಕೆ 2018 ರ ಜನವರಿ 29 ರಂದು ಮೂಹೂರ್ತ ಏರ್ಪಡಿಸಲಾಗಿತ್ತು.

ಫೆಬ್ರವರಿ 15 2022 ರಂದು ಸಿನಿಮಾ ರಿಲೀಸ್ ಮಾಡುವ ಉದ್ದೇಶವಿದೆ, ಸದ್ಯ ಗಿರಿ ಕೃಷ್ಣ ನಿರ್ದೇಶನದ ರಿಷಬ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

2018ರಲ್ಲಿ ಬೆಲ್ ಬಾಟಮ್ ಇದೇ ದಿನಾಂಕದಂದು ಪ್ರಾರಂಭವಾಗಿತ್ತು, ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಸಿಕ್ವೇಲ್ ಕೂಡ ಅದೇ ದಿನಾಂಕದಲ್ಲಿ ಆರಂಭವಾಗಲಿದೆ.ಟಿಕೆ ದಯಾನಂದ್ ಚಿತ್ರಕತೆ ಬರೆಯಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com