'ಆಕ್ಟ್-1978' ಚಿತ್ರದೊಂದಿಗೆ ವೀಕ್ಷಕರು ಮತ್ತೆ ಸಿನೆಮಾಗಳನ್ನು ಸೆಲೆಬ್ರೇಟ್ ಮಾಡಲು ಪ್ರಾರಂಭಿಸಲಿದ್ದಾರೆ: ಯಜ್ಞ ಶೆಟ್ಟಿ

"ಆಕ್ಟ್ 1978" ಲಾಕ್‌ಡೌನ್ ನಂತರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಮೊದಲ ಕನ್ನಡ ಚಿತ್ರ  ಮನ್ಸೂರ್ ನಿರ್ದೇಶನದಹೋಸ್ಟೇಜ್ ಥ್ರಿಲ್ಲರ್ ಜನರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರುತ್ತದೆ ಆ ಮೂಲಕ ಮತ್ತೆ ಚಿತ್ರರಂಗ ಕಳೆಗಟ್ಟುತ್ತದೆ ಎಂದು ಚಿತ್ರದ ಪ್ರಮುಖ ನಟಿ ಮ ಆಶಿಸಿದ್ದಾರೆ. 
ಆಕ್ಟ್ -1978
ಆಕ್ಟ್ -1978
Updated on

"ಆಕ್ಟ್ 1978" ಲಾಕ್‌ಡೌನ್ ನಂತರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಮೊದಲ ಕನ್ನಡ ಚಿತ್ರ  ಮನ್ಸೂರ್ ನಿರ್ದೇಶನದ ಹೋಸ್ಟೇಜ್ ಥ್ರಿಲ್ಲರ್ ಜನರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರುತ್ತದೆ ಆ ಮೂಲಕ ಮತ್ತೆ ಚಿತ್ರರಂಗ ಕಳೆಗಟ್ಟುತ್ತದೆ ಎಂದು ಚಿತ್ರದ ಪ್ರಮುಖ ನಟಿ ಯಜ್ಞಾ ಶೆಟ್ಟಿ ಆಶಿಸಿದ್ದಾರೆ. 

ನಟಿ ಯಜ್ಞಾ ಶೆಟ್ಟಿ ವಿವಾಹದ ನಂತರ ಮುಂಬೈನಲ್ಲಿ ನೆಲೆಸಿದ್ದಾರೆ. ಅಲ್ಲದೆ ಆಕೆ ತಾನು ಮಂಗಳೂರು ವಾಸವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಚಿತ್ರದಲ್ಲಿ ನಟಿ ಒಂದು ಕುತೂಹಲಕರ ಪಾತ್ರ ಮಾಡಿದ್ದು ಅದರ ಫಸ್ಟ್ ಲುಕ್ ನಿಂದಲೇ ವೀಕ್ಷಕರನ್ನು ಆಕರ್ಷಿಸಿದ್ದರು. ಕೈಯಲ್ಲಿ ಬಂದೂಕು ಹೊಡಿದು ಹ್ಯೂಮನ್ ಬಾಂಬ್ ನಿಂದ ಸುತ್ತುವರಿದ ಗರ್ಭಿಣಿ ಮಹಿಳೆಯಾಗಿ ಯಜ್ಞ ಶೆಟ್ಟಿಕಾಣಿಸಿಕೊಂಡಿರುವ ಪೋಸ್ಟರ್ ನವೆಂಬರ್ 20 ರಂದು ಬಿಡುಗಡೆಯಾಗಿತ್ತು.  "ತನ್ನ ವೈಯಕ್ತಿಕ ಬದ್ಧತೆಯಿಂದಾಗಿ ಕೆಲವು ಸಮಯದವರೆಗೆ ಯಾವುದೇ ಚಿತ್ರಕ್ಕೆ ಸಹಿ ಹಾಕಲು ಸಿದ್ಧರಿಲ್ಲದಿದ್ದಾಗ ತನ್ನನ್ನು ಈ ಚಿತ್ರಕ್ಕಾಗಿ ಮನ್ಸೂರ್ ಸಂಪರ್ಕಿಸಿದ್ದಾರೆ. 

"ಅವರು ನನ್ನನ್ನು ಸಂಪರ್ಕಿಸಿದಾಗ, ನಟನೆಗೆ ಮರಳಲು ನನಗೆ ಸಾಧ್ಯವಾಗುವುದಿಲ್ಲ ಎನ್ನುವ ಅಸಹಾಯಕತೆಯನ್ನು ನಾನು ವ್ಯಕ್ತಪಡಿಸಿದ್ದೆ,  ಆದರೆ ಅವರು ನಾನೊಮ್ಮೆ ಕಥೆ ಕೇಳುವಂತೆ ಒತ್ತಾಯಿಸಿದರು. ಕಥೆ ನಿರೂಪಿಸಿದ ನಂತರ ನಾನಿದನ್ನು ಬಿಟ್ಟು ಬಿಡಲು ಆಗಲಿಲ್ಲ. ಕಥೆ ನನಗೆ ತುಂಬಾ ಆಸಕ್ತಿದಾಯಕವಾಗಿ ಕಾಣಿಸಿದೆ. ನಾನು ಅದನ್ನು ಮಾಡದಿರಲು ಯಾವುದೇ ಕಾರಣವಿರಲಿಲ್ಲ ಎನ್ನಿಸಿತು. ಆದ್ದರಿಂದ ನಾನು ಸೈನ್ ಅಪ್ ಮಾಡಲು ಮತ್ತು ಡೇಟ್ಸ್ ಗಳನ್ನು ಹೊಂದಿಸಲು ನಿರ್ಧರಿಸಿದೆ. ಟೀಂ ನನ್ನ ಅನುಕೂಲಕ್ಕೆ ಅನುಗುಣವಾಗಿ ಇಡೀ ಶೂಟಿಂಗ್ ಅನ್ನು ನಿಗದಿಪಡಿಸಿದೆ. ಅದ್ಭುತ ಕಥೆಯ ಭಾಗವಾಗಲು ನನಗೆ ಸಂತೋಷವಾಗಿದೆ. ”

ಚಿತ್ರದ ಕಥೆ ಪ್ರೇಕ್ಷಕರನ್ನು ಸೆಳೆಯುವ ಮುಖ್ಯ ಕೀಲಿ ಕೈಯಾಗಿದೆ. ಎನ್ನುವ ನಟಿ "ಪೋಸ್ಟರ್ ನಲ್ಲಿ ನಾನು ತುಂಬಾ ವಿಭಿನ್ನವಾಗಿ ಕಾಣುತ್ತಿರುವುದಾಗಿ ಜನ ಹೇಳೀದ್ದಾರೆ. ಇದು ಗಮನಿಸಬೇಕಾದ ಸಂಗತಿಯಾಗಿದೆ. ನಾನು ಪ್ರೇಕ್ಷಕಿಯಾಗಿದ್ದರೂ ಸಹ, ಈಕಥೆಯನ್ನು ಬೆಳ್ಳಿ ಪರದೆಯ ಮೇಲೆ ವೀಕ್ಷಿಸಲು ನನ್ನನ್ನು ಸೆಳೆಯುತ್ತಿತ್ತು. " ತಾನೆಂದಿಗೂ ಪ್ರಯೋಗಗಳನ್ನು ಮಾಡುವುದಕ್ಕೆ ಬಯಸುತ್ತೇನೆ ಎನ್ನುವ ಯಜ್ಞ ಶೆಟ್ಟಿ ನಾನು ಎದ್ದೇಳು ಮಂಜುನಾಥ ಮಾಡಿದ ನಂತರ ಭಾವನಾತ್ಮಕ ಚಿತ್ರಗಳು ನನಗೆ ಅನುಕೂಲವೆಂದು ಎಲ್ಲರೂ ಭಾವಿಸಿದ್ದರು.ನನ್ನನ್ನು ‘ಮೇಕಪ್ ನಟ’ ಮತ್ತು ‘ಒನ್ ಟೇಕ್ ಆರ್ಟಿಸ್ಟ್’ ಎಂದು ಟ್ಯಾಗ್ ಮಾಡಲಾಗಿದೆ. ಒಂದು ರೀತಿಯಲ್ಲಿ, ಇದು ನನಗೆ ಸಿಕ್ಕ ಆಶೀರ್ವಾದವೆಂದು ನಾನು ಭಾವಿಸಿದ್ದೇನೆ. ಚಲನಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರು ನಾನು ಗಂಭೀರ ನಟ ಎಂದು ಭಾವಿಸಿದ್ದು  ನಾನು ಯಾವುದೇ ಕಷ್ಟಕರವಾದ ಪಾತ್ರವನ್ನು ನಿರ್ವಹಿಸಬಹುದು ಎಂಬ ವಿಶ್ವಾಸದಲ್ಲಿದ್ದರು.  ಮನ್ಸೂರ್ ಸಹ ನಾನು ಈ ಪಾತ್ರವನ್ನು ಸಂಪೂರ್ಣವಾಗಿ ತೂಗಿಸಿಕೊಂಡು ಹೋಗಬಹುದೆಂದು ಭಾವಿಸಿದ್ದರು. "

<strong>ಯಜ್ಞಾ ಶೆಟ್ಟಿ</strong>
ಯಜ್ಞಾ ಶೆಟ್ಟಿ

ಕಮರ್ಷಿಯಲ್ ಚಿತ್ರಗಳನ್ನು ಮಾಡುವಾಗ ಒಂದು ಹಂತದ ನಂತರ ನೀರಸವೆನ್ನಿಸಬಹುದು. ಅಂತಹಾ ಪಾತ್ರಗಳು ವೀಕ್ಷಕರ ಮನಸ್ಸಿನಲ್ಲಿ ಉಳಿಯುತ್ತವೆ.“ನೀವು ಮೆಮೊರಿ ಲೇನ್‌ಗೆ ಇಳಿಯುವಾಗ, ನೀವು ಅಂತಹ ವಿಷಯಗಳನ್ನು ಆಯ್ಕೆ ಮಾಡಿದ್ದೀರಿ ಮತ್ತು ನಿರ್ವಹಿಸಲು ಕಷ್ಟಕರವಾದ ಪಾತ್ರಗಳನ್ನು ನೀವು ಅಭಿನಯಿಸಿದ್ದೀರಿಎಂಬ ಹೆಮ್ಮೆ ನಿಮ್ಮದಾಗಲಿದೆ. ಆಕ್ಟ್ 1978 ವಾಸ್ತವಕ್ಕೆ ಹತ್ತಿರವಿರುವ ಚಿತ್ರ ಮತ್ತು ನಾನು ಎಲ್ಲರ ನಿರೀಕ್ಷೆಗೆ ತಕ್ಕಂತೆ ಪಾತ್ರ ಮಾಡಿದ್ದೇನೆಂದು ನಾನು ಭಾವಿಸುತ್ತೇನೆ."

ಚಿತ್ರದಲ್ಲಿ ಚಿತ್ರಕಥೆಯೇ ನಾಯಕ ಎಂದು ನಟಿ ಹೇಳಿದ್ದಾರೆ. "ಒತ್ತೆಯಾಳುಗಳು, ಪೊಲೀಸ್ ಮತ್ತು ರಾಜಕಾರಣಿಗಳ ಪಾತ್ರಗಳನ್ನು ಒಳಗೊಂಡಂತೆ ತಯಾರಕರು ಕಥೆಗೆ ಸೂಕ್ತವಾದ ಪಾತ್ರವನ್ನು ತಂದಿದ್ದಾರೆ ಎಂದು ನಾನು ಭಾವಿಸುತ್ತೇನೆ, ಇವೆಲ್ಲವನ್ನೂ ಪ್ರಸಿದ್ಧ ಕಲಾವಿದರು ನಿರ್ವಹಿಸುತ್ತಾರೆ. ಆಕ್ಟ್ -1978 ಎಂಬುದು ಒಬ್ಬ ವ್ಯಕ್ತಿಯ ಹೋರಾಟವಲ್ಲ, , ಅದು ಅನೇಕ ಜನರು ಸಂಬಂಧಿಸಿದೆ. ಸರ್ಕಾರಿ ಕಚೇರಿಯಲ್ಲಿ ಹೆಜ್ಜೆ ಹಾಕದ ಒಬ್ಬ ವ್ಯಕ್ತಿಯೂ ಇಲ್ಲ, ಮತ್ತು ನಮ್ಮ ವ್ಯವಸ್ಥೆಯು ಹೇಗೆ ಚಲಿಸುತ್ತದೆ ಎಂಬುದರ ಬಗ್ಗೆ ಪ್ರೇಕ್ಷಕರು ಯೋಚಿಸುವಂತೆ ಮಾಡುವ ಚಿತ್ರ ಇದಾಗಿದೆ" ಎಂದು ಅವರು ಹೇಳೀದರು.

ಮದುವೆ ಮತ್ತು ಲಾಕ್‌ಡೌನ್ ಆಕೆಗೆ ಚಲನಚಿತ್ರಗಳಿಂದ ವಿರಾಮ ನೀಡಿದೆ, ಮತ್ತು ಒಳ್ಳೆಯ ಕಥೆಗಳು ಈಗ ತನ್ನ ಕಡೆಗೆ ಬರುತ್ತವೆ ಎಂದು ಅವರು ಆಶಿಸುತ್ತಾರೆ. . “ನಾನು ಚಿತ್ರರಂಗದಲ್ಲಿ ಉಳಿಯಲು ನಂಬರ್ ಗಳ ಹಿಂದೆ ಓಡುವ ನಾಯಕಿ ಅಲ್ಲ, ಮತ್ತು ಉತ್ತಮ ಯೋಜನೆಯ ಭಾಗವಾಗಲು ಕಾಯುವ ತಾಳ್ಮೆ ನನಗಿದೆ. ಪ್ರಸ್ತುತ ಆಕ್ಟ್ 1978 ಗೆ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ನಾನು ಎದುರು ನೋಡುತ್ತಿದ್ದೇನೆ, ”ಎಂದು ಅವರು ಹೇಳುತ್ತಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com