ಭೋಜಪುರಿ ಭಾಷೆಯಲ್ಲಿ ಹರ್ಷಿಕಾ ಪೂಣಚ್ಚ ನಟನೆ

ಕನ್ನಡ, ತಮಿಳು, ತೆಲುಗು, ಕೊಡವ, ಮಲಯಾಳಂ ಸೇರಿದಂತೆ ಈಗಾಗಲೇ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಹರ್ಷಿಕಾ ಪೂಣಚ್ಚ, ಇದೀಗ ಭೋಜಪುರಿ ಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚ
Updated on

ಬೆಂಗಳೂರು: ಕನ್ನಡ, ತಮಿಳು, ತೆಲುಗು, ಕೊಡವ, ಮಲಯಾಳಂ ಸೇರಿದಂತೆ ಈಗಾಗಲೇ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಹರ್ಷಿಕಾ ಪೂಣಚ್ಚ, ಇದೀಗ ಭೋಜಪುರಿ ಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಭೋಜ್‌ಪುರಿ ಚಿತ್ರರಂಗದ ಸೂಪರ್ ಸ್ಟಾರ್ ನಟ ಪವನ್ ಸಿಂಗ್ ಸಿನಿಮಾದ ನಾಯಕರಾಗಿದ್ದು, ಈ ಸಿನಿಮಾ ಭೋಜ್‌ಪುರಿ ಜೊತೆಗೆ ಹಿಂದಿ ಭಾಷೆಯಲ್ಲಿ ಸಹ ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಶೇ 50 ರಷ್ಟು ಪೂರ್ಣವಾಗಿದೆ. ಸಂಪೂರ್ಣ ಚಿತ್ರೀಕರಣ ಲಂಡನ್‌ನಲ್ಲಿಯೇ ನಡೆಯಲಿದೆಯಂತೆ.

ಹರ್ಷಿಕಾ ಈಗ ಸಿನಿಮಾ ಅರ್ಧ ಭಾಗದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಲವ್​ಸ್ಟೋರಿವುಳ್ಳ ಈ ಚಿತ್ರದ ಪೂರ್ತಿ ಸಿನಿಮಾದ ಚಿತ್ರೀಕರಣವು ಲಂಡನ್ ನಲ್ಲಿ ನಡೆಯಲಿದೆ. ಹೀಗಾಗಿ ಹರ್ಷಿಕಾ ಸದ್ಯ ಲಂಡನ್ ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ಹರ್ಷಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ.

ನನ್ನ ಪ್ರೀತಿಯ ಕನ್ನಡಿಗರಿಗೆ ನನ್ನ ನಮಸ್ಕಾರ.

ನೀವು ಸದಾ ನನ್ನನ್ನು ಬೆಳಿಸಿದ್ದೀರಿ, ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದೀರಿ. ಕಳೆದ 2 ವರ್ಷಗಳು ನನ್ನ ಜೀವನದ ಅತೀ ಕಷ್ಟದ ಹಾಗು ನೋವಿನ ಸಮಯ, ತಂದೆಯನ್ನು ಕಳೆಕೊಂಡು ನನ್ನ ಹಾಗು ಅಮ್ಮನ ಜೀವನ ದಿಕ್ಕು ತೋಚದಂತೆ ಆಗಿ ಹೋಗಿತ್ತು. ಈಗಲೂ ಅವರ ನೆನಪು ಸದಾ ಕಾಡುತ್ತೆ.

ಸರಿಯಾಗಿ ಒಂದೂವರೆ ವರ್ಷದ ನಂತರ ನಾನು ನನ್ನ ಸಿನಿಮಾ ಕೆಲಸವನ್ನು ಮತ್ತೆ ಶುರುಮಾಡಿದ್ದೇನೆ , ಒಂದು ಭೋಜಪುರಿ ಸಿನೆಮಾ ಶೂಟಿಂಗಾಗಿ ಲಂಡನ್ಗೆ ಬಂದಿದ್ದೇನೆ. ಈ ಹೊಸ ಸಿನೆಮಾಗೆ ನಿಮ್ಮೆಲರ ಆಶೀರ್ವಾದ ನನಗೆ ಅತ್ಯಗತ್ಯ ಎಂದಿಗೂ ನೆನಪಿಡಿ , ಬೇರೆ ಯಾವ ಭಾಷೆಯಲ್ಲಿಯು ನಾನು ಕೆಲಸ ಮಾಡಿದರು, ನಾನು ಇಂದಿಗೂ ಎಂದಿಗೂ ಕರ್ನಾಟಕದ ಕನ್ನಡದ ಮನೆ ಮಗಳು ಎಂದು ಬರೆದುಕೊಂಡಿದ್ದಾರೆ.

'ಆರೇಳು ಭಾಷೆಯಲ್ಲಿ ನಟಿಸಿದ ನನಗೆ ಇದೀಗ ಭೋಜಪುರಿಯಲ್ಲಿಯೂ ನಟಿಸುವ ಅವಕಾಶ ಸಿಕ್ಕಿದೆ. ಭೋಜಪುರಿಯಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಪವನ್ ಸಿಂಗ್ ಈ ಚಿತ್ರದ ನಾಯಕ. ಯಾಶಿ ಪ್ರೊಡಕ್ಷನ್ಸ್​ನಲ್ಲಿ ಅಭಯ್ ಸಿನ್ಹಾ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ’

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com