ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ರಾಜಕುಮಾರ’,'ಜೇಮ್ಸ್" ಚಿತ್ರದ ನಾಯಕಿ, ತಮಿಳು ನಟಿ ಪ್ರಿಯಾ ಆನಂದ್ ತಮ್ಮ ವಿಭಿನ್ನ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ. 2000 ರೂ. ಗರಿಗರಿ ನೋಟುಗಳ ಹಾರವನ್ನು ಕುತ್ತಿಗೆಗೆ ಹಾಕಿಕೊಂಡಿರುವ ಅವರ ಫೋಟೋಗಳು ಸಖತ್ ವೈರಲ್ ಆಗಿದೆ.
ಪ್ರಿಯಾ ಆನಂದ್ ತನ್ನ ಹೊಸ ಹಿಂದಿ ವೆಬ್ ಸರಣಿ 'ಎ ಸಿಂಪಲ್ ಮರ್ಡರ್' ಗಾಗಿ ಈ ಫೋಟೋಗಳನ್ನು ತೆಗೆಯಲಾಗಿದೆ ಎಂದು ವರದಿಯಾಗಿದೆ.
ತಮ್ಮ ಈ ವಿಭಿನ್ನ ಫೋಟೋಗಳನ್ನು ನಟಿ Sony Liv ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಎ ಸಿಂಪಲ್ ಮರ್ಡರ್' ಸಚಿನ್ ಪಾಠಕ್ ನಿರ್ದೇಶನದ ಬ್ಲಾಕ್ ಕಾಮಿಡಿ ಆಗಿದ್ದು , ಪ್ರಿಯಾ ಆನಂದ್, ಮೊಹಮ್ಮದ್ ಝೀಶನ್ ಅಯೂಬ್, ಸುಶಾಂತ್ ಸಿಂಗ್ ಮತ್ತು ಅಮಿತ್ ಸಿಯಾಲ್ ಪ್ರಮುಖ ಪಾತ್ರದಲ್ಲಿದ್ದಾರೆ.
Advertisement