ಗಣೇಶ್
ಸಿನಿಮಾ ಸುದ್ದಿ
ನವೆಂಬರ್ 30 ರಿಂದ 'ತ್ರಿಬಲ್ ರೈಡಿಂಗ್' 2ನೇ ಹಂತದ ಶೂಟಿಂಗ್!
ಕೊರೋನಾ ಲಾಕ್ ಡೌನ್ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮೊದಲ ಬಾರಿಗೆ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಅಕ್ಟೋಬರ್ 19 ರಂದು ಚಿಕ್ಕಮಗಳೂರಿನಲ್ಲಿ ಪ್ರಮುಖ ಭಾಗದ ಶೂಟಿಂಗ್ ಪೂರ್ಣಗೊಳಿಸಿದ್ದರು.
ಕೊರೋನಾ ಲಾಕ್ ಡೌನ್ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮೊದಲ ಬಾರಿಗೆ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಅಕ್ಟೋಬರ್ 19 ರಂದು ಚಿಕ್ಕಮಗಳೂರಿನಲ್ಲಿ ಪ್ರಮುಖ ಭಾಗದ ಶೂಟಿಂಗ್ ಪೂರ್ಣಗೊಳಿಸಿದ್ದರು.
ಸದ್ಯ ಚಿತ್ರತಂಡ ಸಿನಿಮಾದ ಹೊಸ ಫೋಟೋ ಶೇರ್ ಮಾಡಿದೆ, ಸದ್ಯ ಚಿತ್ರ ತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ಸಮಯ ನಿಗದಿ ಮಾಡಿದ್ದು, 20 ದಿನ ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲಿದೆ. ನವೆಂಬರ್ 30ರಿಂದ ಶೂಟಿಂಗ್ ಆರಂಭವಾಗಲಿದೆ.
ಕೌಟುಂಬಿಕ ಮನರಂಜನಾ ಸಿನಿಮಾವಾದ ತ್ರಿಬಲ್ ರೈಡಿಂಗ್ ಸಿನಿಮಾವನ್ನು ಮಹೇಶ್ ಗೌಡ ನಿರ್ದೇಶಿಸುತ್ತಿದ್ದು, ಗಣೇಶ್ಗೆ ಮೇಘ ಶೆಟ್ಟಿ, ರಚನಾ ಇಂದರ್ ಮತ್ತು ಅದಿತಿ ಪ್ರಭುದೇವ ನಾಯಕಿಯರಾಗಿ ನಟಿಸುತ್ತಿದ್ದಾರೆ.
ಕಾಮಿಡಿ ಸಿನಿಮಾವಾಗಿರುವ ತ್ರಿಬಲ್ ರೈಡಿಂಗ್ ನಲ್ಲಿ ರವಿಶಂಕರ್ ಕೂಡ ನಟಿಸುತ್ತಿದ್ದಾರೆ. ಸಾಯ್ ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದು, ಸಾಧು ಕೋಕಿಲಾ, ರಂಗಾಯಣ ರಘು, ಕುರಿ ಪ್ರತಾಪ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ