ವೀರಪ್ಪನ್ ವೆಬ್ ಸಿರೀಸ್: ಶಂಕರ್ ಬಿದರಿ ಪಾತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ

ಎಎಂಆರ್ ರಮೇಶ್ ಕಾಡುಗಳ್ಳ ವೀರಪ್ಪನ್ ಕುರಿತ ವೆಬ್ ಸಿರೀಸ್ ತಯಾರಿಸುತ್ತಿದ್ದಾರೆ, ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ವೆಬೆ ಸಿರೀಸ್ ಈಗಾಗಲೇ 36 ದಿನಗಳ ಶೂಟಿಂಗ್ ಮುಗಿಸಿದೆ.
ಸುನೀಲ್ ಶೆಟ್ಟಿ
ಸುನೀಲ್ ಶೆಟ್ಟಿ

ಎಎಂಆರ್ ರಮೇಶ್ ಕಾಡುಗಳ್ಳ ವೀರಪ್ಪನ್ ಕುರಿತ ವೆಬ್ ಸಿರೀಸ್ ತಯಾರಿಸುತ್ತಿದ್ದಾರೆ, ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ವೆಬೆ ಸಿರೀಸ್ ಈಗಾಗಲೇ 36 ದಿನಗಳ ಶೂಟಿಂಗ್ ಮುಗಿಸಿದೆ.

ಸದ್ಯದ ಹೊಸ ವಿಷಯವೆಂದರೇ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಈ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಪೈಲ್ವಾನ್ ನಟನ ಜೊತೆ ಚರ್ಚಿಸಿದ್ದು, ಈಗ ಕನ್ಫರ್ಮ್ ಆಗಿದೆ, ಸುನೀಲ್ ಶೆಟ್ಟಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ, 25 ರಿಂದ 30 ದಿನಗಳ ಶೆಡ್ಯೂಲ್ ನೀಡಿದ್ದು ಶೀಘ್ರದಲ್ಲೇ ಅವರು ಸೆಟ್
ಬರಲಿದ್ದಾರೆ, ಅವರು ನಮ್ಮ ಪ್ರಾಜೆಕ್ಟ್ ನ ಭಾಗವಾಗಿರುವುದು ನಮಗೆ ಖುಷಿ ತಂದಿದೆ ಎಂದು ರಮೇಶ್ ತಿಳಿಸಿದ್ದಾರೆ.

ಕಿಶೋರ್ ವೀರಪ್ಪನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಈ ವೆಬ್ ಸಿರೀಸ್ ನಲ್ಲಿ ವಿವೇಕ್ ಓಬೇರಾಯ್ ಅವರನ್ನು ಕರೆ ತರುವ ಯೋಜನೆಯಿದ್ದು, ಈ ಸಂಬಂಧ ವಿವೇಕ್ ತಂದೆ ಸುರೇಶ್ ಓಬೇರಾಯ್ ಅವರ ಜೊತೆ ಚರ್ಚಿಸಿರುವುದಾಗಿ ಹೇಳಿದ್ದಾರೆ. 

ಈ ವೆಬ್ ಸಿರೀಸ್‌ನಲ್ಲಿ ವೀರಪ್ಪನ್ ಬದುಕಿನ ಇನ್ನಷ್ಟು ರೋಚಕ ಸಂಗತಿಗಳನ್ನು ಬಿಚ್ಚಿಡಲು ರಮೇಶ್‌ ನಿರ್ಧರಿಸಿದ್ದಾರೆ. ಈ ವೆಬ್ ಸಿರೀಸ್‌ ಸುಮಾರು 10 ಗಂಟೆ ಅವಧಿಯಲ್ಲಿ ಮೂಡಿಬರಲಿದೆಯಂತೆ. 'ಅಟ್ಟಹಾಸ'ದಲ್ಲಿ ವೀರಪ್ಪನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ಕಿಶೋರ್ ಇಲ್ಲಿಯೂ ವೀರಪ್ಪನ್ ಅವತಾರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಇದು ಮೂಡಿಬರಲಿದ್ದು, ಆ ಭಾಷೆಯ ಜನಪ್ರಿಯ ನಟರು ಇದರಲ್ಲಿ ಬಣ್ಣ ಹಚ್ಚಲಿದ್ದಾರೆ. ರವಿ ಕಾಳೆ, ಸಂಪತ್, ರಾಯ್ ಲಕ್ಷ್ಮಿ, ವಿಜಯಲಕ್ಷ್ಮಿ ಮತ್ತು ಸುರೇಂದ್ರ ಪ್ರಸಾದ್ ಸೇರಿದಂತೆ ಹಲವರು ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com