'ರಾಜಮಾರ್ಗ' ವಿಶೇಷ ಮಕ್ಕಳ ಕುರಿತ ಚಿತ್ರ ನವೆಂಬರ್ ನಲ್ಲಿ ಬಿಡುಗಡೆ

ಮಕ್ಕಳ ಚಲನಚಿತ್ರ 'ರಾಜಮಾರ್ಗ' ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧಗೊಂಡಿದೆ. ಹಳ್ಳಿಯೊಂದರಲ್ಲಿ ವಾಸಿಸುವ ವಿಶೇಷ ಚೇತನ ಹುಡುಗ ಶಾಲೆಯಲ್ಲಿ ಅನುಭವಿಸುವ ಅವಮಾನ ಮತ್ತು ಬೆದರಿಕೆಯ ಕಥೆಯನ್ನು ಈ ಚಿತ್ರ ಹೇಳುತ್ತದೆ.
ರಾಜಮಾರ್ಗ ಚಿತ್ರದ ಪೋಸ್ಟರ್
ರಾಜಮಾರ್ಗ ಚಿತ್ರದ ಪೋಸ್ಟರ್
Updated on

ಮೈಸೂರು: ಮಕ್ಕಳ ಚಲನಚಿತ್ರ 'ರಾಜಮಾರ್ಗ' ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧಗೊಂಡಿದೆ.ಹಳ್ಳಿಯೊಂದರಲ್ಲಿ ವಾಸಿಸುವ ವಿಶೇಷ ಚೇತನ ಹುಡುಗ ಶಾಲೆಯಲ್ಲಿ ಅನುಭವಿಸುವ ಅವಮಾನ ಮತ್ತು ಬೆದರಿಕೆಯ ಕಥೆಯನ್ನು ಈ ಚಿತ್ರ ಹೇಳುತ್ತದೆ.

ಇದನ್ನು ಗಮನಿಸಿದ ರಾಜ ತಂದೆ , ಆತನ ಶಾಲೆಗೆ ಹೋಗುವುದು ಬೇಡ ಎಂದು ನಿರ್ಧರಿಸಿ ದನಗಳನ್ನು ಮೇಯಿಸುವ ಕೆಲಸವನ್ನು ವಹಿಸುತ್ತಾರೆ.ಒಂದು ದಿನ ಹಸುವೊಂದು ಕಾಣೆಯಾಗಿ ಮುಂದೆ ಎದುರುಸಬೇಕಾದ ಭಯ ಭೀತ ಸಂದರ್ಭಗಳನ್ನು ಕಲ್ಪಿಸಿಕೊಂಡು ರಾಜ ಮನೆ ಬಿಟ್ಟು ಓಡಿ ಹೋಗುತ್ತಾನೆ. ಶಾಲಾ ಶಿಕ್ಷಕರು ರಾಜನನ್ನು ಎಲ್ಲೆಡೆ ಹುಡುಕಲು ಪ್ರಯತ್ನಿಸಿದ್ದರೂ ಅವರ ಶ್ರಮವೆಲ್ಲಾ ವ್ಯರ್ಥವಾಗುತ್ತದೆ.

ಹಲವು ದಿನಗಳ ಬಳಿಕ ರಾಜನನ್ನು ಪ್ರಧಾನಿ ಸನ್ಮಾನಿಸಿರುವ ಸುದ್ದಿ ಹರಡಿ, ರಾಜನ ಹಳ್ಳಿಯ ಪ್ರತಿಯೊಬ್ಬರು ಆಶ್ಚರ್ಯ ಹಾಗೂ ಸಂತೋಷಪಡುತ್ತಾರೆ. ಹಳ್ಳಿಯಲ್ಲಿ ಯಾವಾಗಲೂ ಅವಮಾನ ಅನುಭವಿಸುತ್ತಿದ್ದ ರಾಜನಾ ಯಶಸ್ಸಿನ ಹಾದಿಯನ್ನು ತಿಳಿಯಲು ಕೆಲವರು ಕುತೂಹಲವುಳ್ಳವರಾಗಿರುತ್ತಾರೆ.

2 ಗಂಟೆ 12 ನಿಮಿಷದ ಚಿತ್ರ ನಿಸರ್ಗ ಸಿರಿ ಬ್ಯಾನರ್ ಅಡಿಯಲ್ಲಿ ನವೆಂಬರ್ ತಿಂಗಳಲ್ಲಿ ತೆರೆ ಮೇಲೆ ಬರಲಿದೆ. ಮೈಸೂರು, ಕೂರ್ಗ್, ಶ್ರೀನಿವಾಸ ಸಾಗರ, ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ.

ಮೈಸೂರಿನ ಪ್ರಿಯಾ ದರ್ಶನ್ (12) ಸಿನಿಮಾದಲ್ಲಿ ರಾಜುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಬಗ್ಗೆ ತುಂಬ ಎಕ್ಸೈಟ್ ಆಗಿದೆ. ಚಿತ್ರೀಕರಣಕ್ಕೂ ಮುಂಚೆ ಐದು ದಿನ ತರಬೇತಿ ಪಡೆದಿದ್ದೆ. ಆದಾಗ್ಯೂ, ಇದು ನನಗೆ ಹೊಸ ಅನುಭವವಾಗಿದೆ ಎಂದು ರಾಜು ಸಂತಸ ವ್ಯಕ್ತಪಡಿಸಿದ್ದಾನೆ.

ಡಾ. ವಿಷ್ಣು ಪ್ರಿಯಾನ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಪ್ರಿಯಾದರ್ಶನ್, ಭೈರವಿ,ಡಾ. ಕೆ. ರಮಾನಂದ್, ವಿಷ್ಣು ಪ್ರಿಯಾ, ಅಮೃತ ಮತ್ತಿತರರು ಈ ಚಿತ್ರದಲ್ಲಿದ್ದಾರೆ. ವಿನು ಮಾನಸು, ಸಂಗಿತ ಸಂಯೋಜಿಸಿದ್ದು, ಚಿತ್ರಕ್ಕೆ ವಾಸನ್ ಅವರ ಛಾಯಾಗ್ರಹಣವಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com