'ಕನ್ನಡಿಗ' ಮೂಲಕ ಟಾಮ್ ಆಲ್ಟರ್ ಅವರ ಮಗ, ಜೇಮಿ ಆಲ್ಟರ್ ಸ್ಯಾಂಡಲ್ ವುಡ್ ಪ್ರವೇಶ

ರವಿಚಂದ್ರನ್ ಅವರ 'ಕನ್ನಡಿಗ' ಚಿತ್ರದ ಮುಹೂರ್ತ ಇದೇ ವಿಜಯದಶಮಿಯಂದು ನಡೆಯಲಿದೆ. ನಿರ್ದೇಶಕ ಬಿ ಎಂ ಗಿರಿರಾಜ್ ಈ ಚಿತ್ರದ ಮೂಲಕ ಹೊಸದೊಂದು ಪ್ರಾರಂಭವನ್ನು ಎದುರು ನೋಡುತ್ತಿದ್ದಾರೆ.
ಜೇಮೀ ಆಲ್ಟರ್
ಜೇಮೀ ಆಲ್ಟರ್
Updated on

ರವಿಚಂದ್ರನ್ ಅವರ 'ಕನ್ನಡಿಗ' ಚಿತ್ರದ ಮುಹೂರ್ತ ಇದೇ ವಿಜಯದಶಮಿಯಂದು ನಡೆಯಲಿದೆ. ನಿರ್ದೇಶಕ ಬಿ ಎಂ ಗಿರಿರಾಜ್ ಈ ಚಿತ್ರದ ಮೂಲಕ ಹೊಸದೊಂದು ಪ್ರಾರಂಭವನ್ನು ಎದುರು ನೋಡುತ್ತಿದ್ದಾರೆ.

ಎನ್.ಎಸ್.ರಾಜ್‌ಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆಯಾಗಿರುವ ಜಟ್ಟ ನಿರ್ದೇಶಕ ಗಿರಿರಾಜ್ ಜತೆಗೆ ಪಾತ್ರವರ್ಗದಲ್ಲಿಯೂ ಮಹತ್ವದ ಹಿರಿಯ ಕಿರಿಯ ನಟ ನಟಿಯರೊದ್ದಾರೆ ಎನ್ನಲಾಗಿದೆ. 

ಇದಲ್ಲದೆ ಈ ಚಿತ್ರದ ಮೂಲಕ ಜೇಮೀ ಆಲ್ಟರ್  ಕನ್ನಡ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.  ಕನ್ನಡ ಭಾಷೆಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ನಿರ್ದೇಶಕರು, ಚಿತ್ರದ ಹೆಸರನ್ನು 'ಕನ್ನಡಿಗ' ಎಂದು ಇರಿಸಿದ್ದಾರೆ

ಕಥೆಯನ್ನು 1850 ರ ದಶಕದಲ್ಲಿ ಭಾರತದಲ್ಲಿ ಬ್ರಿಟಿಷ್ ಮತ್ತು ಪೋರ್ಚುಗೀಸ್ ಆಳ್ವಿಕೆಯ ಹಿನ್ನೆಲೆಯಲ್ಲಿ ಕಲ್ಪಿಸಿಕೊಳ್ಲಲಾಗಿದೆ. . ಕೆಲವು ಫ್ಲ್ಯಾಷ್‌ಬ್ಯಾಕ್  ದೃಶ್ಯಗಳು ವೀಕ್ಷಕರನ್ನು 1550 ರ ದಶಕಕ್ಕೆ ಕರೆದೊಯ್ಯುತ್ತವೆ. ಈ ಕಥೆಯು  ನೈಜ ಘಟನೆ ಆಧಾರಿತವಾಗಿದೆ,ಅಲ್ಲದೆ ಲೇಖಕರ ಕುಟುಂಬದಿಂದ ಬಂದ ಕನ್ನಡ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ಅಭಿನಯಿಸಿದ್ದಾರೆ. 

ಮಂಗಳೂರು, ಮಡಿಕೇರಿ ಮತ್ತು ಧಾರವಾಡಿನಲ್ಲಿ ನೆಲೆಸಿ ಇದಕ್ಕಾಗಿ ನಿರ್ದೇಶಕರು ಕನ್ನಡ ಭಾಷೆಯ ಬಗ್ಗೆ ಜ್ಞಾನ ಬೆಳೆಸಿಕೊಂಡಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ  ಕನ್ನಡ-ಇಂಗ್ಲಿಷ್ ನಿಘಂಟನ್ನು ತಯಾರಿಸಲು ಹೆಸರುವಾಸಿಯಾದ ಪಾದ್ರಿ ಮತ್ತು ಇಂಡಾಲಜಿಸ್ಟ್ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಪಾತ್ರದಲ್ಲಿ ಜೇಮೀ ಆಲ್ಟರ್  ಕಾಣಿಸಿಕೊಳ್ಳುತ್ತಿದ್ದಾರೆ, 

ಜೇಮಿ ಖ್ಯಾತ ನಟ ಟಾಮ್ ಆಲ್ಟರ್ ಅವರ ಪುತ್ರರಾಗಿದ್ದು, ಅವರು 1977 ರಲ್ಲಿ ಎಂ.ಎಸ್.ಸತ್ಯು ನಿರ್ದೇಶಿಸಿದ ಕನ್ನಡ ಚಲನಚಿತ್ರ ಕನ್ನೇಶ್ವರ ರಾಮ ಚಿತ್ರದ ಭಾಗವಾಗಿದ್ದರು, ಆಸಕ್ತಿದಾಯಕ ಚಿತ್ರದಲ್ಲಿ ಅಭಿನಯಿಸಲು ಉತ್ಸುಕರಾಗಿರುವ ಜೇಮಿ   ಮುಂದಿನ ತಿಂಗಳು ಬೆಂಗಳೂರಿಗೆ ಬರಲಿದ್ದಾರೆ. 

ಜೇಮೀ ಬೆಂಗಳೂರಿಗೆ ಹೊಸಬರಲ್ಲ. ಅವರು ಇಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ನಾಲ್ಕು ವರ್ಷಗಳ ಕಾಲ ನಗರದಲ್ಲಿ ಜೀವನ ನಡೆಸಿದ್ದಾರೆ. ಅಂದಿನ ದಿನಗಳನ್ನು ನೆನಪಿಸಿಕೊಂಡ ಜೇಮೀ ಬೆಂಗಳೂರಿನ ಬಗೆಗೆ ನನಗೆ ಅರಿವಿದೆ ಎನ್ನುತ್ತಾರೆ. 

ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ ಜೇಮಿ, ಈ ಕನ್ನಡ ಚಿತ್ರ ನನ್ನ ಹೊಸ ಪ್ರಾರಂಭ ಎನ್ನುತ್ತಾರೆ. . “ಇದು ನನಗೆ ಹೊಸದಾಗಿರುತ್ತದೆ, ಅದರಲ್ಲೂ ವಿಶೇಷವಾಗಿ ಭಾಷೆ ಮತ್ತು ಹಿರಿಯ ನಟ (ರವಿಚಂದ್ರನ್) ಮತ್ತು ಗಿರಿರಾಜ್ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅವಕಾಶ.  ಹೆಚ್ಚು ಉತ್ಸಾಹ ತಂದಿದೆ. ನಾನದನ್ನು ಖುಷಿಯಾಗಿ ಸ್ವೀಕರಿಸುತ್ತೇನೆ:

ಗಿರಿರಾಜ್ ನನ್ನನ್ನು ಸಂಪರ್ಕಿಸಿದಾಗ ಮತ್ತು ನಾನು  ಯೋಜನೆಯ ಬಗ್ಗೆ ಚರ್ಚಿಸಿದಾಗ, ಅವರು ಹೇಳಿದ್ದನ್ನೆಲ್ಲ ನಾನು ಯಾವುದೇ ಒತ್ತಡವಿಲ್ಲದೆ ಕೇಳಿಸಿಕೊಂಡೆ.  ಅವರು ನನಗೆ ಸಹಾಯ ಮಾಡಲು  ಒಪ್ಪಿದ್ದಾರೆ. ಇದನ್ನು ಹೊಸ ಯೋಜನೆ ಎಂದು ಪರಿಗಣಿಸಲು ಅವರು ನನ್ನನ್ನು ಕೇಳೀದ್ದಾರೆ ಎಂದು ನಟ ಹೇಳಿದರು. 

ಅಕ್ಟೋಬರ್ 26ರ ವಿಜಯದಶಮಿಯಂದು ಚಿತ್ರದ ಮುಹೂರ್ತ ನೆರವೇರಲಿದೆ. ವೆಂಬರ್‌ನಲ್ಲಿ ಚಿಕಮಗಳೂರಿನಲ್ಲಿ  ಚಿತ್ರೀಕರಣ ಪ್ರಾರಂಭವಾಗಲಿದೆ. ಕನ್ನಡಿಗದಲ್ಲಿ ರವಿ ಬಸ್ರೂರ್ ಸಂಗೀತ ಮತ್ತು ಜಿಎಸ್ವಿ ಸೀತಾರಾಮ್ ಅವರ ಛಾಯಾಗ್ರಹಣ ಇರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com