ಪ್ರಿಯಾ ಆನಂದ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಒಂದಾಗಲಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಜಕುಮಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದಕ್ಷಿಣ ಭಾರತೀಯ ಮತ್ತು ಬಾಲಿವುಡ್ ನಟ, ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚೇತನ್ ಕುಮಾರ್ ನಿರ್ದೇಶನದ ಆಕ್ಷನ್ ಕಮರ್ಷಿಯಲ್ ಎಂಟರ್ಟೈನರ್ ಪ್ರಸ್ತುತ ಶೂಟಿಂಗ್ ಸಿದ್ದತೆಯಲ್ಲಿದೆ.
ನಾಯಕಿಯ ಹುಡುಕಾಟ ಸ್ವಲ್ಪ ಸಮಯದಿಂದ ನಡೆಯುತ್ತಿತ್ತು, ಮತ್ತು ಕೆಲವು ಹೆಸರುಗಳು ರೌಂಡ್ ಅಪ್ ಆಗುತ್ತಿದ್ದವು. ಹೆಚ್ಚಿನ ಆಲೋಚನೆಯ ನಂತರ, ರಾಜಕುಮಾರ ಜೋಡಿಯನ್ನು ಮರಳಿ ತರಲು ತಂಡ ನಿರ್ಧರಿಸಿದೆ. ಆದರೆ ಈ ಸಂಬಂಧ ಅಧಿಕೃತ ಪ್ರಕಟಣೆ ಮಾತ್ರ ಇನ್ನೂ ಬಾಕಿ ಇದೆ. ತನ್ನ ಮೊದಲ ಚಿತ್ರದಲ್ಲಿಯೇ ಕನ್ನಡ ಪ್ರೇಕ್ಷಕರ ಮನಗೆದ್ದ ಪ್ರಿಯಾ, ಗಣೇಶ್ ಅವರೊಂದಿಗೆ ಆರೆಂಜ್ ಚಿತ್ರದಲ್ಲೂ ಅಭಿನಯಿಸಿದ್ದಾರೆ.
ಜೇಮ್ಸ್ ಪ್ರಿಯಾ ಪಾಲಿಗೆ ಮೂರನೇ ಕನ್ನಡ ಚಿತ್ರವಾಗಿದ್ದು ಇದಲ್ಲದೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಚಿತ್ರವೊಂದಕ್ಕೆ ಸಹ ಅವರು ಒಪ್ಪಿದ್ದಾರೆ. "ಆರ್‌ಡಿಎಕ್ಸ್, " ಹೆಸರಿನ ಈ ಚಿತ್ರದ ಶೂಟಿಂಗ್ ಪ್ರಾರಂಭಿಸಿಲ್ಲ. ತಮಿಳು, ಮಲಯಾಳಂ, ಹಿಂದಿ, ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ ಬಹುಭಾಷಾ ನಟ ಕೊನೆಯ ಬಾರಿಗೆ ಧ್ರುವ ವಿಕ್ರಮ್ ಅವರ ಚೊಚ್ಚಲ ಚಿತ್ರ ಆದಿತ್ಯ ವರ್ಮದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ನಟಿಯಮುಂದಿನ ಚಿತ್ರ ಸುಮೋ ಕಾಮಿಡಿ ಡ್ರಾಮಾದಲ್ಲಿ ಪ್ರಿಯಾ ಶಿವನ ಜೊತೆಯಲ್ಲಿ ಜೋಡಿಯಾಗಿದ್ದಾರೆ.
ಜೇಮ್ಸ್ ಅನ್ನು ಕಿಶೋರ್ ಪಾತಿಕೊಂಡ ನಿರ್ಮಿಸುತ್ತಿದ್ದು, ಮೊದಲ ಬಾರಿಗೆ ಚರಣ್ ರಾಜ್ ಪುನೀತ್ ಅಭಿನಯದ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಈಗಾಗಲೇ ತನ್ನ ಟೈಟಲ್ ಪೋಸ್ಟರ್ ಮತ್ತು ಟೀಸರ್ ಮೂಲಕ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಜೇಮ್ಸ್, ತೆಲುಗು ನಟ ಶ್ರೀಕಾಂತ್, ಅನು ಪ್ರಭಾಕರ್ ಮತ್ತು ಆದಿತ್ಯ ಮೆನನ್ ಸೇರಿದಂತೆ ಹಲವಾರು ನಟ ನಟಿಯರನ್ನು ಒಳಗೊಂಡಿರಲಿದೆ.
Advertisement