ಮನ್ಸೂರ್ ನಿರ್ದೇಶನದ  'ಆಕ್ಟ್ 1978' ನವೆಂಬರ್‌ನಲ್ಲಿ ತೆರೆಗೆ

ಕೊರೋನಾ ಸಾಂಕ್ರಾಮಿಕ ಮಾನದಂಡಗಳ ಅಡಿಯಲ್ಲಿ ಚಿತ್ರಮಂದಿರ ಮತ್ತೆ ಪ್ರಾರಂಭವಾಗುವುದರೊಡನೆ ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ಥಿಯೇಟರ್ ಗೆ ತರಲು ಸಜ್ಜಾಗುತ್ತಿದ್ದಾರೆ. ಅದೇ ರೀತಿ ನಿರ್ದೇಶಕ ಮನ್ಸೋರ್ ಅವರ"ಆಕ್ಟ್ 1978" ನವೆಂಬರ್ ನಲ್ಲಿ ಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ.
ಆಕ್ಟ್ 1978
ಆಕ್ಟ್ 1978
Updated on

ಕೊರೋನಾ ಸಾಂಕ್ರಾಮಿಕ ಮಾನದಂಡಗಳ ಅಡಿಯಲ್ಲಿ ಚಿತ್ರಮಂದಿರ ಮತ್ತೆ ಪ್ರಾರಂಭವಾಗುವುದರೊಡನೆ ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ಥಿಯೇಟರ್ ಗೆ ತರಲು ಸಜ್ಜಾಗುತ್ತಿದ್ದಾರೆ. ಅದೇ ರೀತಿ ನಿರ್ದೇಶಕ ಮನ್ಸೋರ್ ಅವರ"ಆಕ್ಟ್ 1978" ನವೆಂಬರ್ ನಲ್ಲಿ ಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ.

ರಾಷ್ಟ್ರ ಪ್ರಶಸ್ತಿ  ಪುರಸ್ಕೃತ "ಹರಿವು"ಮತ್ತು "ನಾತಿಚರಾಮಿ"ಯಂತಹ ಚಿತ್ರಗಳ ನಿರ್ದೇಶಕ ಮನ್ಸೂರ್ ಮತ್ತೊಮ್ಮೆ ಮಹಿಳಾ ಕೇಂದ್ರಿತ ವಿಷಯವನ್ನಿಟ್ಟು ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆದು ಅವರೇ ನಿರ್ದೇಶನವನ್ನೂ ಮಾಡಿದ್ದಾರೆ.

ಚಿತ್ರದಲ್ಲಿ ಒಟ್ಟಾರೆ 28 ಕಲಾವಿದರಿರಲಿದ್ದು ಅವರ ಪೈಕಿ ಯಜ್ಞ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಿ ಸುರೇಶ್, ಶ್ರುತಿ, ಮತ್ತು ಅಚ್ಯುತ್ ಕುಮಾರ್ ಪ್ರಮುಖರಿದ್ದಾರೆ.

ಚಿತ್ರಕ್ಕೆ ಸೆನ್ಸಾರ್ ಮಂಡಳಿ " ಯು" ಪ್ರಮಾಣಪತ್ರ ನೀಡಿದೆ. “ಸಾಂಕ್ರಾಮಿಕ ರೋಗದ ಪರಿಸ್ಥಿತಿಯ ಮಧ್ಯೆ ನಾನು ಚಲನಚಿತ್ರವನ್ನು ಬಿಡುಗಡೆ ಮಾಡುವ  ತೊಂದರೆ ತೆಗೆದುಕೊಳ್ಳುತ್ತಿದ್ದೇನೆ. ಆದರೆ ಈ ಚಿತ್ರವನ್ನು ವೀಕ್ಷಿಸಲು ಜನೌ ಚಿತ್ರಮಂದಿರಕ್ಕೆ ಬರುತ್ತಾರೆನ್ನುವ ವಿಶ್ವಾಸವಿದೆ. ನವೆಂಬರ್ 1 ರಂದು ನಾನು  ನನ್ನ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದ್ದೇನೆ. ಆದಾಗ್ಯೂ ಚಿತ್ರವು ದೀಪಾವಳಿಯ ನಂತರ ಬಿಡುಗಡೆಯಾಗಲಿದೆ ”ಎಂದು ನಿರ್ದೇಶಕರು ಹೇಳುತ್ತಾರೆ.

ಗರ್ಭಿಣಿ ಮಹಿಳೆ ಪಿಸ್ತೂಲ್ ಮತ್ತು ವಾಕಿ ಟಾಕಿಯನ್ನು ಹಿಡಿದಿರುವ ಪೋಸ್ಟರ್‌ನೊಂದಿಗೆ ಮನ್ಸೋರ್ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದ್ದಾರೆ. ಅಲ್ಲದೆ ಆಕೆಯ ಸೊಂಟಕ್ಕೆ ಬಾಂಬ್ ಕಟ್ಟಲಾಗಿದೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ನಿಜ ಘಟನೆಯೊಂದನ್ನು ಆಧರಿಸಿದ ಚಿತ್ರವಿದು ಎಂದು ಹಿಂದೊಮ್ಮೆ ನಿರ್ದೇಶಕರು ಸಂದರ್ಶನವೊಂದರಲ್ಲಿ ಹೇಳಿದ್ದರು. ನಗರೀಕರಣ ಮತ್ತು ಪರಕೀಯತೆಯ ನಡುವಿನ ಸಂಬಂಧವನ್ನು,  ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು ಚಿತ್ರದಲ್ಲಿ ಪರಿಶೋಧನೆಗೆ ಒಳಪಡಿಸಲಾಗಿದೆ. 

"ಆಕ್ಟ್ 1978"  ಡಿ ಕ್ರಿಯೇಷನ್ಸ್ ಅಡಿಯಲ್ಲಿ ತಯಾರಿಸಲ್ಪಟ್ಟಿದೆ, ಸತ್ಯ ಹೆಗ್ಡೆ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ ಬರೆದ ಸಾಹಿತ್ಯಕ್ಕೆ ರಾಹುಲ್ ಶಿವಕುಮಾರ್ ಸಂಗೀತ ನೀಡಿದರೆ, ಸಂತೋಷ್ ಪಾಂಚಾಲ್ ಕಲಾ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com