ಕಾನೂನು ಬಾಹಿರವಾಗಿ ಬಂಡೀಪುರದಲ್ಲಿ ನೈಟ್ ಸಫಾರಿ: ನಟ ಧನ್ವೀರ್ ವಿರುದ್ಧ ಆರೋಪ

ಕಾನೂನು ಬಾಹಿರವಾಗಿ ಬಂಡೀಪುರದಲ್ಲಿ ನೈಟ್ ಸಫಾರಿ: ನಟ ಧನ್ವೀರ್ ವಿರುದ್ಧ ಆರೋಪ

ನಟ ಧನ್ವೀರ್ ರಾತ್ರಿ ವೇಳೆ ಕಾನೂನು ಬಾಹಿರವಾಗಿ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದರೆಂಬ ಆರೋಪ ಕೇಳಿ ಬಂದಿದೆ.  ಧನ್ವೀರ್  ಸಫಾರಿ ನಡೆಸಿದ್ದೆನ್ನಲಾದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ನೆಟಿಗರು ನಟನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು: ನಟ ಧನ್ವೀರ್ ರಾತ್ರಿ ವೇಳೆ ಕಾನೂನು ಬಾಹಿರವಾಗಿ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದರೆಂಬ ಆರೋಪ ಕೇಳಿ ಬಂದಿದೆ.  ಧನ್ವೀರ್  ಸಫಾರಿ ನಡೆಸಿದ್ದೆನ್ನಲಾದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ನೆಟಿಗರು ನಟನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧವಿದ್ದರೂ ಧನ್ವೀರ್ ಹಾಗೂ ಅವರ ಸ್ನೇಹಿತರು ರಾತ್ರಿ ವೇಳೆ ಸಫಾರಿ ಮಾಡಿದ್ದಾರೆಂದು ಹೇಳಲಾಗಿದೆ. ಆದರೆ ಬಡೀಪುರದ ಯಾವ ಜಾಗದಲ್ಲಿ ಈ ಸಫಾರಿ ಮಾಡಲಾಗಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ.

"ನಟ ರಾತ್ರಿ ಸಮಯದಲ್ಲಿ ಬಂಡೀಪುರದಲ್ಲಿಸಫಾರಿ ನಡೆಸಿದ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಪರಿಶೀಲಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಒಂದೊಮ್ಮೆ ಅರಣ್ಯ ಇಲಾಖೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದರೆ ಅವರ ವಿರುದ್ಧ ಸಹ ಶಿಸ್ತು ಕ್ರಮ ಜರುಗಿಸುತ್ತೇವೆ" ಬಂಡೀಪುರ ಸಿಎಫ್ಒ ಬಾಲಚಂದ್ರ  ಹೇಳಿದ್ದಾರೆ.

ಇದರ ನಡುವೆ ನಟ ಧನ್ವೀರ್ ಮಾದ್ಯಮದೊಂದಿಗೆ ಮಾತನಾಡಿ "ನಾನು ಸಂಜೆ 4.3-0 ರಿಂದ 6.30ರ ನಡುವೆ ಸಫಾರಿ ಹೋಗಿದ್ದೆ. ಯಾವ ಪ್ರಾಣಿಯೂ ಕಾಣಿಸಿರಲಿಲ್ಲ. ಆದರೆ ಕಡೆ ಘಳಿಗೆಯಲ್ಲಿ ನಮ್ಮ ವಾಹನದ ಮುಂದೆ ಹುಲಿಯೊಂದು ಹಾದು ಹೋಗಿದ್ದು ಅದರ ವಿಡಿಯೋ ಮಾಡಿದ್ದೆ. ಇದು ಇಷ್ಟು ವಿವಾದವಾಗಿದೆ ಎನ್ನುವುದು ನನಗೆ ನಂಬಲಾಗುತ್ತಿಲ್ಲ. ನಾನು ಅರಣ್ಯ ಇಲಾಖೆಯ ವಾಹನದಲ್ಲೇ ಸಫಾರಿ ಹೋಗಿದ್ದು ಆ ವಾಹನ ಸಂಜೆ  6.30ರ ನಂತರ ಲಭ್ಯವಿರುವುದಿಲ್ಲ, ಸರ್ಕಾರದ ನಿಯಮದ ಅನುಸಾರವೇ ಸಫಾರಿ ಮುಗಿಸಿದ್ದೇನೆ, ಯಾವ ಕಾನೂನು ಮುರಿದಿಲ್ಲ" ಎಂದಿದ್ದಾರೆ. 
 

Related Stories

No stories found.

Advertisement

X
Kannada Prabha
www.kannadaprabha.com