ಶ್ರೀಕೃಷ್ಣ@Gmail.com ನಲ್ಲಿ ವಿಶೇಷ ಪಾತ್ರದಲ್ಲಿ ಚಂದನ್ ಕುಮಾರ್

ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ@Gmail.com ಸಿನಿಮಾದಲ್ಲಿ  ಚಂದನ್ ಕುಮಾರ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಂದನ್ ಕುಮಾರ್
ಚಂದನ್ ಕುಮಾರ್
Updated on

ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ@Gmail.com ಸಿನಿಮಾದಲ್ಲಿ  ಚಂದನ್ ಕುಮಾರ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲವ್ ಯೂ ಅಲಿಯಾ ಮತ್ತು ಪ್ರೇಮ ಬರಹ ಸಿನಿಮಾಗಳಲ್ಲಿ ನಟಿಸಿದ್ದ ಚಂದನ್ ಕುಮಾರ್ ಕಿರತೆರೆಯ ಧಾರಾವಾಹಿಯಲ್ಲಿ ಪ್ರಖ್ಯಾತರಾಗಿದ್ದವರು.

ಶ್ರೀಕೃಷ್ಣ@Gmail.com ನಲ್ಲಿ ತಮ್ಮ ಭಾಗದ ಶೂಟಿಂಗ್ ಮುಗಿಸಿರುವುದಾಗಿ ಚಂದನ್ ತಿಳಿಸಿದ್ದಾರೆ. ಆದರೆ ಅದರಲ್ಲಿ ಯಾವ ಪಾತ್ರ ಎಂಬುದನ್ನು ಬಹಿರಂಗಪಡಿಸಿಲ್ಲ. ಸಂದೇಶ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಕನ್ನಡ ಮತ್ತು ಮಲಯಾಳಂಗಳಲ್ಲಿ ತೆರೆ ಕಾಣಲಿದೆ. 

ಕೃಷ್ಣ ನಾಯಕನಾಗಿರು ಶ್ರೀಕೃಷ್ಣ@Gmail.com ಸಿನಿಮಾದಲ್ಲಿ ಭಾವನಾ ವಕೀಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ ಪ್ರಧಾನ ಪಾತ್ರದಲ್ಲಿ  ನಟಿಸಿದ್ದಾರೆ. 

ಶ್ರೀಕೃಷ್ಣ@Gmail.com ಸಿನಿಮಾ ಶೂಟಿಂಗ್ ಜೂನ್ ನಲ್ಲಿ ಆರಂಭವಾಗಿದ್ದು, ಶೇ.70 ರಷ್ಟು ಶೂಟಿಂಗ್ ಪೂರ್ಣಗೊಂಡಿದೆ. ನವೆಂಬರ್ ತಿಂಗಳಲ್ಲಿ ಮತ್ತೆ ಶೂಟಿಂಗ್ ಆರಂಭಿಸಲು ಚಿತ್ರ ತಂಡ ಸಿದ್ಧತೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com