ಗಾಂಜಾ ಎನ್ನೋದು ಡ್ರಗ್ಸ್ ಅಲ್ಲ ಮೆಡಿಸಿನ್, ನಾನೂ ತೆಗೆದುಕೊಳ್ಳುತ್ತೇನೆ: ಯುವನಟ ರಾಕೇಶ್ ಅಡಿಗ

ಗಾಂಜಾ ಒಂದು ಡ್ರಗ್ಸ್ ಅಲ್ಲ ಅದೊಂದು ಔಷಧ(ಮೆಡಿಸಿನ್) ಆಗಿದೆ. ನಾನೂ ಅದನ್ನು ತೆಗೆದುಕೊಳ್ಳುತ್ತೇನೆ ಎಂದು ಕನ್ನಡ ಚಿತ್ರರಂಗದ ಯುವನಟ ರಾಕೇಶ್ ಅಡಿಗ ಹೇಳಿದ್ದಾರೆ.
ರಾಕೇಶ್ ಅಡಿಗ
ರಾಕೇಶ್ ಅಡಿಗ

ಗಾಂಜಾ ಒಂದು ಡ್ರಗ್ಸ್ ಅಲ್ಲ ಅದೊಂದು ಔಷಧ(ಮೆಡಿಸಿನ್) ಆಗಿದೆ. ನಾನೂ ಅದನ್ನು ತೆಗೆದುಕೊಳ್ಳುತ್ತೇನೆ ಎಂದು ಕನ್ನಡ ಚಿತ್ರರಂಗದ ಯುವನಟ ರಾಕೇಶ್ ಅಡಿಗ ಹೇಳಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಖಾಸಗಿ ವಾಹಿನಿಗೆ ಮಾತನಾಡಿದ ಯುವನಟ "ಗಾಂಜಾ ಬಗ್ಗೆ ತಪ್ಪು ಕಲ್ಪನೆ ಇದೆ. ಅದನ್ನು ಹೋಗಲಾಡಿಸಬೇಕು. ಅಲ್ಲದೆ ಗಾಂಜಾವನ್ನು ಕಾನೂನುಬದ್ದಗೊಳಿಸನೇಕು" ಎಂದಿದ್ದಾರೆ.

"ಡ್ರಗ್ಸ್ ಮಾಫಿಯಾ ಹೆಸರಲ್ಲಿ ಸ್ಯಾಂಡಲ್ ವುಡ್ ನಲ್ಲಿ ಕೆಲವರನ್ನು ಮಾತ್ರ ಗುರುತಿಸುವುದು ಸರಿಯಲ್ಲ. ಮೊದಲು ಯಾರು ಅದನ್ನು ತೆಗೆದುಕೊಳ್ಳುತ್ತಾರೆ ಎಂಬುದಕ್ಕಿಂತ ಯಾರು ಅದನ್ನು ದೂರದಿಂದ ತಂದು ಮಾರುತ್ತಾರೆ ಅವರನ್ನು ಹಿಡಿಯಿರಿ. ಅಲ್ಲದೆ ನಾನೊಬ್ಬ ಸಾಮಾನ್ಯ  ಪ್ರಜೆಯಾಗಿ ಹೇಳುವುದಾದರೆ ಗಾಂಜಾ ಒಂದು ಗಿಡವಾಗಿದ್ದು ಅದಕ್ಕೆ ತನ್ನದೇ ಇತಿಹಾಸವಿದೆ .ಪ್ರಧಾನಿ ಮೋದಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಆಯುಷ್ಮಾನ್ ಇಲಾಖೆ ಸಹ ಗಾಂಜಾ ಬಗ್ಗೆ ಸಂಶೋಧನೆ ನಡೆಸುತ್ತಿದೆ." ಎಂದರು

ಮುಂದುವರಿದು "ಅಮೆರಿಕಾದಲ್ಲಿ ಗಾಂಜಾ ಕಾನೂನುಬದ್ದ ವಸ್ತುವಾಗಿದೆ. ಅಮೆರಿಕಾವನ್ನೇ ಎಲ್ಲಾ ವಿಚಾರಗಳಲ್ಲಿ ಹಿಂಬಾಲಿಸುವ ನಮ್ಮಲ್ಲಿ ಹೀಗೇಕೆ ನಡೆಯುತ್ತಿದೆ? ಗಾಂಜಾದಿಂದ ಆರ್ಥಿಕತೆ, ಔಷಧ ಉದ್ಯಮಕ್ಕೂ ಲಾಭವಿದೆ" ಎಂದು ರಾಕೇಶ್ ಅಡಿಗ ಹೇಳಿದ್ದಾರೆ.

ಭಾರತದಲ್ಲಿ 1985ರಲ್ಲಿ ಗಾಂಜಾವನ್ನು ಮಾದಕವಸ್ತು ಪಟ್ಟಿಗೆ ಸೇರಿಸಿ ನಿಷೇಧಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com