ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲದ ನಂಟಿದೆ ಎಂಬ ಚರ್ಚೆ ಆರಂಭವಾದ ದಿನದಿಂದಲೂ ಸಾಮಾಜಿಕ ಕಾರ್ಯಕರ್ತ, ಚಲನಚಿತ್ರ ವಿತರಕ ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಸಂಜನಾ ಕಿಡಿ ಕಾರುತ್ತಲೇ ಇದ್ದಾರೆ.
ಈಗಾಗಲೇ ಕಾಡು ಹಂದಿ ಹಾಗೂ ಬೀದಿನಾಯಿಗೆ ಸಂಬರಗಿಯವನ್ನು ಹೋಲಿಸಿರುವ ನಟಿ ಸಂಜನಾ, ಸೋಮವಾರ ಮತ್ತೆ ಆಕ್ರೋಶ ಹೊರ ಹಾಕಿದ್ದು, ಸಂಬರಗಿಯನ್ನು ಸುಮ್ಮನೆ ಬಿಡಬೇಡಿ ಎಂದು ಶಾಸಕ ಜಮೀರ್ ಅಹ್ಮದ್ ಅವರಲ್ಲಿ ಮನವಿ ಮಾಡಿದ್ದಾರೆ.
"ಸಂಬರಗಿಗೆ ಯಾವುದೇ ಕೆಲಸವಿಲ್ಲ. ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾನೆ. ನಾನೊಬ್ಬ ಸೆಲೆಬ್ರಿಟಿಯಾಗಿರುವ ಕಾರಣ ನನ್ನ ಹಿಂದೆ ಬಿದ್ದಿದ್ದಾನೆ. ಃಆಗಾಗಿ ಬೀದಿ ನಾಯಿ ಸಂಬರಗಿಯನ್ನು ಸುಮ್ಮನೆ ಬಿಡಬೇಡಿ" ಎಂದು ನಟಿ ಶಾಸಕ ಜಮೀರ್ ಅವರಲ್ಲಿ ಮನವಿ ಮಾಡಿದ್ದಾರೆ.
ರಾಹುಲ್ ನನ್ನ ಸ್ವಂತ ತಮ್ಮನಲ್ಲ, ಅವನು ಸಿಕ್ಕಿಕೊಂಡಾಗ ನನಗೇಕೆ ಹಿಂಸೆ ಕೊಡುತ್ತೀರಿ? ಈ ಎಲ್ಲದರಿಂದ ನನಗೆ ಕಿರುಕುಳ ಉಂಟಾಗಿದೆ. ನನ್ನ ತಾಯಿಗೆ ಅನಾರೋಗ್ಯವಾಗಿದೆ. ಒಂದೊಮ್ಮೆ ನನ್ನ ತಾಯಿಗೆ ಏನಾದರೂ ಆದದ್ದಾದರೆ ಸಂಬರಗಿಯನ್ನು ನಾನು ಸತ್ತರೂ ಬಿಡಲ್ಲ ಎಂದು ನಟಿ ಹೇಳಿದರು.
ಇದೇ ವೇಳೆ ನಟಿ ಸಂಜನಾ ಶ್ರೀಲಂಕಾ ಕ್ಯಾಸಿನೋಗೆ ತಾನು ಅತಿಥಿಯಾಗಿ ಭೇಟಿ ನೀಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ. ಶ್ರೀಲಂಕಾದ ಬ್ಯಾಲಿಸ್ ಕ್ಯಾಸಿನೋಗೆ ಭೇಟಿ ಕೊಟ್ಟಿದ್ದು ನಿಜ. ಅಲ್ಲಿಗೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ. ಅಲ್ಲದೆ ಅಲ್ಲಿಗೆ ನಾನೊಬ್ಬಳೇ ಅಲ್ಲ ನಟರಾದ ಯಶ್, ಉಪೇಂದ್ರ ಇನ್ನೂ ಮೊದಲಾದವರು ಹೋಗಿದ್ದಾರೆ. ವಿವೇಕ್ ಒಬೆರಾಯ್ ಸಹ ನಮ್ಮೊಂದಿಗಿದ್ದರು ಎಂದಿದ್ದಾರೆ.
Advertisement