'ಇಕ್ಕತ್' ನಲ್ಲಿ ಎಲ್ಲವೂ ವಿಶೇಷವಾಗಿದೆ: ಚೊಚ್ಚಲ ಸಿನಿಮಾ ಬಗ್ಗೆ ಭೂಮಿಶೆಟ್ಟಿ ಮಾತು

ಭೂಮಿ ಶೆಟ್ಟಿ
ಭೂಮಿ ಶೆಟ್ಟಿ
Updated on

ಕಿನ್ನರಿ ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಭೂಮಿಶೆಟ್ಟಿ ಇಕ್ಕತ್ ಎನ್ನುವ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಲಿದ್ದಾರೆ.

ಕಾಮಿಡಿ-ಡ್ರಾಮಾ ಮೂಲಕ ಕನ್ನಡ ಸಿನಿಮಾರಂಗತ್ತೆ ಪಾದಾರ್ಪಣೆ ಮಾಡುತ್ತಿರುವ ಭೂಮಿ ಶೆಟ್ಟಿ ನಾಗಭೂಷಣ್ ಗೆ ನಾಯಕಿಯಾಗಿ  ನಟಿಸುತ್ತಿದ್ದಾರೆ.

ಇಶಾನ್ ಖಾನ್ ಮತ್ತು ಅವರ ಸಹೋದರ ಹಸೀನ್ ಖಾನ್ ಇಕ್ಕತ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ, ಈ ಇಬ್ಬರು ಈ ಹಿಂದೆ ಲೂಸ್ ಕನೆಕ್ಷನ್ ಎಂಬ ವೆಬ್ ಸಿರೀಸ್ ಮಾಡಿದ್ದರು. ಹೇಟ್ ಯೂ ರೋಮಿಯೋ ವೆಬ್ ಸಿರೀಸ್ ಇನ್ನೂ ರಿಲೀಸ್ ಆಗಬೇಕಿದೆ.

ಈ ಇಬ್ಬರು ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಭೂಮಿ ಶೆಟ್ಟಿಗಾಗಿ ಈ ಕಥೆ ಮಾಡಲಾಗಿದೆ. ಲಾಕ್ ಡೌನ್ ಕುರಿತ ಸಿನಿಮಾ ಇದಾಗಿದ್ದು, ಲಾಕ್ ಡೌನ್ ಸಮಯದಲ್ಲೇ ಸಿನಿಮಾ ಪೂರ್ಣಗೊಳಿಸಲಾಗಿದೆ.

ಇದೊಂದು ವಿಚ್ಛದಿತ ದಂಪತಿಯ ಕುರಿತ ಕಥೆಯಾಗಿದ್ದು, ಲಾಕ್ ಡೌನ್ ವೇಳೆ ಇಬ್ಬರು ಜೊತೆಯಾಗಿಯೇ ಬದುಕುವ ಅನಿವಾರ್ಯತೆಯಿಂದ ಎದುರಾಗುವ ಅಚ್ಚರಿ ಬಗ್ಗೆ ಸಿನಿಮಾ ಕತೆಯಿದೆ. 

ಸಿನಿಮಾ ಬಗ್ಗೆ ಮಾತನಾಡಿರುವ ನಟಿ ಭೂಮಿ ಶೆಟ್ಟಿ ಈ ಪ್ರಾಜೆಕ್ಟ್ ನನಗೆ ಸಿಕ್ಕಿದ್ದು, ಅನಿರೀಕ್ಷಿತ, ಕಥೆ ಕೇಳಿದ ಮೇಲೆ ನಿರಾಕರಿಸಲು ಮನಸ್ಸಾಗಲಿಲ್ಲ ಎಂದು ಭೂಮಿ ಶೆಟ್ಟಿ ತಿಳಿಸಿದ್ದಾರೆ. 

2020 ಯಲ್ಲಿ ನಾವು ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದೆವು, ಕಡಿಮೆ ಸಿಬ್ಬಂದಿಯೊಂದಿಗೆ ಕಡಿಮೆ ಸಮಯದಲ್ಲಿ ಚಿತ್ರೀಕರಣ ಮುಗಿಸಿದ್ದೇವೆ, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದು ಭೂಮಿಶೆಟ್ಟಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇಕ್ಕತ್ ಕಾಮಿಡಿ ಸಿನಿಮಾ ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸುತ್ತದೆ, ನನ್ನ ಚೊಚ್ಚಲ ಸಿನಿಮಾಗೆ ಇದು ಪರ್ಫೆಕ್ಟ್ ಕಥೆಯಾಗಿದೆ ಎಂದು ಹೇಳಿದ್ದಾರೆ. 

ನನ್ನನ್ನು ನಾನು ನಾಯಕಿ ಎಂದು ಹೇಳಿಕೊಳ್ಳುವುದಿಲ್ಲ, ಅತ್ಯುತ್ತಮವಾದ ಕಥೆಗಳಲ್ಲಿ ವೈವಿಧ್ಯಮಯವಾದ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ಬಯಕೆ, ಇಕ್ಕತ್ ಸಿನಿಮಾ ಸಾಮಾನ್ಯ ಪ್ರೇಕ್ಷಕರಿಗೆ ಬೇಗನೇ ಇಷ್ಟವಾಗುತ್ತದೆ. ಈ ಯೋಜನೆಯಿಂದ ನನ್ನ ಸಿನಿಮಾ ಪ್ರಾರಂಭಿಸುವುದು ಸರಿಯೆನಿಸಿತು ಎಂದು ಭೂಮಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com