ಸೆ. 15ಕ್ಕೆ ವಿಷ್ಣುವರ್ಧನ್ ಸ್ಮಾರಕದ ಗುದ್ದಲಿ ಪೂಜೆ, ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ

ಇದೇ ತಿಂಗಳ  15ನೇ ತಾರೀಖು ಸಾಹಸಸಿಂಗ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಲಿದೆಂದು ವಿಷ್ಣುವರ್ಧನ್ ಪತ್ನಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.
ಸೆ. 15ಕ್ಕೆ ವಿಷ್ಣುವರ್ಧನ್ ಸ್ಮಾರಕದ ಗುದ್ದಲಿ ಪೂಜೆ, ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ
Updated on

ಬೆಂಗಳೂರು: ಇದೇ ತಿಂಗಳ  15ನೇ ತಾರೀಖು ಸಾಹಸಸಿಂಗ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಲಿದೆಂದು ವಿಷ್ಣುವರ್ಧನ್ ಪತ್ನಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.

ಈ ಸಂಬಂಧ ಹಿರಿಯ ನಟಿ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಡಿ ಗುದ್ದಲಿ ಪೂಜೆ  ನೆರೆವೇರಿಸುವಂತೆ ಮನವಿ ಮಾಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ನಟಿ "ಹನ್ನೊಂದನೇ ವರ್ಷದ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿಎಂ ಯಡಿಯೂರಪ್ಪ ಅವರನ್ನು ಆಹ್ವಾನಿಸಲು ಆಗಮಿಸಿದ್ದೇನೆ. ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಗುದ್ದಲಿ ಪೂಜೆ ಇದೇ ತಿಂಗಳ 15ರಂದು  ನಡೆಯಲಿದೆ.  ಇದಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಲು, ಹಾಗೂ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ನಿಡಲು ಆಗಮಿಸಿದ್ದೇನೆ" ಎಂದರು.

ಕೊರೋನಾ ಕಾರಣದಿಂದ ಸಿಎಂ ಯಡಿಯೂರಪ್ಪ ಖುದ್ದು ಹಾಜರಾಗುವ ಬದಲು ಆನ್ ಲೈನ್ ಮುಖಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಇದೇ ವೇಳೆ ಭಾರತಿ ಮಾಹಿತಿ ನೀಡಿದ್ದಾರೆ. 

ಸಿಎಂ ಬೇಟಿಯ ಕಾರ್ಯಕ್ರಮದ ವೇಳೆ ನಟಿ ಭಾರತಿ ಅವರೊಂದಿಗೆ ವಿಷ್ಣುವರ್ಧನ್ ಅಳಿಯನಾದ ಅನಿರುದ್ದ ಸಹ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com