ಕೃಷ್ಣ
ಕೃಷ್ಣ

ನಾಗಶೇಕರ್ 'srikrishna@gmail.com'ನಲ್ಲಿ ಡಾರ್ಲಿಂಗ್ ಕೃಷ್ಣಗಿದೆ ಸ್ಪೆಷಲ್ ರೋಲ್

ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ನಾಗಶೇಖರ್ ನಿರ್ದೇಶನದ "srikrishna@gmail.com"  ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 7 ರಂದು ಮೈಸೂರಿನಲ್ಲಿ ಪ್ರಾರಂಭವಾಗಿದೆ. . ಇದರಲ್ಲಿ "ಲವ್ ಮೋಕ್ಟೇಲ್" ನಾಯಕ ಕೃಷ್ಣ, ದತ್ತಣ್ಣ ಮತ್ತು ಸಾಧು ಕೋಕಿಲಾ  ಸೇರಿ ಹಲವರು ಅಭಿನಯಿಸಿದ್ದಾರೆ.  ವಿವಾಹೇತರ ಸಂಬಂಧಗಳು ಮತ್ತು ಲಿವ್-ಇನ್ ರಿಲೇಷನ್ ಶಿಪ್  ವಿಷಯವನ್
Published on

ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ನಾಗಶೇಖರ್ ನಿರ್ದೇಶನದ "srikrishna@gmail.com"  ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 7 ರಂದು ಮೈಸೂರಿನಲ್ಲಿ ಪ್ರಾರಂಭವಾಗಿದೆ. . ಇದರಲ್ಲಿ "ಲವ್ ಮೋಕ್ಟೇಲ್" ನಾಯಕ ಕೃಷ್ಣ, ದತ್ತಣ್ಣ ಮತ್ತು ಸಾಧು ಕೋಕಿಲಾ  ಸೇರಿದಂತೆ ಹಲವರು ಅಭಿನಯಿಸಿದ್ದಾರೆ.  ವಿವಾಹೇತರ ಸಂಬಂಧಗಳು ಮತ್ತು ಲಿವ್-ಇನ್ ರಿಲೇಷನ್ ಶಿಪ್  ವಿಷಯವನ್ನು ಪರಿಶೋಧಿಸುವ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾಗಾಗಿ ನಿರ್ದೇಶಕರು ವಿಶಿಷ್ಟ ಕಥಾಹಂದರವನ್ನು ಹೊಂದಿದ್ದಾರೆ.

ಈ ಚಿತ್ರದಲ್ಲಿ ಕೃಷ್ಣ ವಿಶೇಷ ವ್ಯವಸ್ಥಾಪಕನ ಪಾತ್ರವನ್ನು ನಿರ್ವಹಿಸಿದ್ದು ಗಂಭೀರ ಸಮಸ್ಯೆಯನ್ನು ಹಾಸ್ಯದೊಂದಿಗೆ ಬೆರೆಸಿ ಹೇಳುವ ಚಿತ್ರದಲ್ಲಿ "ಟಗರು" ನಾಯಕಿ ಭಾವನಾ ಕೃಷ್ಣ ಅವರಿಗೆ ಜೋಡಿಯಾಗಿರಲಿದ್ದಾರೆ.ಅವರು ಇದರಲ್ಲಿ ವಕೀಲರ ಪಾತ್ರ ನಿರ್ವಹಿಸಿದ್ದಾರೆ. 

ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ  "srikrishna@gmail.com" ಡಾರ್ಲಿಂಗ್ ಕೃಷ್ಣ , ಭಾವನಾ ಹಾಗೂ ನಿರ್ದೇಶಕ ನಾಗಶೇಖರ್ ಅವರ ಮೊದಲ ಸಹಯೋಗದ ಚಿತ್ರವಾಗಿದೆ. ರ್ದೇಶಕ ಪ್ರೀಥಮ್ ಗುಬ್ಬಿ ಬರೆದ ಸಂಭಾಷಣೆ ಚಿತ್ರದಲ್ಲಿದ್ದು  ಸತ್ಯ ಹೆಗ್ಡೆ ಛಾಯಾಗ್ರಹಣಅರ್ಜುನ ಜನ್ಯಾ ಸಂಗೀತ ಸಂಯೋಜನೆ ಇದೆ. ಹಾಡುಗಳ ಸಾಹಿತ್ಯ ಕವಿರಾಜ್ ಅವರದ್ದಾಗಿದೆ. ಸ್ಟಂಟ್ ನಿರ್ದೇಶಕ ರವಿವರ್ಮ, ಮತ್ತು ನೃತ್ಯನಿರ್ದೇಶಕರಾದ ಇಮ್ರಾನ್ ಸರ್ಧರಿಯಾ ಮತ್ತು ಧನಂಜಯ್ ಸಹ ತಂಡದಲ್ಲಿದ್ದಾರೆ. 

ಇನ್ನೊಂದೆಡೆ ನಿರ್ದೇಶಕ ನಾಗಶೇಖರ್ ಅವರು ತೆಲುಗಿನಲ್ಲಿಡಾರ್ಕಿಂಗ್ ಕೃಷ್ಣ ಅವರ   "ಲವ್ ಮೋಕ್ಟೇಲ್" ನಿರ್ದೇಶಿಸುವ ಮೂಲಕ  ಟಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.  ಅಲ್ಲಿ ಅದಕ್ಕೆ "ಗುರು ತುಂಡ ಸೀತಕಲಂ" ಎಂದು ಕರೆಯಲಾಗಿದೆ. ಏತನ್ಮಧ್ಯೆ, ಭಾವನಾ ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹರ್ಷ ನಿರ್ದೇಶನದ ಈ ಚಿತ್ರವು ಪ್ರಸ್ತುತ ಶೂಟಿಂಗ್ ನ ಕಡೇ ಹಂತದಲ್ಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com