ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ

'ಉಳಿದವರು ಕಂಡಂತೆ' ಚಿತ್ರದಲ್ಲಿನ ಪಾತ್ರದಂತೆ 'ರಿಚಿ' ವಿಭಿನ್ನ: ರಕ್ಷಿತ್ ಶೆಟ್ಟಿ

ಕೊರೋನಾ ಕಷ್ಟದ ದಿನಗಳಲ್ಲಿಯೂ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ  ಸಿನೆಮಾ ಕೆಲಸವನ್ನು ಬಿಟ್ಟಿಲ್ಲ. ಇದೀಗ ಅಕ್ಟೋಬರ್ ಮೊದಲ ವಾರದಿಂದ  ಕಿರಣ್‌ರಾಜ್ ಅವರ " 777 ಚಾರ್ಲಿ" ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಎದುರು ನೋಡುತ್ತಿರುವ ರಕ್ಷಿತ್, ಈಗ "ರಿಚಿ" ಎಂಬ ಚಿತ್ರದ ಚಿತ್ರಕಥೆಯತ್ತಲೂ ಗಮನ ಹರಿಸಿದ್ದಾರೆ.
Published on

ಕೊರೋನಾ ಕಷ್ಟದ ದಿನಗಳಲ್ಲಿಯೂ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ  ಸಿನೆಮಾ ಕೆಲಸವನ್ನು ಬಿಟ್ಟಿಲ್ಲ. ಇದೀಗ ಅಕ್ಟೋಬರ್ ಮೊದಲ ವಾರದಿಂದ  ಕಿರಣ್‌ರಾಜ್ ಅವರ " 777 ಚಾರ್ಲಿ" ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಎದುರು ನೋಡುತ್ತಿರುವ ರಕ್ಷಿತ್, ಈಗ "ರಿಚಿ" ಎಂಬ ಚಿತ್ರದ ಚಿತ್ರಕಥೆಯತ್ತಲೂ ಗಮನ ಹರಿಸಿದ್ದಾರೆ.

ರಕ್ಷಿತ್ ಪ್ರಸ್ತುತ ಗೋವಾದಲ್ಲಿದ್ದು  ಈ ಚಿತ್ರದ ಚಿತ್ರಕಥೆಯನ್ನು ಪಿ.ಕೆ.ರಾಹುಲ್ ನಿರ್ದೇಶಿಸಲಿದ್ದಾರೆ. "ಕಿರಿಕ್ ಪಾರ್ಟಿ" ಸ್ಟಾರ್ ನಟ ಗೋವಾದಿಂದ ಕೆಲಸ ಮಾಡಲು ತೀರ್ಮಾನಿಸಿದ್ದಾರೆ. :ಫ್ಲೋರ್ ಗಳಲ್ಲಿ ಕೆಲಸ ಪ್ರಾರಂಭಿಸಲು ರಿಚಿ  ನನ್ನ ಮುಂದಿನ ಯೋಜನೆಗಳಲ್ಲಿ ಒಂದಾಗಲಿದೆ. ಇದಕ್ಕಾಗಿ ನಾವು ಸ್ಕ್ರಿಪ್ಟ್ ಅನ್ನು ಉತ್ತಮವಾಗಿ ಟ್ಯೂನ್ ಮಾಡಿದ್ದೇವೆ. ಸ್ಕ್ರಿಪ್ಟ್ ಮಂಗಳೂರು, ಉಡುಪಿ, ಮುಂಬೈನಂತಹಾ ಜಾಗಗಳಲ್ಲಿ ಶೂಟಿಂಗ್ ನಡೆಸಲು ಯೋಜಿಸುತ್ತದೆ. ಚಿತ್ರದ ಒಂದು ಸಣ್ಣ ಭಾಗವನ್ನು ಗೋವಾದಲ್ಲಿ ಚಿತ್ರೀಕರಿಸಲು ಸಹ ತೀರ್ಮಾನಿಸಲಾಗಿದೆ. ನನಗೆ ಮಂಗಳೂರಿನ ಬಗ್ಗೆ ತಿಳಿದಿದೆ. ಉಡುಪಿ ಸಹ, ಆದರೆ ಗೋವಾ ವಿಶೇಷ ಸ್ಥಳ.  ನಾನು ಅಷ್ಟಾಗಿ ನೋಡಿಲ್ಲ. ಹಾಗಾಗಿ ನಾನು ಆ ಸ್ಥಳವನ್ನು ನೋಡಬೇಕೆಂದು ಯೋಚಿಸಿದೆ, ಮತ್ತು ಅದು ಬರವಣಿಗೆಯಲ್ಲಿ ನನಗೆ ಸಹಾಯ  ಮಾಡಿದೆ"ರಕ್ಷಿತ್ ಹೇಳುತ್ತಾರೆ.

"ರಿಚಿ" ರಕ್ಷಿತ್ ಹಿಂದಿನ ಚಿತ್ರವಾಗಿರುವ "ಉಳಿದವರು ಕಂಡಂತೆ" ಯ ಅಪ್ರತಿಮ ಪಾತ್ರದ ಹೆಸರು. "ಕಥೆ ಮತ್ತು ಪಾತ್ರದ ಬಗ್ಗೆ ನಾನು ಹೆಚ್ಚು ಹೆಳಲು ಬಯಸುವುದಿಲ್ಲ. . ಆದರೆ ನಾನು ಹೇಳುವುದೆಂದರೆ ಉಳಿದವರು ಕಂಡಂತೆ ಯಲ್ಲಿ ನಾನು ನಿರ್ವಹಿಸಿದ ಪಾತ್ರದ ಹಿನ್ನೆಲೆಯನ್ನು ರಿಚಿ ಹೊತ್ತು ತರುತ್ತಿದೆ.  ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ಈ ಕಥೆ, ನಿಯೋ ನಾಯಿರ್ ಕ್ರೈಂ ಡ್ರಾಮಾದೊಡನೆ ಸಂಪರ್ಕ ಹೊಂದಿದೆ. "

"ಉಳಿದವರು ಕಂಡಂತೆ" ಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ರಾಹುಲ್ ಅವರು ಚಿತ್ರದ ನಿರ್ದೇಶಕರಾಗಲಿದ್ದಾರೆ.  ಇದನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಜಂಟಿಯಾಗಿ ನಿರ್ಮಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com