ನನಗೂ ರಾಗಿಣಿಗೂ ಸಂಪರ್ಕವಿಲ್ಲ, ರಾಗಿಣಿ ಬಗ್ಗೆ ಐಎಸ್‍ಡಿ ನನ್ನನ್ನು ಪ್ರಶ್ನಿಸಿಲ್ಲ: ನಟ ಯೋಗೀಶ್‍

ಸ್ಯಾಂಡಲ್ ವುಡ್‍ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ಐಎಸ್‍ಡಿ ವಿಚಾರಣೆ ಎದುರಿಸಿರುವ ನಟ ಯೋಗೀಶ್ ಅಲಿಯಾಸ್‍ ಲೂಸ್ ಮಾದಾ, ನಟಿ ರಾಗಿಣಿಗೂ ತಮಗೂ ಯಾವುದೇ ಸಂಬಂಧವಿಲ್ಲ ಹಾಗೂ ಆ ಬಗ್ಗೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಪ್ರಶ್ನಿಸಿಲ್ಲ ಎಂದಿದ್ದಾರೆ.
ನಟ ಯೋಗೇಶ್
ನಟ ಯೋಗೇಶ್
Updated on

ಸ್ಯಾಂಡಲ್ ವುಡ್‍ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ಐಎಸ್‍ಡಿ ವಿಚಾರಣೆ ಎದುರಿಸಿರುವ ನಟ ಯೋಗೀಶ್, ನಟಿ ರಾಗಿಣಿಗೂ ತಮಗೂ ಯಾವುದೇ ಸಂಬಂಧವಿಲ್ಲ ಹಾಗೂ ಆ ಬಗ್ಗೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಪ್ರಶ್ನಿಸಿಲ್ಲ ಎಂದಿದ್ದಾರೆ.

ಕೋಣನಕುಂಟೆಯ ತಮ್ಮ ನಿವಾಸದ ಬಳಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಗಿಣಿ ಜತೆಗಿನ ಚಿತ್ರವೊಂದರಲ್ಲಿ ಅಭಿನಯಿಸಿದ ಬಳಿಕ 2013 ರಿಂದ ನನಗೂ ಆಕೆಗೂ ಯಾವುದೇ ಸಂಬಂಧವಿಲ್ಲ. ದೂರವಾಣಿ ಮೂಲಕವೂ ಸಂಪರ್ಕಿಸಿಲ್ಲ ಎಂದರು.

ಇದೇ ವೇಳೆ "ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ಮತ್ತೆ ಕರೆದರೆ ಬರಬೇಕೆಂದು ಹೇಳಿದ್ದಾರೆ" ಎಂದು ನಟ ಹೇಳಿದರು.

ಪಾರ್ಟಿ ಮಾಡಿದಾಗ ದೂರು ಕೊಟ್ಟದ್ದು ನಿಜ

ಕೆಲ ದಿನಗಳ ಹಿಂದೆ ನಾನು ಪಾರ್ಟಿ ಮಾಡಿದ್ದಾಗ ಸ್ಥಳೀಯರು ದೂರು ಕೊಟ್ಟಿರೋದು ನಿಜ ಎಂದು ನಟ ಯೋಗೀಶ್ ಒಪ್ಪಿಕೊಂಡಿದ್ದಾರೆ. "ಇತ್ತೀಚೆಗೆ ನಾನು ನಡೆಸಿದ್ದ ಪಾರ್ಟಿ ವೇಳೆ ಸ್ಥಳೀಯರು ದೂರು ಕೊಟ್ಟಿದ್ದರು. ಪೋಲೀಸರು ನನಗೆ ಎಚ್ಚರಿಸಿದ್ದರು" ಎಂದು ನಟ ಹೇಳಿದ್ದಾರೆ. 

ನಿನ್ನೆ ನಡೆದ ವಿಚಾರಣೆ ವೇಳೆ ಅಧಿಕಾರಿಗಳು ನನ್ನ ಮೊಬೈಲ್ ವಶಕ್ಕೆ ಪಡೆದಿಲ್ಲ. ನನಗೆ ಗುಟ್ಕಾ, ಸಿಗರೇಟ್, ಮದ್ಯ ಸೇವಿಸಿ ಅಭ್ಯಾಸವಿದೆ, ಬೇರೆ ಅಭ್ಯಾಸಗಳಿಲ್ಲ ಎಂದು ಯೋಗೀಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. 

ಮಗ ಯೋಗಿಗೆ ಡ್ರಗ್ಸ್ ಚಟವಿಲ್ಲ: ಅಂಬುಜಾ

ಏತನ್ಮಧ್ಯೆ ಸೋಮವಾರ ಆಂತರಿಕ ಭದ್ರತಾ ವಿಭಾಗ (ಐಎಸ್‍ಡಿ) ವಿಚಾರಣೆಗೆ ಹಾಜರಾಗಿರುವ ಲೂಸ್ ಮಾದ ಎಂದೇ ಕರೆಸಿಕೊಳ್ಳುವ ನಟ ಯೋಗೀಶ್‍ ಅವರ ತಾಯಿ ಹಾಗೂ ಕಿರುತೆರೆ ನಟಿ ಅಂಬುಜಾ, ನನ್ನ ಮಗನಿಗೆ ನಶೆಯ ನಂಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಮಗ ಯಾವ ತಪ್ಪೂ ಮಾಡಿಲ್ಲ, ಹೆದರುವ ಅಗತ್ಯವಿಲ್ಲ. ಸಾಲು ಸಾಲು ಚಿತ್ರಗಳ ಸೋಲು ಅವನನ್ನು ನೋವಿನ ಕೂಪಕ್ಕೆ ದೂಡಿತ್ತೆಂದು ಅಂಬುಜಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com