ಬೆಂಗಳೂರು: ತಮ್ಮ ಸಿರಿಕಂಠದ ಮೂಲಕ ನಮ್ಮನ್ನು ರಂಜಿಸಿದ್ದ ಗಾನಚೇತನ ತಮ್ಮ ಗಾಯನವನ್ನು ನಿಲ್ಲಿಸಿದ್ದಾರೆ. ಹಲವಾರು ನಟರು ಮತ್ತು ಚಿತ್ರರಂಗದವರು ಅವರಿಗೆ ಸಂತಾಪ ಸೂಚಿಸಿದ್ದಾರೆ.
ಎಸ್ ಪಿ ಬಿ ನಿಧನದ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಟ್ವೀಟ್ ಮಾಡಿದ್ದು, ಯಾರ ಕಣ್ಣು ತಾಕಿತು. ಯಾವ ತಪ್ಪಿಗೆ ಈ ಶಿಕ್ಷೆ. ಇನ್ನು ಎಷ್ಟು ಸಾಧಕರು ಈ ಸಾವಿನ ಶಿಕ್ಷೆಗೆ ಸಾಲು ನಿಂತಿಹರು. ವಿಶ್ವಶಾಂತಿ ಭಂಗಕ್ಕೆ ಕೊರೋನಾ ಹರಡಿ ಮಳ್ಳಿಯಂತ ದರಿದ್ರ ದೇಶ. ಚೀನವನ್ನು ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು. ನನ್ನ ನೆಚ್ಚಿನ ಹೃದಯವನ್ನು ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲ ಓಂಶಾಂತಿ. ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಜಗ್ಗೇಶ್ ರವರು ಗೌರವಾನ್ವಿತ ವಿದಾಯ.. ನಿಮ್ಮಧ್ವನಿ ತಮ್ಮದಾಗಿಸಿ ನಟಿಸಿ ಚಪ್ಪಾಳೆ ಪಡೆದ ಅದೃಷ್ಟವಂತ ನಟರ ಸಾಲಲ್ಲಿ ನಾನು ಒಬ್ಬ.. ನೀವು ಕಾಯಕದಲ್ಲಿ ಗಾಯಕ ಆದರೆ ನಿಮ್ಮಲ್ಲಿ ಒಬ್ಬ ಮಾತೃಹೃದಯದ ಭಾವನಾಜೀವಿ ಇದ್ದ. ಮದ್ರಾಸ್ ನಲ್ಲಿ ನಿಮ್ಮಜೊತೆ ಕಳೆದ ಆ ದಿನಗಳು ಮತ್ತೆ ಬರದು. ಮರೆಯಲಾಗದು. ಹೋದಿರಿ ಮತ್ತೆ ಬೇಗ ಬನ್ನಿ ಎಂದಿದ್ದಾರೆ.
Advertisement