ಗುರುದತ್ತ ಗಾಣಿಗ ಆಕ್ಷನ್ ಥ್ರಿಲ್ಲರ್ ಗಾಗಿ ಬೆಳ್ಳಿ ತೆರೆ ಮೇಲೆ ಮತ್ತೆ ಜೊತೆಯಾದ ದೇವರಾಜ್-ಪ್ರಜ್ವಲ್ ಜೋಡಿ!

ಪ್ರಜ್ವಲ್ ದೇವರಾಜ್ ಸಿಹಿ ತುಂಬಿದ ವರ್ಷದತ್ತ ಸಾಗುತ್ತಿರುವಂತೆ ತೋರುತ್ತಿದೆ. ಡೈನಾಮಿಕ್ ಪ್ರಿನ್ಸ್ ಆಫ್ ಸ್ಯಾಂಡಲ್ ವುಡ್ ನಿರ್ದೇಶಕ ಗುರುದತ್ತ ಗಾಣಿಗ ಅವರೊಂದಿಗೆ ಆಕ್ಷನ್ ಥ್ರಿಲ್ಲರ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.

Published: 19th December 2020 12:04 PM  |   Last Updated: 19th December 2020 12:48 PM   |  A+A-


ಪ್ರಜ್ವಲ್ ದೇವರಾಜ್, ದೇವರಾಜ್

Posted By : Raghavendra Adiga
Source : The New Indian Express

ಪ್ರಜ್ವಲ್ ದೇವರಾಜ್ ಸಿಹಿ ತುಂಬಿದ ವರ್ಷದತ್ತ ಸಾಗುತ್ತಿರುವಂತೆ ತೋರುತ್ತಿದೆ. ಡೈನಾಮಿಕ್ ಪ್ರಿನ್ಸ್ ಆಫ್ ಸ್ಯಾಂಡಲ್ ವುಡ್ ನಿರ್ದೇಶಕ ಗುರುದತ್ತ ಗಾಣಿಗ ಅವರೊಂದಿಗೆ ಆಕ್ಷನ್ ಥ್ರಿಲ್ಲರ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ನಿರ್ದೇಶಕರು ಈ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಕಡೆಯ ಚಿತ್ರ "ಅಂಬಿ ನಿಂಗ್ ವಯಸ್ಸಾಯ್ತೋ" ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

ತಮ್ಮ ಮೊದಲ ಚಿತ್ರ ಬಿಡುಗಡೆಯಾದ ಎರಡು ವರ್ಷಗಳ ನಂತರ, ಅವರು ಉತ್ತಮ ಚಿತ್ರಕಥೆ ಮತ್ತು ನಟನಿಗಾಗಿ ಹುಡುಕಿದ್ದರು. ಈಗ ಅವರ ಎರಡನೇ ಯೋಜನೆ ಸಿದ್ದವಾಗುತ್ತಿದ್ದು ಮಾನವ ಕಳ್ಳಸಾಗಣೆ ವಿಷಯದ ಸುತ್ತ ಸುತ್ತುವ ಇನ್ನೂ ಹೆಸರಿಡದ ಈ ಚಿತ್ರವು ಪ್ರಜ್ವಲ್ ದೇವರಾಜ್ ಹಾಗೂ ಅವರ ತಂದೆ ನಟ ದೇವರಾಜ್ ಅವರನ್ನು ಒಟ್ಟಿಗೇ ತೆರೆ ಮೇಲೆ ತರಲಿದೆ. ಇದಕ್ಕೆ ಮುನ್ನ ಈ ತಂದೆ-ಮಗನ ಜೋಡಿ ಪಿಸಿ ಶೇಖರ್ ಅವರ "ಅರ್ಜುನ" ಚಿತ್ರದಲ್ಲಿ ಒಟ್ಟಿಗೇ ಕಾಣಿಸಿಕೊಂಡಿತ್ತು.

ಚಿತ್ರವನ್ನು ಗಾಂಧಿನಗರದ ಡಿಸ್ಟ್ರಿಬ್ಯೂಟರ್ ಕುಮಾರ್ ಬಿ ನಿರ್ಮಿಸಲಿದ್ದು ಬೆಂಗಳೂರು ಕುಮಾರ್ ಫಿಲ್ಮ್ಸ್ ಎಂಬ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ. ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿರುವ ತಯಾರಕರು ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಯೋಜಿಸಿದ್ದಾರೆ.

ಶೂಟಿಂಗ್‌ಗಾಗಿ ಅವರು ಬೆಂಗಳೂರು ಮತ್ತು ಕೆಜಿಎಫ್‌ನ ಪ್ರದೇಶಗಳನ್ನು ಆಯ್ಕೆ ಮಾಡಿದ್ದು ಏತನ್ಮಧ್ಯೆ, ಜನವರಿ ಮಧ್ಯದಲ್ಲಿ ಫಸ್ಟ್ ಲುಕ್ ಜೊತೆಗೆ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲು ತಂಡವು ಸಿದ್ಧವಾಗುತ್ತಿದೆ. ತಯಾರಕರು ಈ ಯೋಜನೆಗಾಗಿ "ಮುಂದಿನ ನಿಲ್ದಾಣ" ಚಿತ್ರದ ಒಪಿ ಅಭಿಮನ್ಯು ಸದಾನಂದನ್ ಅವರನ್ನು ಆಯ್ಕೆ ಮಾಡಿದ್ದು ಉಳಿದ ಪಾತ್ರವರ್ಗ ಹಾಗೂ ಸಿಬ್ಬಂದಿಗಳ ಆಯ್ಕೆ ಇನ್ನೂ ಅಂತಿಮವಾಗಿಲ್ಲ.

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp