ಹಿನ್ನೋಟ 2020: ಕನ್ನಡ ಚಿತ್ರರಂಗಕ್ಕೂ ಕೊರೋನಾ ಕರಿನೆರಳು; ಒಟಿಟಿಯಲ್ಲಿ ಕೆಲವೇ ಚಿತ್ರಗಳ ಬಿಡುಗಡೆ!

2020 ವರ್ಷ ಮನರಂಜನಾ ಕ್ಷೇತ್ರ ಅತ್ಯಂತ ಸಮಸ್ಯೆಗಳನ್ನು ಎದುರಿಸಿದ ಕ್ಷೇತ್ರವಾಗಿದ್ದು, ಲಾಕ್ ಡೌನ್ ಕಾರಣದಿಂದಾಗಿ ಹೊಸ ಸಿನಿಮಾಗಳನ್ನು ಮಾಲ್-ಥಿಯೇಟರ್ ಗಳಲ್ಲಿ ನೋಡುವ ಜನರಿಗೆ ನಿರಾಶೆ ಉಂಟಾಗಿತ್ತು. 
ಥಿಯೇಟರ್ ನಲ್ಲಿ ಸ್ಯಾನಿಟೈಸೇಷನ್ (ಸಂಗ್ರಹ ಚಿತ್ರ)
ಥಿಯೇಟರ್ ನಲ್ಲಿ ಸ್ಯಾನಿಟೈಸೇಷನ್ (ಸಂಗ್ರಹ ಚಿತ್ರ)

2020 ವರ್ಷ ಮನರಂಜನಾ ಕ್ಷೇತ್ರ ಅತ್ಯಂತ ಸಮಸ್ಯೆಗಳನ್ನು ಎದುರಿಸಿದ ಕ್ಷೇತ್ರವಾಗಿದ್ದು, ಲಾಕ್ ಡೌನ್ ಕಾರಣದಿಂದಾಗಿ ಹೊಸ ಸಿನಿಮಾಗಳನ್ನು ಮಾಲ್-ಥಿಯೇಟರ್ ಗಳಲ್ಲಿ ನೋಡುವ ಜನರಿಗೆ ನಿರಾಶೆ ಉಂಟಾಗಿತ್ತು. 

ಕನ್ನಡ ಸಿನಿಮಾ ರಂಗ ಇದಕ್ಕೆ ಹೊರತಾಗಿಲ್ಲ. ವಾರ್ಷಿಕ 200 ಸಿನಿಮಾಗಳು ಬಿಡುಗಡೆಯಾಗುತ್ತಿದ್ದ ಜಾಗದಲ್ಲಿ 2020 ರಲ್ಲಿ ಬಿಡುಗಡೆಯಾಗಿದ್ದು ಕೇವಲ 70 ಸಿನಿಮಾಗಳು! 

ಸಿನಿ ಪ್ರಿಯರು ತಮ್ಮ ನೆಚ್ಚಿನ ಸಿನಿಮಾಗಳನ್ನು ನೋಡುವುದಕ್ಕಾಗಿ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸ್ಟ್ರೀಮಿಂಗ್ ವೇದಿಕೆಗಳನ್ನೇ ಅವಲಂಬಿಸಬೇಕಾಯಿತು. ಲಾಕ್ ಡೌನ್ ಪೂರ್ವ ಹಾಗೂ ಲಾಕ್ ಡೌನ್ ನಂತರದ ದಿನಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಕೆಲವೇ ಕೆಲವು ಸಿನಿಮಾಗಳಷ್ಟೇ ಗುಣಮಟ್ಟ ಹೊಂದಿದ್ದಾಗಿದ್ದವು. 

ಮೊದಲ ಬಾರಿಗೆ ನಿರ್ದೇಶನ ಮಾಡಿ, ತಾವೇ ನಟಿಸಿದ್ದ ಕೃಷ್ಣ ಅವರ ಲವ್ ಮಾಕ್ಟೈಲ್ ಎಂಬ ಸಿನಿಮಾ ಸಿಹಿ-ಕಹಿಗಳ ಮಿಶ್ರ ಭಾವನೆಗಳನ್ನು ಹೊಂದಿದ್ದ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ಆಗಿತ್ತು. 

ಇನ್ನು ಕೆಎಸ್ ಅಶೋಕಾ ಅವರ, ಪೃಥ್ವಿ ಅಂಬಾರ್, ಖುಷೀ ರವಿ ಮೊದಲಾದ ತಾರಾಗಣ ನಟಿಸಿದ್ದ, ಲವ್ ಕಹಾನಿ  ಹೊಂದಿದ್ದ ದಿಯಾ ಸಿನಿಮಾ ಸಹ ಸಿನಿಪ್ರಿಯರ ಮೆಚ್ಚಿನ ಚಿತ್ರವಾಗಿ ಹೊರಹೊಮ್ಮಿತ್ತು.

2020 ರಲ್ಲಿ ಬಿಡುಗಡೆಯಾದ ಜಗದೀಶ ಕೆ ಹಂಪಿ ನಿರ್ದೇಶನದ ಪ್ರಜ್ವಲ್ ದೇವರಾಜ್ ಅವರ ಜಂಟಲ್ ಮೆನ್ ಸಿನಿಮಾವನ್ನೂ ಸಹ ಪ್ರೇಕ್ಷಕರು ಮೆಚ್ಚಿದ್ದರು. 

ಹಣದ ಒಳ್ಳೆಯ ಹಾಗೂ ಕರಾಳ ಮುಖಗಳನ್ನು ತೆರೆ ಮೇಲೆ ತೋರಿಸಿದ್ದ ರಾಧಾಕೃಷ್ಣ ರೆಡ್ಡಿ ಅವರ ಮಾಯಾ ಬಝಾರ್ ಸಹ 2020 ರಲ್ಲಿ ಸಿನಿ ಪ್ರಿಯರನ್ನು ರಂಜಿಸುವಲ್ಲಿ ಹಿಂದೆ ಬೀಳಲಿಲ್ಲ. 

ಇನ್ನು ಪತ್ತೆದಾರಿ ಕಹಾನಿಯನ್ನು ಆಸ್ವಾದಿಸುವ ಪ್ರೇಕ್ಷಕರಿಗೆ 2020 ರಲ್ಲಿ ರಮೇಶ್ ಅರವಿಂದ್ ನಟನೆ, ಆಕಾಶ್ ಶ್ರೀವಾತ್ಸ ನಿರ್ದೇಶನದ ಇನ್ವೆಸ್ಟಿಗೇಟೀವ್ ಥ್ರಿಲ್ಲರ್ ಶಿವಾಜಿ ಸೂರತ್ಕಲ್ ರಮೇಶ್ ಅರವಿಂದ್ ಅವರನ್ನು ಹಿಂದೆಂದೂ ಕಾಣದಂತಹ ಪಾತ್ರದಲ್ಲಿ ತೋರಿಸಿದ್ದಷ್ಟೇ ಅಲ್ಲದೇ ಪತ್ತೆದಾರಿ ಕಥಾ ಹಂದರದ ರಸದೌತಣ ನೀಡಿತ್ತು. 

ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಬಾರಿ ಹಲವರಿಗೆ ಈ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಬಂದಿದ್ದರೂ ಅಚ್ಚರಿಯಿಲ್ಲ. ಇದಕ್ಕೆ ಪೂರಕವೆಂಬಂತೆ, ವ್ಯವಸ್ಥೆಯ ಸುತ್ತ ಸುತ್ತುವ, ಸಾಮಾಜಿಕ ಸಂದೇಶ ಹೊಂದಿದ ಕಥೆಯನ್ನು ನಿರ್ದೇಶಿಸಿದ್ದ ಮನ್ಸೋರೆ ಅವರ ಆಕ್ಟ್ 1978 ಸಿನಿಮಾ ಲಾಕ್ ಡೌನ್ ಬಳಿಕ ಬಿಡುಗಡೆಯಾಗಿ ಜನಪ್ರಿಯಗೊಂಡಿತ್ತು. 

ಹೊಸ ಪ್ರತಿಭೆಗಳನ್ನು ಪರಿಚಯಿಸಿದ್ದ ಧನಂಜಯ, ನಿವೇದಿತ ನಟನೆಯ, ನಿರ್ದೇಶಕ ಸೂರಿ ಅವರ ಪಾಪ್ ಕಾರ್ನ್ ಮಂಕಿ ಟೈಗರ್ ಸಹ ಜನಪ್ರಿಯತೆ ಗಳಿಸಿದ್ದು 2020 ರ ಸಿನಿಮಾ ನೆನಪುಗಳಲ್ಲಿ ಗಾಢವಾಗಿದೆ. 

ಒಟಿಟಿ ವೇದಿಕೆಗಳನ್ನು ಆಳಿದ ಕನ್ನಡದ ಕಂಟೆಂಟ್ 

ಇವಿಷ್ಟು ಬೆಳ್ಳಿತೆರೆಯ ಕಥೆಯಾದರೆ, ಇತ್ತೀಚೀನ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲೂ ಕನ್ನಡದ ಕಂಟೆಂಟ್ ಗಳಿಗೆ ಫಿದಾ ಆದವರು ಬಹಳ ಮಂದಿ ಇದ್ದಾರೆ. 

2020 ರ ಲಾಕ್ ಡೌನ್ ಪರಿಣಾಕನ್ನಡದ ಕಂಟೆಂಟ್ ಗಳು ಒಟಿಟಿ ವೇದಿಕೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತಲುಪಿದ್ದು ಹಾರರ್ ಸೇರಿದಂತೆ ಹಲವು ವಿಭಾಗಗಳ ಕಥೆಗಳನ್ನೊಳಗೊಂಡ ಕಂಟೆಂಟ್ ಬಿಡುಗಡೆಯಾಗಿದ್ದವು. 

ಸೂಕ್ಷ್ಮ ವಿಷಯದ ಬಗ್ಗೆ ಕೋರ್ಟ್ ರೂಮ್ ಕಥೆ 'ಲಾ'ನ್ನು ಪಿಆರ್ ಕೆ ಪ್ರೊಡಕ್ಷನ್ಸ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಿತ್ತು. 

ಪುಷ್ಕರ್ ಫಿಲ್ಮ್ಸ್ ನ, ಕಾರ್ತಿಕ್ ಸರಗೂರ್ ನಿರ್ದೇಶನ, ಸುನಿ ಹಾಗೂ ಕಾರ್ತಿಕ್ ಚಿತ್ರಕಥೆಯ ಭೀಮಸೇನ ನಳಮಹಾರಾಜ, ಕಾಮಿಡಿ ಪ್ರಿಯರನ್ನು ನಕ್ಕು ನಲಿಸಿದ್ದ ಫ್ರೆಂಚ್ ಬಿರಿಯಾನಿ ಲಾಕ್ ಡೌನ್ ನಂತರದ ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿ ಜನಮನ ಗೆದ್ದ ಚಿತ್ರಗಳಾಗಿದ್ದರೆ, 

ಲಾಕ್ ಡೌನ್ ಪ್ರಾರಂಭವಾದಾಗ ಬಿಡುಗಡೆಯಾಗಿದ್ದ ಕೃಷ್ಣ ಚೈತನ್ಯ ನಿರ್ಮಾಣದ ಮನೆ ನಂ.13, ಹಾರರ್ ಹಾಗೂ ಥ್ರಿಲ್ಲರ್ ಗಳಾದ ದಿಯಾ ಹಾಗೂ ಲವ್ ಮಾಕ್ಟೈಲ್ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದು, ಪೃಥ್ವಿ ಅಂಬಾರ್ ಹಾಗೂ ಕೃಷ್ಣ ಗೆ ಜನಪ್ರಿಯತೆ ತಂದುಕೊಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com