'ಜಂಟಲ್‍ಮನ್' ಪಾತ್ರಕ್ಕೆ ಫಿಟ್ ಆಗುವುದು ತುಂಬಾ ಕಷ್ಟ: ಪ್ರಜ್ವಲ್ ದೇವರಾಜ್

ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ 'ಜಂಟಲ್‍ಮನ್' ಎಂದು ಕರೆಯಿಸಿಕೊಳ್ಳಲು ಶ್ರಮಿಸುತ್ತಾರೆ. ಅದೇ ಕೆಲಸವನ್ನು ಪ್ರಜ್ವಲ್ ದೇವರಾಜ್ ಅವರು ತಮ್ಮ 'ಜಂಟಲ್‍ಮನ್' ಚಿತ್ರದಲ್ಲಿ ಮಾಡಿದ್ದಾರೆ. ಆದರೆ ಬೆರೆಯವರಿಗೆ 'ಜಂಟಲ್‍ಮನ್' ಆಗಲು ಸಾಕಷ್ಟು ಸಮಯ...

Published: 06th February 2020 03:18 PM  |   Last Updated: 06th February 2020 03:18 PM   |  A+A-


prajwad1

ಚಿತ್ರದ ಸ್ಟಿಲ್

Posted By : Lingaraj Badiger
Source : The New Indian Express

ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ 'ಜಂಟಲ್‍ಮನ್' ಎಂದು ಕರೆಯಿಸಿಕೊಳ್ಳಲು ಶ್ರಮಿಸುತ್ತಾರೆ. ಅದೇ ಕೆಲಸವನ್ನು ಪ್ರಜ್ವಲ್ ದೇವರಾಜ್ ಅವರು ತಮ್ಮ 'ಜಂಟಲ್‍ಮನ್' ಚಿತ್ರದಲ್ಲಿ ಮಾಡಿದ್ದಾರೆ. ಆದರೆ ಬೆರೆಯವರಿಗೆ 'ಜಂಟಲ್‍ಮನ್' ಆಗಲು ಸಾಕಷ್ಟು ಸಮಯ ಇರುತ್ತದೆ. ಪ್ರಜ್ವಲ್ ದೇವರಾಜ್ ಗೆ ಮಾತ್ರ ಕೇವಲು ಆರು ಗಂಟೆ ಮಾತ್ರ ನೀಡಲಾಗಿದೆ!

ಹೌದು, ಪ್ರಜ್ವಲ್ ದೇವರಾಜ್ ಅವರು ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ನಿದ್ರಿಸಿ ಉಳಿದ ಆರು ಗಂಟೆ ಮಾತ್ರ ಎಚ್ಚರದಲ್ಲಿರುವ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಜಂಟಲ್‍ಮನ್' ಚಿತ್ರ ಈ ತೆರೆಗೆ ಬರುತ್ತಿದೆ. 

'ಜಂಟಲ್‍ಮನ್' ನಿರ್ದೇಶಕ ಜಡೇಶ್ ಕುಮಾರ್ ಅವರು ನನಗೆ ಒಂದು ವಿಭಿನ್ನ ಪಾತ್ರ ನೀಡಿದ್ದು, ಇದು ನನಗೆ ಹೊಸ ಪರಿಕಲ್ಪನೆ. `ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್’ ಬಗ್ಗೆ ನನಗೆ ಯಾವುದೇ ಸುಳಿವು ಇರಲಿಲ್ಲ. ನಿರ್ದೇಶಕರು ಕಥೆ ಹೇಳಿದ ಮೇಲೆ ನನಗೆ ಗೊತ್ತಾಗಿದ್ದು ಎಂದು ಪ್ರಜ್ವಲ್ ದೇವರಾಜ್ ಅವರು ಹೇಳಿದ್ದಾರೆ.

'ಜಂಟಲ್‍ಮನ್' ಪಾತ್ರ ಮಾಡುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಕಷ್ಟದ ಕೆಲಸ. ಇದಕ್ಕಾಗಿ ನಾನು ತುಂಬಾ ಶ್ರಮಪಟ್ಟಿದ್ದೇನೆ ಮತ್ತು ನನ್ನ ಶ್ರಮ ತೆರೆ ಮೇಲೆ ಕಾಣಿಸುತ್ತೆ ಎಂದು ಪ್ರಜ್ವಲ್ ದೇವರಾಜ್ ತಿಳಿಸಿದ್ದಾರೆ.

ರಾಜಾಹುಲಿ, ಸಂಹಾರ, ಪಡ್ಡೆಹುಲಿಯಂಥಾ ಕಮರ್ಷಿಯಲ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಗುರು ದೇಶಪಾಂಡೆ ಅವರ ಬಳಿ ಪ್ರಜ್ವಲ್ ದೇವರಾಜ್ ಕಾಲ್ ಶೀಟ್ ಇತ್ತಂತೆ. ಅದನ್ನು ತಮ್ಮೊಂದಿಗೆ ದುಡಿದ ಜಡೇಶ್ ಅವರಿಗೆ ನೀಡಿ, ತಾವೇ ನಿರ್ಮಾಣವನ್ನೂ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ರಾಜಹಂಸ ಚಿತ್ರವನ್ನು ಜಡೇಶ್ ಡೈರೆಕ್ಟ್ ಮಾಡಿದ್ದರು. ಈ ಬಾರಿ ಜಡೇಶ್ ಯಾರೂ ಮುಟ್ಟಿರದ ಸಬ್ಜೆಕ್ಟ್ ಒಂದನ್ನು ಕೈಗೆತ್ತಿಕೊಂಡಿದ್ದಾರೆ. ದಿನವೊಂದಕ್ಕೆ ಹದಿನೆಂಟು ಗಂಟೆಗಳ ಕಾಲ ನಿದ್ರಿಸುವ ಫೋಬಿಯಾ ಇರುವ ಹುಡುಗನ ಸುತ್ತ ಕಥೆಯೊಂದನ್ನು ಹೆಣೆದಿದ್ದಾರೆ. ಪ್ರಜ್ವಲ್ ಕೂಡಾ ಈ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಡಿಫರೆಂಟ್ ಡ್ಯಾನಿ, ಮಾಸ್ ಮಾದ ಮತ್ತು ವಿನೋದ್ ಫೈಟ್‍ಗಳನ್ನು ಕಂಪೋಸ್ ಮಾಡಿದ್ದಾರೆ. ಪಡ್ಡೆಹುಲಿ ಚಿತ್ರದಲ್ಲಿ ನಾಯಕಿಯಾಗಿದ್ದ ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿ. ಶಂಕರ್, ಕಾರ್ತಿಕ್, ಕಿರಣ್, ಕಿರಣ ಮತ್ತು ಪುನೀತ್ ಡೈರೆಕ್ಷನ್ ಟೀಮಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸುಧಾಕರ್ ಶೆಟ್ಟಿ ಈ ಚಿತ್ರದಲ್ಲಿ ಛಾಯಾಗ್ರಹಣದ ಕೆಲಸವನ್ನು ನಿಭಾಯಿಸಿದ್ದಾರೆ.

ಈ ಚಿತ್ರದ ಕಥಾ ವಸ್ತು `ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್’ ವಿಷಯವನ್ನು ಹೊಂದಿದೆ. ಇಲ್ಲಿ ಸಾಹಸ, ಪ್ರೀತಿ, ಭಾವನೆಗಳು ಸಹ ಸಮ್ಮಿಳಿತಗೊಂಡಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp