ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನಕ್ಕೆ 'ಸಖತ್' ಟೀಂ ನಿಂದ ಸ್ಪೆಷಲ್ ಗಿಫ್ಟ್!

"ಸಖತ್" ಸಿನಿಮಾ ಟೀಂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜನ್ಮದಿನವಾದ ಜುಲೈ 2ಕ್ಕೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು  ಸಿದ್ದವಾಗುತ್ತಿದೆ.  ನಿರ್ದೇಶಕ ಸುನಿ, ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಜುದಾ ಸ್ಯಾಂಡಿ ಸಂಗೀತವಿದೆ.

Published: 24th June 2020 10:55 AM  |   Last Updated: 24th June 2020 12:16 PM   |  A+A-


ಗೋಲ್ಡನ್ ಸ್ಟಾರ್ ಗಣೇಶ್

Posted By : Raghavendra Adiga
Source : The New Indian Express

"ಸಖತ್" ಸಿನಿಮಾ ಟೀಂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜನ್ಮದಿನವಾದ ಜುಲೈ 2ಕ್ಕೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲು  ಸಿದ್ದವಾಗುತ್ತಿದೆ.  ನಿರ್ದೇಶಕ ಸುನಿ, ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಜುದಾ ಸ್ಯಾಂಡಿ ಸಂಗೀತವಿದೆ.

ಈ ಹಿಂದೆ "ಈ ಹಿಂದೆ ಚಮಕ್ " ಎಂಬ ಹಿಟ್ ಚಿತ್ರ ಕೊಟ್ಟಿದ್ದ ಜೋಡಿ ಈಗ ಎರಡನೇ ಬಾರಿಗೆ ಒಂದಾಗಿದೆ. ಕೆವಿಎನ್ ಮತ್ತು ಸುಪ್ರೀತ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಜಂಟಿ ನಿರ್ಮಾಣದಲ್ಲಿ ಮೂಡಿಬರುತ್ತಿದೆ.

ದಕ್ಷಿಣ ಭಾರತದ ಖ್ಯಾತ ನಟಿ ಸುರಭಿ ಈ ಚಿತ್ರದ ಮೂಲಕಸ್ಯಾಂಡಲ್ ವುಡ್ ಗೆ ಎಂಟ್ರಿ ಆಗಲಿದ್ದಾರೆ. ಸಾಧು ಕೋಕಿಲಾ,, ಕುರಿ ಪ್ರತಾಪ್, ರಘುರಾಮ್, ಗಿರಿ ಮತ್ತು ಧರ್ಮಣ್ಣ ಮುಖ್ಯ ಪಾತ್ರವರ್ಗದಲ್ಲಿದ್ದಾರೆ. ಸಂತೋಷ್ ರೈ ಪತ್ತಾಜೆ  ಕ್ಯಾಮೆರಾ ಕೆಲಸ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. 

ಗಣೇಶ್ "ಸಖತ್" ಮಾತ್ರವಲ್ಲದೆ "ಕಿಟ್ಟಿ", "ಗಾಳಿಪಟ 2"  ಹಾಗೂ "ತ್ರಿಬಲ್ ರೈಡಿಂಗ್" ನಲ್ಲಿ ಸಹ ಅಭಿನಯಿಸುತ್ತಿದ್ದಾರೆ. ಮತ್ತೊಂದೆಡೆ, ಪುಷ್ಕರ್ ಫಿಲ್ಮ್ಸ್ ನಿರ್ಮಿಸುತ್ತಿರುವ ಶರಣ್ ಅಭಿನಯದ "ಅವತಾರ ಪುರುಷ" ಚಿತ್ರಕ್ಕೆ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರ ಈಗ ಶೂಟಿಂಗ್‌ನ ಕೊನೆಯ ಹಂತದಲ್ಲಿದೆ.

Stay up to date on all the latest ಸಿನಿಮಾ ಸುದ್ದಿ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp