ಈಶ್ವರನ್ ಸಿನಿಮಾದಲ್ಲಿ ನಾಗರಹಾವು; ನಟ ಸಿಂಬುಗೆ ಸಂಕಷ್ಟ!

ತಮಿಳುನಾಡಿನ ನಟ ಸಿಂಬು ತಮ್ಮ ಮುಂದಿನ ಸಿನಿಮಾದಲ್ಲಿ ನಾಗರಹಾವನ್ನು ಹಿಡಿದಿದ್ದ ದೃಶ್ಯ ಚಿತ್ರೀಕರಿಸಿದ್ದಕ್ಕಾಗಿ ನಟ ಸಿಂಬು ವಿರುದ್ಧ ಪ್ರಕರಣ ದಾಖಲಾಗಿದೆ.
ಈಶ್ವರನ್ ಸಿನಿಮಾದಲ್ಲಿ ನಾಗರಹಾವು; ನಟ ಸಿಂಬುಗೆ ಸಂಕಷ್ಟ!
ಈಶ್ವರನ್ ಸಿನಿಮಾದಲ್ಲಿ ನಾಗರಹಾವು; ನಟ ಸಿಂಬುಗೆ ಸಂಕಷ್ಟ!
Updated on

ತಮಿಳುನಾಡಿನ ನಟ ಸಿಂಬು ತಮ್ಮ ಮುಂದಿನ ಸಿನಿಮಾದಲ್ಲಿ ನಾಗರಹಾವನ್ನು ಹಿಡಿದಿದ್ದ ದೃಶ್ಯ ಚಿತ್ರೀಕರಿಸಿದ್ದಕ್ಕಾಗಿ ನಟ ಸಿಂಬು ವಿರುದ್ಧ ಪ್ರಕರಣ ದಾಖಲಾಗಿದೆ.

ನಟ ಸಿಂಬು ತಮ್ಮ ಮುಂದಿನ ಸಿನಿಮಾ ಈಶ್ವರನ್ ನಲ್ಲಿ ಕೋಬ್ರಾವನ್ನು ಮರದ ಮೇಲಿನಿಂದ ಹಿಡಿದು ಇನ್ನಿಬ್ಬರ ಸಹಾಯದಿಂದ ಗೋಣಿಚೀಲದಲ್ಲಿ ಹಾಕಿದ್ದ ದೃಶ್ಯ ಚಿತ್ರೀಕರಿಸಲಾಗಿದೆ. ಈ ದೃಶ್ಯಗಳ ಫೋಟೋ ಕೂಡ ವೈರಲ್ ಆಗತೊಡಗಿದೆ. ಈ ಚಿತ್ರೀಕರಣದಲ್ಲಿ ನಾಗರಹಾವನ್ನು ಬಳಕೆ ಮಾಡಿರುವುದು ನಿಜವಾಗಿ, ಆರೋಪ ಸಾಬೀತಾದಲ್ಲಿ ಅದು ವನ್ಯ ಜೀವಿ ರಕ್ಷಣೆ ಕಾಯ್ದೆಯ ಉಲ್ಲಂಘನೆಯಾಗಲಿದೆ. 

ವನ್ಯಜೀವಿ ರಕ್ಷಣಾ ಕಾಯ್ದೆಯ ಪ್ರಕಾರ ಹಾವುಗಳನ್ನು ಸಿನಿಮಾ ಚಿತ್ರೀಕರಣದಲ್ಲಿ ಬಳಕೆ ಮಾಡಲು ನಿರ್ಬಂಧಗಳಿವೆ. ಆದರೆ ನಟ ಸಿಂಬು ಅವರು ನಟಿಸುತ್ತಿರುವ ಸಿನಿಮಾದಲ್ಲಿ ಹಾವನ್ನು ಬಳಕೆ ಮಾಡಿರುವುದರ ವಿರುದ್ಧ ಚೆನ್ನೈ ಮೂಲದ ಪ್ರಾಣಿಗಳ ಹಕ್ಕು ಕಾರ್ಯಕರ್ತ ಹಾಗೂ ಪರ್ಫಾರ್ಮಿಂಗ್ ಅನಿಮಲ್ಸ್ ಉಪಸಮಿತಿಯ ಮಾಜಿ ಸದಸ್ಯರು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ಗೆ ದೂರು ದಾಖಲಿಸಿದ್ದರು. 

ಮೇಲ್ನೋಟಕ್ಕೆ ಈ ಹಾವು ನೈಜವಾಗಿರುವುದೆಂದು ಕಾಣಿಸುತ್ತದೆ. ಆದರೆ ಇದರ ನೈಜತೆ ಇನ್ನಷ್ಟೇ ಸಾಬೀತಾಗಬೇಕಿದೆ. ಮತ್ತುಬರುವ ಔಷಧ ನೀಡಿ ಪ್ರಾಣಿಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳುವುದನ್ನೂ ಸಹ ನಿರ್ಬಂಧಿಸಲಾಗಿದೆ. ಈ ಆರೋಪದ ಬಗ್ಗೆ ಈಶ್ವರನ್ ಸಿನಿಮಾ ತಂಡ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com