'ಟಾಮ್ ಅಂಡ್ ಜೆರಿ' ಕನ್ನಡ ಹಾಡಿಗೆ ಸಿಡ್ ಶ್ರೀರಾಮ್ ದನಿ!

ಸಂಭಾಷಣೆಗಾರ-ನಿರ್ದೇಶಕ ರಾಘವ್ ವಿನಯ್ ಶಿವಂಗಂಗೆ ನಿರ್ದೇಶಿಸುತ್ತಿರುವ "ಟಾಮ್ ಅಂಡ್ ಜೆರಿ" ಚಿತ್ರದ ಒಂದು ಹಾಡಿಗೆ ಖ್ಯಾತ ಗಾಯಕ ಸಿಡ್ ಶ್ರೀರಾಮ್ ಧ್ವನಿ ನೀಡಿದ್ದಾರೆ.

Published: 21st November 2020 11:04 AM  |   Last Updated: 21st November 2020 12:23 PM   |  A+A-


ಟಾಮ್ ಅಂಡ್ ಜೆರಿ ಚಿತ್ರದ ದೃಶ್ಯ

Posted By : Raghavendra Adiga
Source : The New Indian Express

ಸಂಭಾಷಣೆಗಾರ-ನಿರ್ದೇಶಕ ರಾಘವ್ ವಿನಯ್ ಶಿವಂಗಂಗೆ ನಿರ್ದೇಶಿಸುತ್ತಿರುವ "ಟಾಮ್ ಅಂಡ್ ಜೆರಿ" ಚಿತ್ರದ ಒಂದು ಹಾಡಿಗೆ ಖ್ಯಾತ ಗಾಯಕ ಸಿಡ್ ಶ್ರೀರಾಮ್ ಧ್ವನಿ ನೀಡೀದ್ದಾರೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿಅತಿಹೆಚ್ಚು ಜನಪ್ರಿಯ ಆಲ್ಬಂಗಳನ್ನು ರಚಿಸಿದ ಜನಪ್ರಿಯ ಸಂಗೀತಗಾರ, ಕನ್ನಡ ಚಿತ್ರವೊಂದರಲ್ಲಿ ಮೊದಲ ಬಾರಿಗೆ ಹಾಡಿನ ರೆಕಾರ್ಡಿಂಗ್ ಮಾಡುತ್ತಿದ್ದಾರೆ.

"ಕನ್ನಡ ಚಿತ್ರರಂಗದಲ್ಲಿ ಉತ್ತಮ ಓಪನಿಂಗ್ ಗಾಗಿ ಗಿ ಕಾಯುತ್ತಿದ್ದ ಸಿಡ್ ಶ್ರೀರಾಮ್, ಮ್ಯಾಥ್ಯೂಸ್ ಮನು ಸಂಯೋಜಿಸಿದ ಈ ಹಾಡಿನ ರಾಗವನ್ನು ಇಷ್ಟಪಟ್ಟಿದ್ದಾರೆ, ಅವರು ಸಾಹಿತ್ಯವನ್ನು ಸಹ ಬರೆದಿದ್ದಾರೆ. ಜನವರಿಯಲ್ಲಿ ಗಾಯಕ ರೆಕಾರ್ಡ್ ಮಾಡಿದ ಈ ಹಾಡು ತಯಾರಿದ್ದರೂ ಸಾಂಕ್ರಾಮಿಕ ರೋಗದಿಂದಾಗಿ ವಿವರ ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ ”ಎಂದು ನಿರ್ದೇಶಕ ಹೇಳಿದ್ದಾರೆ. ,“ ಇದು ಒಬ್ಬರೇ ಹಾಡಿರುವ ಹಾಡಾಗಿದ್ದು ನಾಯಕಿಯ ಪ್ರೇಮ ವೈಫಲ್ಯವನ್ನು ಬಿಂಬಿಸುವ ಗೀತೆಯಾಗಿದೆ. ಅಂತೆಯೇ ಈ ಸಂಪೂರ್ಣ ಹಾಡನ್ನು ತಪಾಂಬುಚಿ ಶೈಲಿಯಲ್ಲಿ ಟ್ಯೂನ್ ಮಾಡಲಾಗಿದೆ. ಚಿತ್ರವು ಐದು ಹಾಡುಗಳನ್ನು ಒಳಗೊಂಡಿದೆ, ಮತ್ತು ಸಿಡ್ ಶ್ರೀರಾಮ್ ಹಾಡಿದ ಈ ಹಾಡು ಚಿತ್ರದ ಮುಖ್ಯ ಅಂಶಗಳಲ್ಲಿ ಒಂದಾಗಿದೆ. "

ಕೆಜಿಎಫ್ ಚಾಪ್ಟರ್ 1ರ ಸಂಭಾಷಣೆ ಬರೆಯುವ ತಂಡದ ಭಾಗವಾಗಿದ್ದ ರಾಘವ್ ವಿನಯ್ ಶಿವಗಂಗೆ "ಟಾಮ್ ಮತ್ತು ಜೆರಿ" ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ರಾಜು ಶೇರಿಗಾರ್ ನಿರ್ಮಾಣದ ಈ ಚಿತ್ರಕ್ಕೆ ಜನಪ್ರಿಯ ಕಾರ್ಟೂನ್ ಸರಣಿಯ ಹೆಸರನ್ನು ಇಡಲಾಗಿದೆ. ಚಿತ್ರವು ಕಾಮಿಡಿ ಹಾಗೂ ಎಮೋಷನಲ್ ಮಿಶ್ರಣದ ಕಥೆಯನ್ನು ಹೊಂದಿದ್ದು ಫ್ರೆಂಡ್ ಶಿಪ್ ನ ವಿಚಾರಗಳನ್ನು ಪರಿಶೋಧಿಸುತ್ತದೆ.

ಚಿತ್ರವನ್ನು ವಿನಯ್ ಚಂದ್ರ ಸಹ ನಿರ್ಮಾಣ ಮಾಡಿದ್ದು :ಗಂಟುಮೂಟೆ: ಖ್ಯಾತಿಯ ನಿಸ್ಚಿತ್ ಮತ್ತು ಚೈತ್ರ ರಾವ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ರಿಧಿಸಿದ್ಧಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರಕ್ಕೆ ಸಂಕೇತ್ ಛಾಯಾಗ್ರಹಣ, ಸೂರಜ್ ಎಡಿಟಿಂಗ್ ಕೆಲಸವಿದೆ. ಅರ್ಜುನ್ ರಾಜ್ ಸಾಹಸ, ನೃತ್ಯ ಸಂಯೋಜನೆ ಮಾಡಿದ್ದಾರೆ.  ಸಧ್ಯ ಚಿತ್ರತಂಡ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಜನವರಿಯಲ್ಲಿ ಆಡಿಯೋ ಲಾಂಚ್ ನಡೆಸಲು ಮತ್ತು ಚಿತ್ರವನ್ನು 2021 ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ.

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp