ಡ್ರಗ್ಸ್ ಪ್ರಕರಣ: 'ರಾಮ್ ಲೀಲಾ' ನಿರ್ಮಾಪಕ ಸೌಂದರ್ಯ ಜಗದೀಶ್ ವಿಚಾರಣೆ
ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿಗೆ ನಿರ್ಮಾಪಕರೊಬ್ಬರನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿದೆ.
ಬೆಂಗಳೂರಿನ ಒರಾಯನ್ ಮಾಲ್ ಬಳಿ ಪಬ್ ಒಂದನ್ನು ಹೊಂದಿರುವ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ವಿಚಾರಣೆಗೆ ಒಳಪಟ್ಟಿದ್ದಾರೆ. ಮಂಗಳವಾರವೇ ನೋಟಿಸ್ ಪಡೆದಿದ್ದ ಅವರು ಬುಧವಾರ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ದಂಪತಿ ರಾಂ ಲೀಲಾ, ಅಪ್ಪು ಪಪ್ಪು ಸೇರಿ ಹಲವು ಚಿತ್ರಗಳ ನಿರ್ಮಾಪಕರಾಗಿದ್ದು, ಯಶವಂತಪುರ ಬಳಿಯ ಜೆಟ್ ಲ್ಯಾಗ್ ಎಂದು ಪಬ್ನ ಮಾಲಿಕತ್ವ ಹೊಂದಿದ್ದಾರೆ. ಜೆಟ್ ಲ್ಯಾಗ್ ಪಬ್ನಲ್ಲಿ ಡ್ರಗ್ಸ್ ಪಾರ್ಟಿಗಳು ನಡೆದಿರುವ ಅನುಮಾನದಡಿ ದಂಪತಿ ಯನ್ನು ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಅವರು ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ನಗರದ ರಾಯಲ್ ಮೀನಾಕ್ಷಿ ಮಾಲ್ ಮಾಲೀಕ ವಿ.ಗಣೇಶ್ ರಾವ್ ವಿಚಾರಣೆಗೆ ಸಿಸಿಬಿ ಕಚೇರಿಗೆ ಹಾಜರಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ರಾವ್ಗೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಮಾಡಿದ್ದ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದರು.
ಗಣೇಶ್ ರಾವ್ ಅವರು, ವಿಶಾಲ ಇಂಡಿಯಾ ಕಮರ್ಷಿಯಲ್ ಡೆವಲಪರ್ಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದು, ಸಂಸ್ಥೆಯಲ್ಲಿ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಮತ್ತು ಮಾಜಿ ಎಂಎಲ್‌ಸಿ ಕುಪೇಂದ್ರ ರೆಡ್ಡಿ ನಿರ್ದೇಶಕರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೌಂದರ್ಯ ಜಗದದೀಶ್ ದಂಪತಿ, ಮಾದಕ ಜಾಲ ನಂಟಿನ ಪ್ರಕರಣಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾದಕಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮನ್ನು ವಿಚಾರಣೆಗೆ ಒಳಪಡಿಸಲಿಲ್ಲ. ಬದಲಾಗಿ ಈ ಹಿಂದೆ ನಾವು ರಾಮ್ ಲೀಲಾ ಸಿನಿಮಾ ನಿರ್ಮಾಣ ಮಾಡಿದ್ದು, ಅದರಲ್ಲಿ ನಟಿ ಸಂಜನಾ ಗಲ್ರಾನಿ ನಟಿಸಿದ್ದರು. ರಾಮ್ ಲೀಲ್ ಚಿತ್ರದ ಕುರಿತು ತನಿಖಾಧಿಕಾರಿಗಳು ಮಾಹಿತಿ ಕೇಳಿದರು ಚಿತ್ರದಲ್ಲಿ ಸಂಜನಾಗೆ ಎಷ್ಟು ಹಣ ನೀಡಿದ್ದೀರಿ? ಚೆಕ್ನಲ್ಲಿ ಸಂಬಳ ಕೊಟ್ಟಿದ್ದೀರಾ? ಅಥವಾ ಕ್ಯಾಶ್ ನೀಡಿದ್ದೀರಾ? ಎಂದು ಪ್ರಶ್ನಿಸಿದರು. ಅವರು ಕೇಳಿದ ಎಲ್ಲಾ ಮಾಹಿತಿ ಗೂ ನಾವು ನಿಖರವಾಗಿ ಸಹಕರಿಸಿದ್ದಾಗಿ ಅವರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ