ಕನ್ನಡದ ಪ್ರಸಿದ್ಧ ಹಾಸ್ಯನಟ ರಾಕ್‌ಲೈನ್ ಸುಧಾಕರ್ ವಿಧಿವಶ

ಕನ್ನಡದ ಖ್ಯಾತ ಹಾಸ್ಯನಟರುಗಳಲ್ಲಿ ಒಬ್ಬರಾದ ರಾಕ್‌ಲೈನ್ ಸುಧಾಕರ್ ನಿಧನರಾಗಿದ್ದಾರೆ. ಸಿನಿಮಾ ಒಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಸೆಟ್‌ನಲ್ಲಿಯೇ ಅವರು ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

Published: 24th September 2020 12:07 PM  |   Last Updated: 24th September 2020 01:03 PM   |  A+A-


Rockline sudhakar

ರಾಕ್ ಲೈನ್ ಸುಧಾಕರ್

Posted By : Shilpa D
Source : Online Desk

ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯನಟರುಗಳಲ್ಲಿ ಒಬ್ಬರಾದ ರಾಕ್‌ಲೈನ್ ಸುಧಾಕರ್ ನಿಧನರಾಗಿದ್ದಾರೆ. ಸಿನಿಮಾ ಒಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಸೆಟ್‌ನಲ್ಲಿಯೇ ಅವರು ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಇತ್ತೀಚೆಗಷ್ಟೆ ನಟ ರಾಕ್‍ಲೈನ್ ಸುಧಾಕರ್ ಕೊರೊನಾ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನಂತರ ಸಿನಿಮಾ ಕೆಲಸಗಳಲ್ಲಿ ಸುಧಾಕರ್ ಸಕ್ರಿಯರಾಗಿದ್ದರು.

ಇಂದು ಸಹ ಸುಧಾಕರ್ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಆದರೆ ಸುಧಾಕರ್ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಸಿನಿಮಾ ಶೂಟಿಂಗ್ ವೇಳೆ ಹೃದಯಾಘಾತವಾಗಿ ಸುಧಾರಕ್ ವಿಧಿವಶರಾಗಿದ್ದಾರೆ. ಈ ಕುರಿತು ಖುದ್ದು ಟ್ವೀಟ್ ಮಾಡುವ ಮೂಲಕ ನಿರ್ದೇಶಕ ಸುನಿ ಮಾಹಿತಿ ನೀಡಿದ್ದಾರೆ.

“2020ರ ರೌದ್ರಾವತಾರ ಮುಂದುವರೆದಿದೆ.. ಸಿನಿಕಲಾವಿದರಾದ ರಾಕ್ ಲೈನ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ.. ಅವರ ಆತ್ಮಕ್ಕೆ ಶಾಂತಿ ಸಿಗಲಿ... ಓಂ ಶಾಂತಿ..’” ಎಂದು ನಿರ್ದೇಶಕ ಸುನಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಅಜಿತ್, ಉಡುಂಬಾ, ಟೋಪಿವಾಲಾ, ಜೂಮ್, ಚಮಕ್, ಪಟಾಕಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಕ್​ಲೈನ್​ ಸುಧಾಕರ್ ನಟಿಸಿದ್ದರು. ಅವರು ಮಾಡುತ್ತಿದ್ದ ಕಾಮಿಡಿ ಪಾತ್ರಗಳು ಎಲ್ಲರ ಗಮನ ಸೆಳೆದಿದ್ದವು.

Stay up to date on all the latest ಸಿನಿಮಾ ಸುದ್ದಿ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp